ದಾವಣಗೆರೆ: ವಿನೂತನ ಮತದಾನಕ್ಕೆ ಸಾಕ್ಷಿಯಾದ 16 ನೇ ವಿಧಾನಸಭಾ ಚುನಾವಣೆ

By Ravi Janekal  |  First Published Apr 29, 2023, 1:30 PM IST

16 ನೇ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಚುನಾವಣಾ ಆಯೋಗವು ಇದೇ ಮೊದಲ ಭಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ, ವಿಶೇಷಚೇತನರಿಗೆ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದು ಈ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರು ಶನಿವಾರ ದಾವಣಗೆರೆ 107. ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ 40 ರ ವ್ಯಾಪ್ತಿಯಲ್ಲಿ ವೀಕ್ಷಣೆ ಮಾಡಿದರು.


-  ವರದರಾಜ್

ದಾವಣಗೆರೆ; (ಏ. 29) : 16 ನೇ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಚುನಾವಣಾ ಆಯೋಗವು ಇದೇ ಮೊದಲ ಭಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ, ವಿಶೇಷಚೇತನರಿಗೆ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದು ಈ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರು ಶನಿವಾರ ದಾವಣಗೆರೆ 107. ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ 40 ರ ವ್ಯಾಪ್ತಿಯಲ್ಲಿ ವೀಕ್ಷಣೆ ಮಾಡಿದರು.

Latest Videos

undefined

 ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು 27566 ಮತ್ತು ವಿಶೇಷ ಚೇತನ 19224 ಮತದಾರರನ್ನು ಗುರುತಿಸಿ ಇದರಲ್ಲಿ 80 ವರ್ಷ ಮೇಲ್ಪಟ್ಟ 20687 ಹಾಗೂ ವಿಶೇಷಚೇತನರು 17610 ಮತದಾರರಿಗೆ ನಮೂನೆ-12ಡಿ ವಿತರಣೆ ಮಾಡಲಾಗಿತ್ತು. ಇದರಲ್ಲಿ ಮನೆಯಿಂದ ಮತದಾನ ಮಾಡಲು ದೃಢೀಕರಣವನ್ನು 1870 ಹಿರಿಯ ನಾಗರೀಕರು ಮತ್ತು 510 ವಿಶೇಷಚೇತನರು 12ಡಿ ಭರ್ತಿ ಮಾಡಿ ಏಪ್ರಿಲ್ 17 ರೊಳಗಾಗಿ ಒಟ್ಟು 2380 ಮತದಾರರು ನೀಡಿದ್ದರು. ಮನೆಯಿಂದ ಮತದಾನ ಮಾಡಲು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 87 ತಂಡಗಳನ್ನು ರಚಿಸಲಾಗಿರುತ್ತದೆ. ಪ್ರತಿ ತಂಡದಲ್ಲಿ ಮತದಾನ ಅಧಿಕಾರಿ, ಸೂಕ್ಷ್ಮ ಪರಿವೀಕ್ಷಕ, ಮತಗಟ್ಟೆ ಮಟ್ಟದ ಅಧಿಕಾರಿ, ಓರ್ವ ಪೊಲೀಸ್ ಸಿಬ್ಬಂದಿ, ಗ್ರೂಪ್ ಡಿ ಹಾಗೂ ಒಬ್ಬ ವೀಡಿಯೋಗ್ರಾಫರ್ ನೇಮಕ ಮಾಡಲಾಗಿದೆ.

 ನಾಳೆ ಹೊನ್ನಾಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ
 
 ಮತದಾನ ಮಾಡಿಸಲು ಮೊದಲ ಭೇಟಿಯನ್ನು ಏಪ್ರಿಲ್ 29 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಸಮಯ ನಿಗಧಿ ಮಾಡಲಾಗಿದೆ. ಮತ್ತು ಅವಶ್ಯವಿದ್ದಲ್ಲಿ ಮಾತ್ರ ಮೇ 2 ರಂದು ಎರಡನೇ ಭೇಟಿ ಇರುತ್ತದೆ.

 ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರು ದಾವಣಗೆರೆ ದಕ್ಷಿಣ ಕ್ಷೇತ್ರದ ಮತಗಟ್ಟೆ ಸಂಖ್ಯೆ 40 ರ ವ್ಯಾಪ್ತಿಯಲ್ಲಿ ಬರುವ ದೇವರಾಜ ಅರಸ್ `ಬಿ` ಬ್ಲಾಕ್‍ನಲ್ಲಿ ಖಮರುನ್ನೀಸಾ 82 ವರ್ಷ, ಕೇಶವಮೂರ್ತಿ 83 ವರ್ಷ ಮತ್ತು ಗೌರಮ್ಮ ಐರಾಣಿ 98 ಇವರು ಮನೆಯಿಂದಲೇ ಮತದಾನ ಮಾಡಿದ ಪ್ರಕ್ರಿಯೆಯನ್ನು ವೀಕ್ಷಣೆ ಮಾಡಿದರು.

ಚುನಾವಣಾ ಆಯೋಗವು ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರು ಸರತಿ ಸಾಲಿನಲ್ಲಿ ಬಂದು ನಿಂತು ಮತ ಹಾಕವುದು ಕಷ್ಟಕರವಾಗಬಹುದೆಂದು, ಇವರು ಅಂಚೆ ಮತಪತ್ರದ ಮೂಲಕ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಮತಗಟ್ಟೆ ಅಥವಾ ಮನೆಯ ಆಯ್ಕೆಯನ್ನು ಮತದಾರರಿಗೆ ನೀಡಲಾಗಿರುವುದು ಯಾವ ರೀತಿ ಸಹಕಾರಿಯಾಗಿದೆ ಎಂಬ ಅಭಿಪ್ರಾಯವನ್ನು ಜಿಲ್ಲಾಧಿಕಾರಿಯವರು ಮತದಾರರಿಂದ ಪಡೆದುಕೊಂಡರು. 

ವೃದ್ಧರು, ಅಂಗವಿಕಲರ ಮತದಾನ ಇಂದಿನಿಂದಲೇ ಶುರು

ಇದರಲ್ಲಿ ಕೇಶವಮೂರ್ತಿಯವರು 83 ವರ್ಷ ವಯೋಮಾನದವರಾಗಿದ್ದು ಕಳೆದ ಒಂದು ವರ್ಷದಿಂದ ಬಲಗೈ ಗಾಯಾಳುವಾಗಿ ಮಲಗಿದಲ್ಲಿಯೇ ಇರುತ್ತಾರೆ. ಇವರ ಸೇವೆಯನ್ನು ಮಾಡಲಾಗುತ್ತಿದೆ ಎಂದು ಅವರ ಪತ್ನಿ ವಿಶಾಲಾಕ್ಷಿ ಮನೆಯಿಂದಲೇ ಮತದಾನ ವ್ಯವಸ್ಥೆ ಹಾಸಿಗೆ ಹಿಡಿದಿರುವ ಎಷ್ಟೋ ಹಿರಿಯ ನಾಗರೀಕರಿಗೆ ಮತದಾನ ಹಕ್ಕು ಚಲಾಯಿಸಲು ತುಂಬಾ ಸಹಕಾರಿಯಾಗಿದ್ದು ಚುನಾವಣಾ ಆಯೋಗದ ಕ್ರಮ ಪ್ರಶಂಸನೀಯ ಎಂದರು.  

click me!