ಬ್ಲಾಕ್ ಮ್ಯಾಜಿಕ್: ಕಾಕತಾಳೀಯ ಎನ್ನುವಂತೆ ಎಲೆಕ್ಷನ್ ನಲ್ಲಿ ಸೋತ ಅಭ್ಯರ್ಥಿ..!

Published : Jan 09, 2021, 03:29 PM IST
ಬ್ಲಾಕ್ ಮ್ಯಾಜಿಕ್: ಕಾಕತಾಳೀಯ ಎನ್ನುವಂತೆ ಎಲೆಕ್ಷನ್ ನಲ್ಲಿ ಸೋತ ಅಭ್ಯರ್ಥಿ..!

ಸಾರಾಂಶ

ಗ್ರಾ.ಪಂ ಚುನಾವಣೆಯಲ್ಲಿ ಅಭ್ಯರ್ಥಿ ಸೋಲಿಸಲು ಊಡೂ ಮಾದರಿಯ ವಾಮಾಚಾರ/ ಕಾಕತಾಳೀಯ ಎನ್ನುವಂತೆ ಎಲೆಕ್ಷನ್ ನಲ್ಲಿ ಸೋತ ಅಭ್ಯರ್ಥಿ..!

ವಿಜಯಪುರ, (ಜ.09): ಜಿಲ್ಲೆಯಲ್ಲಿ ಊಡೂ ಮಾದರಿಯ ವಾಮಾಚಾರ ಸದ್ದು ಮಾಡಿದೆ. ಗ್ರಾ.ಪಂ ಚುನಾವಣೆಯಲ್ಲಿ ಅಭ್ಯರ್ಥಿಯನ್ನ ಸೋಲಿಸಲು ಗೊಂಬೆಗೆ ಭಾವಚಿತ್ರ ಅಂಟಿಸಿ ಸಮಾಧಿಯೊಂದರ ಮೇಲೆ ಇಟ್ಟು ಊಡೂ ಮಾದರಿಯ ವಾಮಾಚಾರ ಮಾಡಲಾಗಿದೆ.

 ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿವಪುರ ಗ್ರಾಮದಲ್ಲಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಸಲಿಂಗಪ್ಪ ಜೆಟ್ಟಪ್ಪ  ಮಕಾಳಿ ಊರ್ಫ್ ಬಸಲಿಂಗಪ್ಪ ಸಾಹುಕಾರ್ ಭಾವಚಿತ್ರಕ್ಕೆ ಮುಳ್ಳು ಚುಚ್ಚಿ ವಾಮಾಚಾರ ಮಾಡಿದ ಊಡೂ ಗೊಂಬೆ ಪತ್ತೆಯಾಗಿದೆ. 

ಗೊಂಬೆಗೆ ಬಸಲಿಂಗಪ್ಪ ಭಾವಚಿತ್ರವನ್ನ ಮುಳ್ಳಿನ ಮೂಲಕ ಚುಚ್ಚಿ ಅಂಟಿಸಿರುವ ದುಷ್ಕರ್ಮಿಗಳು ಊರ ಹೊರಗಿನ ಸಮಾಧಿ ಮೇಲೆ ಇಟ್ಟು ಕುಂಕುಮದಿಂದ ವಾಮಾಚಾರ ನಡೆಸಿದ್ದಾರೆ. 

ಮತಗಟ್ಟೆ ಗೇಟ್‌ಗೆ ಮಡಿಕೆ, ತಾಯತ.. ಮೈಸೂರಿನಲ್ಲಿ ಮಾಟಮಂತ್ರ!

ಇನ್ನು ಇದನ್ನು ಕಂಡ ಅಭ್ಯರ್ಥಿ ಬಸಲಿಂಗಪ್ಪ ಶಾಕ್ ಆಗಿದ್ರೆ, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇನ್ನು ಕಾಕತಾಳೀಯವೋ ಅಥವಾ ವಾಮಾಚಾರದ ಎಫೆಕ್ಟೋ ಗೊತ್ತಿಲ್ಲ ಚುನಾವಣೆಯಲ್ಲಿ ಬಸಲಿಂಗಪ್ಪ ಮಕಾಳಿ ಸೋತಿದ್ದಾರೆ.

 ಸೋತ ಅಭ್ಯರ್ಥಿ ಬಸಲಿಂಗಪ್ಪ ಗ್ರಾಪಂ ಚುನಾವಣಾ ನಾಮನೇಶನ ನೀಡುವ ಮುನ್ನ ಗ್ರಾಮದಲ್ಲಿ ಉತ್ತರ ಪ್ರದೇಶ ಮೂಲದ ತಾಂತ್ರಿಕರು ಬಂದಿದ್ದರು ಎನ್ನಲಾಗಿದೆ.

 ಇನ್ನು ಬಸಲಿಂಗಪ್ಪ ಮಕಾಳಿ ಈ ಚುನಾವಣೆಯಲ್ಲಿ 395 ಮತಪಡೆದು ಸೋತಿದ್ದು, ಗ್ರಾಮದಲ್ಲಿ ವಾಮಾಚಾರದಿಂದಲೇ ಸೋತಿರಬೇಕು ಅಂತಾ ಜನರು ಬೆಚ್ಚಿಬಿದ್ದಿದ್ದಾರೆ. ತಾಲೂಕಾಡಳಿತ ಮೂಕಿಹಾಳ ಪಂಚಾಯ್ತಿಯ ಶಿವಪುರ ಗ್ರಾಮಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

PREV
click me!

Recommended Stories

Bengaluru New Year 2026: ಎಂಜಿ ರೋಡ್ ಬಿಟ್ಟು ಕೋರಮಂಗಲಕ್ಕೆ ಜನಸಾಗರ; ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಜೊತೆ ಟೋಯಿಂಗ್ ಚಾಲಕನ ಕಿರಿಕ್!
ಹೊಸ ವರ್ಷಕ್ಕೆ ಕೆಲವೇ ಹೊತ್ತಲ್ಲಿ ಶಾಕ್! ಕೊಳ್ಳೇಗಾಲದಲ್ಲಿ ಭೀಕರ ಅಗ್ನಿ ಅವಘಡ; ಬೇಕರಿ ಸೇರಿದಂತೆ ಮೂರು ಅಂಗಡಿಗಳು ಭಸ್ಮ!