ಉಡುಪಿ: ಸರಸರನೆ ಮರ ಹತ್ತಿ ಹಲಸಿನ ಹಣ್ಣು ಕೊಯ್ದ ಪೇಜಾವರ ಶ್ರೀಗಳು..!

Published : Jun 16, 2023, 09:13 AM ISTUpdated : Jun 16, 2023, 10:04 AM IST
ಉಡುಪಿ: ಸರಸರನೆ ಮರ ಹತ್ತಿ ಹಲಸಿನ ಹಣ್ಣು ಕೊಯ್ದ ಪೇಜಾವರ ಶ್ರೀಗಳು..!

ಸಾರಾಂಶ

ಮರದ ಮೇಲಿದ್ದ ಹಲಸಿನಹಣ್ಣಗಳನ್ನು ಬೆರಳಿನಿಂದ ಹೊಡೆದು ಹಣ್ಣಾಗಿರುವುದನ್ನು ಖಚಿತಪಡಿಸಿಕೊಡು ಸುಮಾರು 8 - 10 ಕಿತ್ತು ಕೆಳಗೆ ಹಾಕಿದರು. ಎರಡೋ ಮೂರು ಹಣ್ಣುಗಳನ್ನು ತಮ್ಮ ಶಿಷ್ಯರಿಗೆ, ಗೋಶಾಲೆಯ ಸಹಾಯಕರಿಗೆ ಹಂಚಿದರು. ಮತ್ತುಳಿದವನ್ನು ಕೊಯ್ದು ಗೋವುಗಳಿಗೆ ತಿನ್ನಿಸಿ ಖುಷಿಪಟ್ಟ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು 

ಉಡುಪಿ(ಜೂ.16):  ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬುಧವಾರ ಶ್ರೀ ಮಠದ ಗೋಶಾಲೆಯ ಆವರಣದಲ್ಲಿರುವ ಸುಮಾರು 30-35 ಅಡಿ ಎತ್ತರದ ಹಲಸಿನ ಮರವನ್ನು ಏರಿ, ಪಕ್ವಗೊಂಡಿದ್ದ ಹಲಸಿನ ಹಣ್ಣುಗಳನ್ನು ಕೊಯ್ದು, ಗೋವುಗಳಿಗೆ ತಿನ್ನಿಸಿ ಸಂತಸಪಟ್ಟರು.

ಗೋಶಾಲೆಗೆ ಭೇಟಿ ನೀಡಿದ ಶ್ರೀಗಳು, ಮರದಲ್ಲಿ ಹಲಸಿನ ಹಣ್ಣು ಪಕ್ವವಾಗಿರುವುದನ್ನು ಕಂಡು ಪಾದುಕೆಗಳನ್ನು ಕೆಳಗೆ ಬಿಟ್ಟು, ಹೆಗಲ ಮೇಲಿದ್ದ ಶಲ್ಯವನ್ನು ತಲೆಗೆ ಸುತ್ತಿ, ಕಾವಿಪಂಚೆಯನ್ನು ಕಚ್ಚೆಯಂತೆ ಬಿಗಿದು, ಕೈಯಲ್ಲೊಂದು ಕತ್ತಿ ಹಿಡಿದುಕೊಂಡು, ಏಣಿ, ಹಗ್ಗ ಇತ್ಯಾದಿ ಯಾವುದರ ಸಹಾಯವಿಲ್ಲದೆ ಸರಸರನೆ ಮರವನ್ನೇರಿಯೇ ಬಿಟ್ಟರು. ಅವರ ಶಿಷ್ಯರು ಅಚ್ಚರಿಯಿಂದ ತಮ್ಮ ಗುರುಗಳ ಅನಿರೀಕ್ಷಿತ ಸಾಹಸವನ್ನು ನೋಡುತ್ತಾ ನಿಂತುಬಿಟ್ಟರು.

ಸಾವರ್ಕರ್‌, ಹೆಗ್ಡೇವಾರ್‌ ಪಾಠ ಕೈಬಿಟ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಸಚಿವ ಸುನಿಲ್‌ ಕಿಡಿ

ಮರದ ಮೇಲಿದ್ದ ಹಲಸಿನಹಣ್ಣಗಳನ್ನು ಬೆರಳಿನಿಂದ ಹೊಡೆದು ಹಣ್ಣಾಗಿರುವುದನ್ನು ಖಚಿತಪಡಿಸಿಕೊಡು ಸುಮಾರು 8 - 10 ಕಿತ್ತು ಕೆಳಗೆ ಹಾಕಿದರು. ಎರಡೋ ಮೂರು ಹಣ್ಣುಗಳನ್ನು ತಮ್ಮ ಶಿಷ್ಯರಿಗೆ, ಗೋಶಾಲೆಯ ಸಹಾಯಕರಿಗೆ ಹಂಚಿದರು. ಮತ್ತುಳಿದವನ್ನು ಕೊಯ್ದು ಗೋವುಗಳಿಗೆ ತಿನ್ನಿಸಿ ಖುಷಿಪಟ್ಟರು.

ಸದಾ ಕ್ರಿಯಾಶೀಲರೂ, ಉತ್ತಮ ಈಜುಪಟು, ಯೋಗಪಟುವೂ ಆಗಿರುವ ಶ್ರೀಗಳು ಪರಿಸರ ಪ್ರೇಮಿಯಾಗಿದ್ದಾರೆ. ನೂರಾರು ಬೀಡಾಡಿ, ಗಾಯಗೊಂಡ, ವಯಸ್ಸಾದ ಗೋವುಗಳನ್ನು ಸಾಕುವ ಗೋಪ್ರೇಮಿ. ಅವರು ಹಿಂದೆ ಮಠದ ಪರಿಸರಕ್ಕೆ ಬರುವ ವಿಷಕಾರಿ ಹಾವುಗಳನ್ನೂ ರಕ್ಷಿಸಿ ದೂರದ ಕಾಡಿಗೆ, ಗಾಯಗೊಂಡ ಪಕ್ಷಿಗಳನ್ನು ಆರೈಕೆ ಮಾಡಿ ಪ್ರಕೃತಿಗೆ ಬಿಟ್ಟದುಂಟು. ರೈತರ ಗದ್ದೆಯಲ್ಲಿ ಬೆಳೆದ ಹುಲ್ಲನ್ನು ಶ್ರೀಗಳು ತಾವೇ ಕೊಯ್ದು ತಂದ ಉದಾಹರಣೆಗಳೂ ಇವೆ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC