ಚಾಮರಾಜನಗರ ಜಿಲ್ಲೆ ಹೆಚ್ಚು ಅರಣ್ಯ ಪ್ರದೇಶ ತುಂಬಿದೆ. ಶೇ.26 ರಷ್ಟು ಮಾತ್ರ ಕೃಷಿಭೂಮಿ ಇದೆ. ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವ 1490 ಕೋಟಿ ವೆಚ್ಚದ ಯೋಜನೆಗೆ ಚಾಲನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸೋಮಣ್ಣ
ಗುಂಡ್ಲುಪೇಟೆ(ಡಿ.08): ಬಿಜೆಪಿ ಜನಸಂಕಲ್ಪ ಯಾತ್ರೆಗೂ ಮುನ್ನ ಬಿಜೆಪಿ ಸರ್ಕಾರ ಬರಲು ಕಾರಣರಾದ ನಿಮ್ಮನ್ನು(ಕಾರ್ಯಕರ್ತರು) ಗೌರವಿಸಲು ಹಾಗೂ ಡಬಲ್ ಇಂಜಿನ್ ಸರ್ಕಾರಗಳ ಅಭಿವೃದ್ಧಿ ಹಾಗೂ ಜಿಲ್ಲೆಗೆ ವಿಶೇಷ ಯೋಜನೆ ಹೇಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಜಿಲ್ಲೆಗೆ ಡಿ.12 ರಂದು ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು. ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಬುಧವಾರ ಬಿಜೆಪಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಡಿ.12 ರಂದು ಜಿಲ್ಲಾ ಕೇಂದ್ರದಲ್ಲಿ ನಡೆವ ಸರ್ಕಾರಿ ಸಭೆಯಲ್ಲಿ ಹಲವು ಯೋಜನೆ ಘೋಷಣೆಯಾಗಲಿವೆ ಎಂದರು.
ಜಿಲ್ಲೆಯ ಜನರು ಮುಗ್ಧರು ಮತ್ತು ಸ್ವಾಭಿಮಾನಿಗಳು ಹಾಗಾಗಿ ಡಿ.ಎಂ. ನಂಜುಂಡಪ್ಪ ವರದಿಯಂತೆ ಜಿಲ್ಲೆ ಹಿಂದುಳಿದಿರುವ ಕಾರಣಕ್ಕೆ ಅಭಿವೃದ್ಧಿಗೆ ನಾನು ಸಚಿವನಾಗಿ ಪಣ ತೊಟ್ಟಿದ್ದೇನೆ ಎಂದು ಭರವಸೆ ನೀಡಿದರು. ಚಾಮರಾಜನಗರ ಜಿಲ್ಲೆ ಹೆಚ್ಚು ಅರಣ್ಯ ಪ್ರದೇಶ ತುಂಬಿದೆ. ಶೇ.26 ರಷ್ಟು ಮಾತ್ರ ಕೃಷಿಭೂಮಿ ಇದೆ. ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವ 1490 ಕೋಟಿ ವೆಚ್ಚದ ಯೋಜನೆಗೆ ಚಾಲನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
undefined
CHAMARAJANAGAR: ಶವ ಸಂಸ್ಕಾರಕ್ಕೆ ಹಣವಿಲ್ಲದೇ ಪ್ಲಾಸ್ಟಿಕ್ ಚೀಲದಲ್ಲಿ ಪತ್ನಿಯ ದೇಹ ಸಾಗಿಸಿದ ಪತಿ
ಎಲ್ರೀಗೂ ಸೂರು
ರಾಜ್ಯದ ವಸತಿ ರಹಿತರಿಗೆ ಮನೆ ಕೊಡುವ ಕೆಲಸ ಪ್ರಾಮಾಣಿಕವಾಗಿ ಆಗಲಿದೆ. ಆ ಪಕ್ಷ, ಈ ಪಕ್ಷ ಎನ್ನದೆ ವಸತಿ ಇಲ್ಲದ ಅರ್ಹರಿಗೆ ಸೂರು ಸಿಗಲಿ ಎಂದು ಹೊಸ ಆಪ್ ಬಿಡುಗಡೆ ಮಾಡಿದೆ. ಇಲ್ಲಿ ಸುಳ್ಳು ಹೇಳಿದರೆ ಆಪ್‌ನಲ್ಲಿ ಸತ್ಯಾಂಶ ಹೊರ ಬೀಳುತ್ತದೆ ಎಂದರು.
ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ.ರಾಷ್ಟಿ್ರೕಯ ಹೆದ್ದಾರಿ ಅಭಿವೃದ್ಧಿ ಸಂಬಂಧ ಸಂಸದ ಪ್ರತಾಪ ಸಿಂಹ, ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ಜೊತೆ ನಾನು ಸಭೆ ನಡೆಸಿದ್ದೇನೆ. ನಂಜನಗೂಡು-ಗುಂಡ್ಲುಪೇಟೆ ಗಡಿ ತನಕ ನಾಲ್ಕು ಪಥದ ರಸ್ತೆಯಾಗಲಿದೆ ಎಂದರು.
ಪುರಸಭೆಗೆ ಈಗ ಕೊಟ್ಟಿರುವ 40 ಕೋಟಿ ಅಲ್ಲದೇ ಇನ್ನೂ 40 ಕೋಟಿ ಅನುದಾನ ಕೊಡುತ್ತೇನೆ. ಹನೂರು ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುತ್ತದೆ. ಗುಂಡ್ಲುಪೇಟೆ ತಾಲೂಕಿಗೂ 400 ಕೋಟಿ ಅನುದಾನ ಸಿಗುವ ಭರವಸೆ ಇದೆ ಎಂದರು.
