ತಂತ್ರಜ್ಞಾನ ಬಳಸಿಕೊಂಡು ಹೆಚ್ಚು ಮತದಾನ ಮಾಡಿಸಿ

By Kannadaprabha News  |  First Published Mar 11, 2023, 5:20 AM IST

ಚುನಾವಣಾ ಸಮಯದಲ್ಲಿ ವಿವಿಧ ರೀತಿಯ ತಂತ್ರಜ್ಞಾನ ಬಳಕೆ ಮಾಡಿಕೊಂಡು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಿ ಮತದಾನ ಮಾಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.


  ಮೈಸೂರು :  ಚುನಾವಣಾ ಸಮಯದಲ್ಲಿ ವಿವಿಧ ರೀತಿಯ ತಂತ್ರಜ್ಞಾನ ಬಳಕೆ ಮಾಡಿಕೊಂಡು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಿ ಮತದಾನ ಮಾಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.

ಜಿಪಂನ ಡಿ. ದೇವರಾಜ ಅರಸ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾರರ ಸಾಕ್ಷರತಾ ಸಂಘಗಳ ತಾಲೂಕು ಮಟ್ಟದ ತರಬೇತುದಾರರ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ರನ್ನು ಮತದಾನದಲ್ಲಿ ಭಾಗಿಯಾಗುವಂತೆ ಮಾಡಬೇಕು. ತಾಲೂಕು ಮಟ್ಟದಲ್ಲಿ ಪ್ರತಿಯೊಬ್ಬ ಶಿಕ್ಷಕರ ಪಾತ್ರವು ಮುಖ್ಯ. ಶಾಲಾ ಮಟ್ಟದಲ್ಲಿ ಚುನಾವಣೆಯ ಬಗ್ಗೆ ಅರಿವು ಮೂಡಿಸಬೇಕು. ಯಾರೊಬ್ಬರು ಮತದಾನವನ್ನು ಮಾಡದೇ ಉದಾಸೀನತೆಯಿಂದ ನಡೆದುಕೊಳ್ಳದ ರೀತಿ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

Latest Videos

undefined

18 ವರ್ಷ ಮೇಲ್ಪಟ್ಟಮತದಾರರು, ವಯಸ್ಕ ಹಾಗೂ ಪೌರ ಕಾರ್ಮಿಕರಲ್ಲಿಯೂ ಮತದಾನದ ಅರಿವು ಮೂಡಿಸಿ ಹೆಚ್ಚಿನ ಮತದಾನ ಮಾಡಿಸಬೇಕು. ನಗರ ಪ್ರದೇಶ, ಗ್ರಾಮೀಣ ವಿಭಾಗ ಹಾಗೂ ಬುಡಕಟ್ಟು ಜನಾಂಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ಕಳೆದ ಚುನಾವಣಾ ಸಂದÜರ್ಭದಲ್ಲಿ ನಡೆದಿದೆ. ಈ ಬಾರಿ ಪ್ರತಿಯೊಂದು ಪ್ರದೇಶಗಳಿಂದಲೂ ಹೆಚ್ಚಿನ ಮತದಾನ ಮಾಡಿಸಬೇಕು. ಹೆಚ್ಚಾಗಿ ಬುಡಕಟ್ಟು ಜನಾಂಗಗಲ್ಲಿ ಮತದಾನದ ಅರಿವು ಮೂಡಿಸುವುದು ನಮ್ಮ ಪ್ರಮುಖ ಕರ್ತವ್ಯವಾಗಿದೆ. ನಗರ ವಿಭಾಗಗಳಲ್ಲಿ ವಿವಿಧ ರೀತಿಯ ಕಾರ್ಯಗಾರ ನಡೆಸಿ ಚುನಾವಣೆಯ ಅರಿವನ್ನು ಮೂಡಿಸಬೇಕು ಎಂದು ಅವರು ಸೂಚಿಸಿದರು.

ಚುನಾವಣಾ ವೇಳೆ ಮತಗಟ್ಟೆಗಳಲ್ಲಿ ಹಿರಿಯರು ಮತ್ತು ಅಂಗವಿಕಲರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ ಕಂಡು ಬಂದಲ್ಲಿ ನೇರವಾಗಿ ನಮಗೆ ತಿಳಿಸಿ ಎಂದರು.

ಚುನಾವಣಾ ಗೀತೆಗಳನ್ನು ಶಾಲೆ ಕಾಲೇಜುಗಳಲ್ಲಿ ಹಾಡಿಸುವುದು, ಚುನಾವಣಾ ಸಂಬಂಧಿತ ನೃತ್ಯ ಸಂಯೋಜನೆಯನ್ನು ಮಾಡಿ ಗ್ರಾಮೀಣ ವಿಭಾಗಳಲ್ಲಿ ಕಾರ್ಯಕ್ರಮ ನಡೆಸಿ ಮತದಾನದ ಅರಿವನ್ನು ಮೂಡಿಸಬೇಕು. ಪ್ರತಿಯೊಂದು ದಾಖಲೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿದೆ. ಆದ್ದರಿಂದ ಪ್ರತಿಯೊಂದು ದಾಖಲೆಯನ್ನು ಸಂಪೂರ್ಣವಾಗಿ ಸಿದ್ದಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಬಿಇಒ ಕೃಷ್ಣ ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಪ್ರತಿ ಕಾಲೇಜು ಹಂತದಲ್ಲಿ ಮತದಾರರ ಸಾಕ್ಷರತಾ ಸಂಘ ಸ್ಥಾಪಿಸಿ ಅರಿವು ಮೂಡಿಸಲಾಗುತ್ತಿದೆ. ಆನ್‌ಲೈನ್‌ಲ್ಲಿಯೂ ತಮ್ಮ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದು. ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಕಾರ್ಯಗಾರದಲ್ಲಿ ಜಿಪಂ ಸಹಾಯಕ ನಿರ್ದೇಶಕ ವಿಶ್ವನಾಥ್‌, ಜಿಲ್ಲಾ ಮಟ್ಟದ ನೋಡಲ್‌ ಅಧಿಕಾರಿ ನಾಗರಾಜಯ್ಯ, ಮಾಸ್ಟರ್‌ ತರಬೇತಿದಾರರಾದ ಮಹದೇವಯ್ಯ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ತಾಲೂಕುಗಳ ಶಾಲಾ ಶಿಕ್ಷಕರು ಇದ್ದರು.

click me!