ಬಿಜೆಪಿ ವಕ್ತಾರನ ಮೊಬೈಲ್‌ನಿಂದ ಅಶ್ಲೀಲ ಫೋಟೋ ವೈರಲ್‌..!

Kannadaprabha News   | Asianet News
Published : Jun 30, 2021, 03:44 PM ISTUpdated : Jun 30, 2021, 03:46 PM IST
ಬಿಜೆಪಿ ವಕ್ತಾರನ ಮೊಬೈಲ್‌ನಿಂದ ಅಶ್ಲೀಲ ಫೋಟೋ ವೈರಲ್‌..!

ಸಾರಾಂಶ

* ವಿವಿಧ ವಾಟ್ಸಾಪ್‌ ಗ್ರೂಪ್‌ಗಳಿಗೆ ಹರಿಬಿಡಲಾಗಿದೆ ಅಶ್ಲೀಲ ಫೋಟೋ * ಬಿಜೆಪಿ ಕಾರ್ಯಕರ್ತರಿಗೆ ತೀವ್ರ ಮುಜುಗರ * ಬೆಳಗಾವಿ ನಗರದ ಖಡೆ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು  

ಬೆಳಗಾವಿ(ಜೂ.30): ನಗರ ಬಿಜೆಪಿ ಮಾಧ್ಯಮ ವಕ್ತಾರನ ವಾಟ್ಸಾಪ್‌ನಿಂದ ಬೇರೆ ಬೇರೆ ವಾಟ್ಸಾಪ್‌ ಗ್ರೂಪ್‌ಗಳಿಗೆ ಅಶ್ಲೀಲ ಫೋಟೋ ಹರಿಬಿಟ್ಟಿರುವುದರಿಂದ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 

ಮಾಧ್ಯಮ ವಕ್ತಾರ ಶರದ್ ಪಾಟೀಲ್‌ ಎಂಬುವವರ ನಂಬರ್‌ನಿಂದ ವಾಟ್ಸಾಪ್‌ ಗ್ರೂಪ್‌ಗೆ ವಯಸ್ಸನ್ನು ಸೋಲಿಸಬೇಕಾದಲ್ಲಿ ಹವ್ಯಾಸಗಳು ಜೀವಂತವಾಗಿರಬೇಕು ಎಂದು ಹಿಂದಿಯಲ್ಲಿ ಬರೆದ ಮಹಿಳೆಯೋರ್ವಳು ಬೆತ್ತಲೆಯಾಗಿರುವ ಚಿತ್ರವನ್ನು ವಿವಿಧ ವಾಟ್ಸಾಪ್‌ ಗ್ರೂಪ್‌ಗಳಿಗೆ ಹರಿಬಿಡಲಾಗಿದೆ. ಇದರಿಂದಾಗಿ ಬಿಜೆಪಿ ನಾಯಕರು ಅಷ್ಟೆ ಅಲ್ಲ, ಕಾರ್ಯಕರ್ತರು ತೀವ್ರ ಮುಜುಗರಗೊಳ್ಳುವಂತೆ ಮಾಡಿದೆ.

ಇನ್‌ಸ್ಟ್ರಾಗ್ರಾಂನಲ್ಲಿ ಅಪ್ರಾಪ್ತೆಯರ ಅಶ್ಲೀಲ ಫೋಟೋ ಶೇರ್‌ ಮಾಡಿದ ವಿದ್ಯಾರ್ಥಿ

ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಯುವತಿಯ ಬೆತ್ತಲೇ ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಬಿಜೆಪಿ ಮಾಧ್ಯಮ ವಕ್ತಾರ ಶರದ್ ಪಾಟೀಲ್‌, ಸೋಮವಾರ ರಾತ್ರಿ ತಮ್ಮ ಮೊಬೈಲ್‌ ಕಳೆದು ಹೋಗಿದೆ ಎಂದು ನಗರದ ಖಡೆ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