'BJPಯ ಹಾಲಿನ ವಾತಾವರಣದಲ್ಲಿ ವಿಶ್ವನಾಥ್ ಸಕ್ಕರೆಯಂತೆ ಕರಗ್ತಾರೆ'..!

Suvarna News   | Asianet News
Published : Jan 16, 2020, 02:13 PM IST
'BJPಯ ಹಾಲಿನ ವಾತಾವರಣದಲ್ಲಿ ವಿಶ್ವನಾಥ್ ಸಕ್ಕರೆಯಂತೆ ಕರಗ್ತಾರೆ'..!

ಸಾರಾಂಶ

ವಿಶ್ವನಾಥ್ ಅವರು ಬಿಜೆಪಿಯ ಹಾಲಿನ ವಾತಾವರಣದಲ್ಲಿ ಸಕ್ಕರೆಯಂತೆ ಕರಗುತ್ತಾರೆ ಎಂದು ಶಾಸಕ ರಾಮ್‌ದಾಸ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಸಂಪುಟ ರಚನೆ ಬಗ್ಗೆ ವಿಶ್ವನಾಥ್ ಕೊಟ್ಟ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಮೈಸೂರು(ಜ.16): ವಿಶ್ವನಾಥ್ ಅವರು ಬಿಜೆಪಿಯ ಹಾಲಿನ ವಾತಾವರಣದಲ್ಲಿ ಸಕ್ಕರೆಯಂತೆ ಕರಗುತ್ತಾರೆ ಎಂದು ಶಾಸಕ ರಾಮ್‌ದಾಸ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಸಂಪುಟ ರಚನೆ ಬಗ್ಗೆ ವಿಶ್ವನಾಥ್ ಕೊಟ್ಟ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಸಚಿವ ಸಂಪುಟ ರಚನೆಗೆ ವಿಶ್ವನಾಥ್ ಏಚ್ಚರಿಕೆ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ವಿಶ್ವನಾಥ್ ನಮ್ಮ ತಂದೆಯ ಸ್ಥಾನದಲ್ಲಿ ಇದ್ದಾರೆ. ಅವರು ಎಲ್ಲ ಪಕ್ಷದಲ್ಲಿಯೂ ಆಡಳಿತ ವ್ಯವಸ್ಥೆಗಳನ್ನು ತಿಳಿದುಕೊಂಡಿದ್ದಾರೆ. ಅವರು ಯಾವ ದೃಷ್ಟಿಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಬಿಜೆಪಿ ಕೇಡರ್‌ನಿಂದ ಬಂದ ಪಕ್ಷ. ಸರ್ಕಾರಕ್ಕಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂದುಕೊಂಡವರು ನಾವು. ನಾವು ಪಕ್ಷವನ್ನು ಉಳಿಸಿಕೊಳ್ಳುತ್ತೇವೆ. ಹಿರಿಯರ ಕಮೆಂಟ್‌ಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ಅಂತವರನ್ನು ಮಾತನಾಡಿಸುತ್ತಾರೆ ಎಂದು ಹೇಳಿದ್ದಾರೆ.

ಪಕ್ಷದ  ಬೇಸ್ ದೊಡ್ಡದಾಗಿದೆ:

ನಮ್ಮ‌ ಪಕ್ಷದ ಬೇಸ್ ತುಂಬಾ ದೊಡ್ಡದಾಗಿದೆ. ಬೇಸ್ ತುಂಬಾ ದೊಡ್ಡದಾಗಿರುವ ಕಾರಣ ಶಿಥಿಲವಾಗುವುದಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ಹಾಗಾಗಿ ನಾವು ಯಾರನ್ನಾದರೂ ಕನ್ವಿನ್ಸ್ ಮಾಡುತ್ತೇವೆ. ಅಂತಹ ಬೆಳವಣಿಗೆಯಾದರೆ ಜೀರ್ಣಿಸಿಕೊಳ್ಳುವ ಶಕ್ತಿ ನಮಗಿದೆ. ಬಿಜೆಪಿಯಂತಹ ಹಾಲಿನ ವಾತಾವರಣದಲ್ಲಿ ವಿಶ್ವನಾಥ್ ಸಕ್ಕರೆಯಂತೆ ಕರಗಿ ನಮ್ಮ ಜೊತೆ ಇರುತ್ತಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಂಪುಟ ಕಗ್ಗಂಟಲ್ಲ, ಎಲ್ಲವನ್ನೂ ನಿರ್ಧರಿಸಿದ್ಯಂತೆ ಹೈಕಮಾಂಡ್..!

ಮೇಯರ್ ಗಾದಿ ಹಿಡಿಯಲು ನಾವು ಯಾವತ್ತು ಪ್ರಯತ್ನ ಮಾಡುತ್ತಿಲ್ಲ. ಆಪರೇಷನ್ ಕಮಲವನ್ನೂ ಮಾಡಲ್ಲ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯನ್ನ ಈ ಬಾರಿಯೂ ಮುಂದುವರಿಸಿದೆ. ಅವರಲ್ಲಿಯೇ ಇರುವ ಸಮಸ್ಯೆಗಳಿಂದ ರೆಸಾರ್ಟ್ಗೆ ಹೋಗುತ್ತಿದ್ದಾರೆ. ನಾವು ಆಪರೇಷನ್ ಕಮಲ ಮಾಡುತ್ತಿಲ್ಲ, ಮಾಡೋದು ಇಲ್ಲ. ನಾವು ವಿರೋಧ ಪಕ್ಷವಾಗಿಯೇ ಇರುತ್ತೇವೆ. ಸಕಾರಾತ್ಮಕ ಆಡಳಿತಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಯಾವ ರೀತಿ ಇರಬೇಕೆಂಬುದನ್ನ ನಿರ್ಧರಿಸಲು ನ.17 ರಂದು ಸಭೆ ಕರೆದಿದ್ದೇವೆ. ಸಭೆಯಲ್ಲಿ ವಿಶೇಷವಾಗಿ ಜವಬ್ದಾರಿ ನೀಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬಾಂಗ್ಲಾ ವಲಸಿಗರ ಅಕ್ರಮ ಎಂಟ್ರಿ; ಕಠಿಣ ಕ್ರಮಕ್ಕೆ ಗೃಹ ಸಚಿವರ ಸೂಚನೆ

PREV
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