ನಮ್ಮ ಕಾಲದ್ದು
ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜು, ಕೆರೆಗಳಿಗೆ ನೀರು ತುಂಬಿಸಿದ್ದು ಮಲೈಮಹದೇಶ್ವರ ಬೆಟ್ಟದ ಪ್ರಾಧಿಕಾರ ಆಗಿದ್ದು ನಮ್ಮ ಕಾಲದಲ್ಲೇ. ಈಗ ಮತ್ತೆ ಮುಖ್ಯಮಂತ್ರಿ ಬರಲಿದ್ದು ಹೆಚ್ಚಿನ ಅನುದಾನ ಬರಲಿದೆ ಎಂದರು.
ಹೆಚ್ಚು ಜನ ಬನ್ನಿ
ಡಿ.12 ರಂದು ಜಿಲ್ಲೆಗೆ ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆ ಸೋಮವಾರ ಬೆಳಗ್ಗೆ 9 ರೊಳಗೆ ಚಾಮರಾಜನಗರ ಕ್ರೀಡಾಂಗಣಕ್ಕೆ ತಲುಪಬೇಕು. ಬಿಜೆಪಿ ಶಾಸಕ ಇರುವ ಕ್ಷೇತ್ರವಾದ ಗುಂಡ್ಲುಪೇಟೆಯಲ್ಲಿ ಹೆಚ್ಚಿನ ಜನ ಬರಬೇಕು ಎಂದರು.
ಪೂರ್ವಭಾವಿ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಆರ್. ಸುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ, ಮಂಡಲ ಅಧ್ಯಕ್ಷ ಡಿ.ಪಿ. ಜಗದೀಶ, ಬಿಜೆಪಿ ರಾಜ್ಯ ಎಸ್ಟಿಮೋರ್ಚ ಉಪಾಧ್ಯಕ್ಷ ಎನ್.ಮಲ್ಲೇಶ್, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಆರ್.ಲೋಕೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಮಹೇಶ್, ಎಪಿಎಂಸಿ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್ (ರವಿ) ,ಬಿಜೆಪಿ ಮುಖಂಡರಾದ ಎಸ್.ಪಿ. ಸುರೇಶ್, ಕೊಡಸೋಗೆ ಶಿವಬಸಪ್ಪ ಸೇರಿದಂತೆ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
Chamarajanagar: ಬಿಜೆಪಿ ಭದ್ರಕೋಟೆ ಸೃಷ್ಟಿಗೆ ಕೈ ಜೋಡಿಸಿ: ಸಚಿವ ಸೋಮಣ್ಣ
ಸಾವಿರ ಕೋಟಿಗೂ ಹೆಚ್ಚು ಅನುದಾನ ಬಂದಿದೆ
ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಗೆ ಬಿಜೆಪಿ ಸರ್ಕಾರ ಬಂದ ಬಳಿಕ ಸಾವಿರ ಕೋಟಿಗೂ ಹೆಚ್ಚು ಅನುದಾನ ಬಂದಿದೆ ಎಂದು ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ಹೇಳಿದರು. ಸಭೆಯಲ್ಲಿ ಮಾತನಾಡಿ ಜಿಲ್ಲೆಗೆ ಡಿ.12 ರಂದು ಮುಖ್ಯಮಂತ್ರಿ ಭೇಟಿ ಮಹತ್ವದ್ದಾಗಿದೆ. ಅಂದು ಹತ್ತು ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈಗ ಹೊಸ ಹೊಸ ಯೋಜನೆ ಘೋಷಣೆ ಸಾಧ್ಯತೆ ಹೆಚ್ಚಿದೆ ಎಂದರು. 2018 ರ ಆರಂಭ ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ನನ್ನ ಕ್ಷೇತ್ರಕ್ಕೆ ಹೆಚ್ಚಾಗಿ ಬರಲಿಲ್ಲ. ಸಮ್ಮಿಶ್ರ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡಿತ್ತು. ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ ಸಿಎಂ ಆದಾಗ ಅನುದಾನ ಬಂತು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಳಿಕ ವಿ. ಸೋಮಣ್ಣ ಪ್ರಯತ್ನದಲ್ಲಿ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಆಗಿದೆ. ಮೆಡಿಕಲ್, ಕೃಷಿ ಕಾಲೇಜು ಬಂದಿದೆ.ಕಾನೂನು ಕಾಲೇಜು ಬರುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆಗಿದೆ ಎಂದರು.
ಬಿಜೆಪಿ ಸರ್ಕಾರದಲ್ಲಾದ ಹಾಗೂ ಹೆಚ್ಚಿನ ಅಭಿವೃದ್ಧಿ ಹಿನ್ನಲೆ ಜಿಲ್ಲಾ ಕೇಂದ್ರದಲ್ಲಿ ನಡೆವ ಸರ್ಕಾರಿ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆ ಜನ ಸೇರಬೇಕು. ತಾಲೂಕಿನಿಂದ ಕನಿಷ್ಠ 10 ಸಾವಿರ ಜನ ತೆರಳಬೇಕು. ಅಂದು ಡಿ.12 ರ ಬೆಳಗ್ಗೆ 7ಕ್ಕೆ ಬಸ್ ಬಿಡಬೇಕು ಎಂದರು.