'ಚಿಲ್ಲರೆ ಕೆಲಸ ಬಿಡು': ಅಧಿಕಾರಿ ವಿರುದ್ಧ ಮುನಿಸ್ವಾಮಿ ಗರಂ..!

By Kannadaprabha News  |  First Published Jan 9, 2021, 10:52 AM IST

ಚಿಲ್ಲರೆ ಕೆಲಸ ಮಾಡುವುದನ್ನು ಬಿಡು | ಕೈಗಾರಿಕೆ ಇಲಾಖೆ ಅಧಿಕಾರಿಗೆ ಸಂಸದ ಮುನಿಸ್ವಾಮಿ ತರಾಟೆ


ಕೋಲಾರ(ಜ.09): ನೀನು ಮಾಡಿರೋದು ಚಿಲ್ಲರೆ ಕೆಲಸ, ನೀನು ಮೊದಲು ಚಿಲ್ಲರೆ ಕೆಲಸ ಮಾಡುವುದನ್ನು ಬಿಡು ಎಂದು ಸಂಸದ ಮುನಿಸ್ವಾಮಿ ಕೈಗಾರಿಕೆ ಇಲಾಖೆಯ ಅಧಿಕಾರಿ ರವಿಚಂದ್ರಗೆ ಬೆವರಿಳಿಸಿದರು.

ಜಿಪಂ ಕೆಡಿಪಿ ಸಭೆಯಲ್ಲಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಅಲ್ಲಾಡಿಸ್ಕೊಂಡು ಬಂದ್ಬಿಟ್ಟಮೀಟಿಂಗ್‌ಗೆ, ಬೇಕಾಗಿರೋ ಮಾಹಿತಿನ ಆಫೀಸ್‌ನಲ್ಲೇ ಬಿಟ್ಟು ಬಂದ್ಬಿಟ್ಟ. ನೀನು ಆಫೀಸ್‌ನಲ್ಲೇ ಇದ್ದುಬಿಡು, ಇಲ್ಲಿಗ್ಯಾಕೆ ಬಂದೆ ಇಲ್ಲಿಗೆ ಎಂದು ಪ್ರಶ್ನಿಸಿದರು.

Tap to resize

Latest Videos

ಇತ್ತೀಚೆಗೆ ನಡೆದ ವಿಸ್ಟ್ರಾನ್‌ ಕಂಪನಿ ವಿಚಾರದಿಂದಾಗಿ ಸಿಟ್ಟಿಗೆದಂತೆ ಕಾಣುತ್ತಿದ್ದ ಮುನಿಸ್ವಾಮಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ನಿನ್ನ ಜೊತೆ ಯಾರಾರ‍ಯರು ಭಾಗಿಯಾಗಿದ್ದಾರೆ ಅಂತ ಗೊತ್ತಿದೆ, ನಾಚಿಕೆ ಆಗ್ಬೇಕು ನಿಮಗೆ. ಬಡವರಿಗೆ, ಎಸ್ಸಿಗಳಿಗೆ ಒಂದು ರೀತಿ ಭೂಮಿ ಕೊಡಿಸ್ತಿಯ, ಶ್ರೀಮಂತರು ಬಂದ್ರೆ ಎಲ್ಲಿ ಜಾಗ ಕೊಡಿಸ್ತಿಯ ಅಂತ ನನಗೆ ಗೊತ್ತಿದೆ ಎಂದರು.

ಜಿಲ್ಲೆಗೆ ವಿಸ್ಟ್ರಾನ್‌ ಘಟನೆ ಕಪ್ಪುಚುಕ್ಕೆ

ಕೋಲಾರದಲ್ಲಿ ಎಷ್ಟುವರ್ಷದಿಂದ ಕೆಲಸ ಮಾಡ್ತಿದೀಯ, ನಿನ್ನತ್ರ ಮಾಹಿತಿ ಇಲ್ಲ ಅಂದ್ರೆ ಎಲ್ಲಾದ್ರೂ ಬೇರೆ ಕಡೆ ಹೋಗ್ಬಿಡು. ಏಯ್‌ ಹುಷಾರ್‌ ಹಿಂದೆ ಇದೆಲ್ಲಾ ನಡಿತಿತ್ತು, ಯಾರೂ ಏನೂ ಕೇಳೋಲ್ಲ ಅಂತ ಸಭೆæಗೆ ಬಂದಿದ್ದೀಯಾ. ವಿಸ್ಟಾ್ರನ್‌ ಗದ್ದಲದಿಂದ ಕೋಲಾರಕ್ಕೆ ಕಪ್ಪು ಚುಕ್ಕೆ ಬಂದಿದೆ. ಪ್ರಪಂಚದಲ್ಲೇ ಕೋಲಾರ ಜಿಲ್ಲೆ ರಾರಾಜಿಸುವಂತೆ ಮಾಡಿದಿರಿ. ಇರೋ ಕೆರೆಗಳನ್ನ ಮುಚ್ಚಿ ಓಡಾಡೋದಕ್ಕೆ ರಸ್ತೆ ಮಾಡಿಕೊಟ್ಟಿದಿಯ ಇದೆಲ್ಲಾ ನನಗೂ ಗೊತ್ತಿದೆ ಎಂದರು.

10,000 ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಪ್ರಸ್ತಾವ

ವಿಸ್ಟಾ್ರನ್‌ ಕಂಪನಿ ಗಲಾಟೆ ವೇಳೆ ನೀನು ಏನು ಮಾಡ್ತಿದ್ದೆ. ಲೇಬರ್‌ ಪೇಮೆಂಟ್‌ ಆಗಿಲ್ಲ ಅಂತ ನಿನಗೆ ಗೊತ್ತು, ನಿನ್ನ ಪೇಮೆಂಟ್‌ ಬಗ್ಗೆ ನಿನಗೆ ಗೊತ್ತು, ನೀವೆಲ್ಲ ಕೋಲಾರಕ್ಕೆ ಬರಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!