ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಚುನಾವಣಾ ಸುಧಾರಣಾ ಸಂವಾದ ಸಭೆಯಲ್ಲಿ ಭಾವಹಿಸಿ ಪಕ್ಷಾಂತರ ನಿಷೇಧ ಕಾಯ್ದೆ ಇನ್ನಷ್ಟು ಬಲ ಪಡೆಸಬೇಕೆನ್ನುವ ಮಾತುಗಳನ್ನಾಡಿದ್ದಾರೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್..
ವಿಜಯಪುರ (ಆಗಸ್ಟ್ 01) : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಕಡ್ಡಾಯ ಮಾಡಬೇಕು. ಮತದಾನದಿಂದ ಯುವಕರು ನುಣುಚಿಕೊಳ್ಳುವುದು ಸರಿಯಾದ ಕ್ರಮವಲ್ಲ. ಯುವಕರು ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಅಭಿಯಾನ ನಡೆಸಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದ್ದಾರೆ.
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಏರ್ಪಸಿಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಾಲಾ ವಿದ್ಯಾರ್ಥಿಗಳು ಜೊತೆಗೆ ಪತ್ರಕರ್ತರೊಂದಿಗೂ ಸಂವಾದ ನಡೆಸಿದರು. ಈ ವೇಳೆ ಯುವಕರು, ವಿದ್ಯಾರ್ಥಿಗಳು ಕೇಳಿದ ಪ್ರಶ್ನಿಗಳಿಎ ಕಾಗೇರಿ ಉತ್ತರಿಸಿದರು. ಇತ್ತ ಚುನಾವಣೆಯಲ್ಲಿ ಕರ್ತವ್ಯನಿರತ ಪತ್ರಕರ್ತರು ಮತದಾನ ಮಾಡಲು ಆಗುತ್ತಿರುವ ತೊಂದರೆಯ ಬಗ್ಗೆ ಪತ್ರಕರ್ತರೊಬ್ಬರು ಕಾಗೇರಿಯವರ ಗಮನ ಸೆಳೆದರು.
undefined
Mangaluru: ‘ನನ್ನ ಮತ ಮಾರಾಟಕ್ಕಿಲ್ಲ’ ಎಂದು ಜನಾಂದೋಲನವಾಗಲಿ: ಸ್ಪೀಕರ್ ಕಾಗೇರಿ
ಹಣ-ಹೆಂಡಕ್ಕಾಗಿ ಮತ ಮಾರಾಟ ಸರಿಯಲ್ಲ..!
ಸಂವಾದದಲ್ಲಿ ಮಾತನಾಡುತ್ತಾ ಅವರು ಹಣ, ಹೆಂಡ, ಜಾತಿ ವ್ಯವಸ್ಥೆಗೆ ಹಲವು ಆಸೆ-ಆಮಿಷಗಳಿಗೆ ಯುವಕರು ತಮ್ಮ ಮತಗಳನ್ನು ಮಾರಾಟ ಮಾಡಬಾರದು ಎನ್ನುವ ಸಂಕಲ್ಪ ಮಾಡಬೇಕು ಎಂದು ಯುವಕರಿಗೆ ಕರೆ ನೀಡಿದರು.
ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಪಾಲನೆ ಮಾಡುವುದು ಕೇವಲ ಶಾಸಕಾಂಗದ ಕರ್ತವ್ಯವಲ್ಲ, ನಮ್ಮಷ್ಟೇ ಜವಾಬ್ದಾರಿ ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗದ ಮೇಲೂ ಇದೆ. ಆಡಳಿತದಲ್ಲಿ ಸುಧಾರಣೆ ತರುವುದು, ಆಡಳಿತವನ್ನು ಜನಪರಗೊಳಿಸುವುದು ಅಧಿಕಾರಗಳ ಜವಾಬ್ದಾರಿಯಲ್ಲವೇ ಎಂತ ಪ್ರಶ್ನಿಸಿದ್ರು.
ಪಕ್ಷಾಂತರ ನಿಷೇಧ ಕಾಯ್ದೆ ಬಲಪಡಿಸಬೇಕು..!
