ನಂದಿನಿ ಹಾಲು ದರ ಬಹುತೇಕ ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ

By Suvarna NewsFirst Published Jan 16, 2020, 1:29 PM IST
Highlights

ನಂದಿನಿ ಹಾಲು ದರ ಹೆಚ್ಚಳ ಬಹುತೇಕ ಖಚಿತವಾಗಿದೆ ಎಂದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ|  ಪ್ರತೀ ಲೀಟರ್‌ ಹಾಲಿಗೆ ಎರಡರಿಂದ ಮೂರು ಹೆಚ್ಚಳ ಸಾಧ್ಯತೆ| ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ  ತೀರ್ಮಾನ|

ಬೆಂಗಳೂರು(ಜ.16): ನಂದಿನಿ ಹಾಲು ದರ ಹೆಚ್ಚಳ ಬಹುತೇಕ ಖಚಿತವಾಗಿದೆ. ಪ್ರತೀ ಲೀಟರ್‌ ಹಾಲಿಗೆ ಎರಡರಿಂದ ಮೂರು ಹೆಚ್ಚಳ ಸಾಧ್ಯತೆ. ಈ ಬಗ್ಗೆ ಶುಕ್ರವಾರ ನಡೆಯುವ ಹಾಲಿನ ದರ ಹೆಚ್ಚಳ ಕುರಿತು ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.  

ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದ 14 ಹಾಲು ಒಕ್ಕೂಟಗಳ ವತಿಯಿಂದ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್‌ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪ್ರತೀ ಲೀಟರ್ ಗೆ ಎರಡರಿಂದ ಮೂರು ರೂ ಹೆಚ್ಚಳ ಮಾಡುವಂತೆ ಕೆಎಂಎಫ್ ಗೆ ಬೇಡಿಕೆ ಇಟ್ಟಿವೆ ಎಂದು ಹೇಳಿದ್ದಾರೆ. 

ಹೊಸ ವರ್ಷಕ್ಕೆ ರೈತರಿಗೆ ಬಂಪರ್ ಗಿಫ್ಟ್; ಹಾಲು ಖರೀದಿಯಲ್ಲಿ 2 ರೂ ಹೆಚ್ಚಳ!

ಹಾಲಿನ ದರ ಹೆಚ್ಚಳ ಸಂಬಂಧ ನಾಳಿನ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ. ಈ ಸಂಬಂಧ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಸಭೆಯಲ್ಲಿ ಸಾದಕ ಬಾದಕಗಳ ಚರ್ಚೆ ಬಳಿಕ ದರ ಪರಿಷ್ಕರಣೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
 

click me!