ದೇಶದ ಹಲವು ರಾಜ್ಯಗಳ ವಿಧಾನಸಭೆಯ ಸ್ಪೀಕರ್ ಗಳು ಸೇರಿ ಸಂವಿಧಾನದ 10ನೆ ಶೆಡ್ಯೂಲ್ ಅನ್ನು ಹೇಗೆ ಬಲಪಡಿಸಬೇಕು ಎನ್ನುವ ಕುರಿತಂತೆ ಅಧ್ಯಯನ ಮಾಡಿ ಲೋಕಸಭೆಯ ಸ್ಪೀಕರ್ ಅವರಿಗೆ ವರದಿಯನ್ನು ಸಲ್ಲಿಸಿದ್ದೇವೆ, ಪಕ್ಷಾಂತರ ನಿಷೇಧ ಕಾನೂನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಭಿಮತ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದಲ್ಲಿ ತೀರ್ಪು ಸಿಗುತ್ತಿದೆ, ನ್ಯಾಯ ಇಲ್ಲ..!
ನ್ಯಾಯಾಂಗದಲ್ಲಿ ವಿಚಾರದ ಬಗ್ಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ತೀರ್ಪು ಸಿಗುತ್ತದೆ, ಆದರೆ ನ್ಯಾಯ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಎಷ್ಟೋ ಪ್ರಕರಣಗಳಲ್ಲಿ ನ್ಯಾಯಾಧೀಶರು ಕೂಡಾ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಸಾಕಷ್ಟು ಉದಾಹರಣೆಗಳು ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮಗಳ ಕಾರ್ಯವೈಖರಿಗೆ ಅಸಮಾಧಾನ.!
ಸಂವಿಧಾನದ ನಾಲ್ಕನೆ ಅಂಗವಾಗಿರುವ ಪತ್ರಿಕಾರಂಗದಲ್ಲಿಯೂ ಕೂಡಾ ಮೊದಲಿನಂತೆ ಉಳಿದಿಲ್ಲ, ಬ್ರೇಕಿಂಗ್ ನೀಡುವ ಭರದಲ್ಲಿ ಬೆಂಕಿ ಹಚ್ಚುವ ಕೆಲ್ಸ ಮಾಡುತ್ತಿವೆ, ಮಾಧ್ಯಮಗಳು ಬೆಂಕಿ ಹಚ್ಚುವ ಕೆಲಸ ಮಾಡಬಾರದು, ಬೆಂಕಿ ಆರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಇತ್ತಿಚಿನ ವಿಧಾನ ಪರಿಷತ್ ಚುನಾವಣೆ ಪ್ರಸ್ತಾಪಿಸಿದ ಕಾಗೇರಿಯವರು, ಬುದ್ಧಿವಂತರು ಹಾಗೂ ಪದವೀಧರರು, ಶಿಕ್ಷಕರೇ ಮತದಾನ ಮಾಡುವ ಈ ಚುನಾವಣೆ ರೀತಿ ನೋಡಿದರೆ ಬೇಸರವಾಗುತ್ತಿದೆ. ಚುನಾವಣೆಯಲ್ಲಿ ಆಕ್ರೋಶ, ದ್ವೇಷ ಹಾಗೂ ದೌರ್ಬಲ್ಯವೇ ತುಂಬಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಅನೇಕ ಸುಧಾರಣೆಗಳಾಗಿವೆ. ಆರ್ ಟಿ ಐ ಬಂದಮೇಲೆ ಹಾಗೂ ಪಿ ಐ ಎಲ್ ಸಲ್ಲಿಸುವ ಮೂಲಕ ಆಡಳಿತದಲ್ಲಿ ಸುಧಾರಣೆ ಬಂದಿದೆ ಎಂದರು..
ಪ್ರಶ್ನಿಸುವ ಮನೋಭಾವನೆ ಇರಬೇಕು.!
ಹಿರಿಯರೂ ಕೂಡಾ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು, ಸಮಾಜದಲ್ಲಿ ಅವರಿಗೆ ಪ್ರಮುಖ ಸ್ಥಾನವಿದೆ. ಹಿರಿಯರ ಮೌನವೇ ನಮ್ಮ ಇಂದಿನ ಈ ಸ್ಥಿತಿಗೆ ಕಾರಣ. ಹಿರಿಯರು ಪ್ರಶ್ನಿಸದೇ ಹೋದರೆ ನಾವು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.