Viral Video: 'ದೇವರಂತೆ' ಬಂದ ಬೆಂಗಳೂರು ಹೊಯ್ಸಳ ಪೊಲೀಸ್ ಸಿಬ್ಬಂದಿ; ಉಳಿಯಿತು ಬೈಕ್ ಸವಾರನ ಜೀವ!

Published : Aug 30, 2026, 11:59 AM IST
Bengaluru Police

ಸಾರಾಂಶ

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರನಿಗೆ ಹೃದಯಾಘಾತವಾದಾಗ, ಹೊಯ್ಸಳ ಗಸ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಿಪಿಆರ್ ನೀಡಿ ಪ್ರಾಣ ಉಳಿಸಿದ್ದಾರೆ. ಸಹಾಯಕ ಸಬ್ ಇನ್ಸ್ ಪೆಕ್ಟರ್ ಸಚ್ಚಿದಾನಂದಮೂರ್ತಿ ಮತ್ತು ಹೆಡ್ ಕಾನ್‌ಸ್ಟೇಬಲ್ ಬಸವರಾಜು ಅವರ ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಬೆಂಗಳೂರು: ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸವಾರನಿಗೆ ಹೃದಯಾಘಾತ ಸಂಭವಿಸಿ, ರಸ್ತೆಯ ಪಕ್ಕದಲ್ಲೇ ಕುಸಿದು ಬಿದ್ದ ಸಂದರ್ಭದಲ್ಲಿ ಬೆಂಗಳೂರಿನ ಹೊಯ್ಸಳ ಪೊಲೀಸರು ಆತನ ನೆರವಿಗೆ ಧಾವಿಸಿ ಆತನ ಜೀವ ರಕ್ಷಣೆ ಮಾಡಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಘಟನೆ?

34 ವರ್ಷದ ರವಿ ಎಂಬ ಬೈಕ್ ಸವಾರ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾಗಡಿ ರಸ್ತೆಯ ಅಗ್ನಿಶಾಮಕ ಠಾಣೆಯ ಬಳಿ ಬಂದ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಹೊಯ್ಸಳ 88ರ ಗಸ್ತು ಸಿಬ್ಬಂದಿ ಬೈಕ್ ಸವಾರನ ನೆರವಿಗೆ ಬಂದಿದ್ದರು. ಸಹಾಯಕ ಸಬ್ ಇನ್ಸ್ ಪೆಕ್ಟರ್ ಸಚ್ಚಿದಾನಂದಮೂರ್ತಿ ಮತ್ತು ಹೆಡ್ ಕಾನ್‌ಸ್ಟೇಬಲ್ ಬಸವರಾಜು ಅವರು ತಕ್ಷಣ ಆತನ ಸಹಾಯಕ್ಕೆ ಬಂದು ಸಿಪಿಆರ್ ನೀಡಿದ್ದರು. ಇದರಿಂದ ರವಿ ಅವರ ಜೀವ ಉಳಿದಿತ್ತು.

ಹೊಯ್ಸಳ ಸಿಬ್ಬಂದಿಯ ಈ ತ್ವರಿತ ಕಾರ್ಯವೂ ಚಾಲಕನ ಜೀವನ ರಕ್ಷಣೆ ಮಾಡಿದ್ದು, ಈ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಯ್ಸಳ ಸಿಬ್ಬಂದಿಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಟ್ರಾಫಿಕ್ ಪೊಲೀಸರು, ಹೊಯ್ಸಳ ತಂಡ ಈ ವರ್ಷ ಜನವರಿಯಿಂದ ಆಗಸ್ಟ್ 11ರ ನಡುವೆ 450 ಜನರನ್ನು ರಕ್ಷಿಸಿದ್ದಾರೆ. ಜನರು ತೀವ್ರ ಸಂಕಷ್ಟದಲ್ಲಿರುವ ಸಮಯದಲ್ಲಿ ಫಸ್ಟ್ ರಿಯಾಕ್ಷನ್ ನೀಡುತ್ತಿರುವ ಅಧಿಕಾರಿಗಳ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರು ಹೇಳಿದ್ದೇನು?

ಬೆಂಗಳೂರು ಪೊಲೀಸರು ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ನೆಟ್ಟಿಗರು, ಪ್ರಶಂಸೆಯ ಮಳೆಯನ್ನೇ ಸುರಿಸಿದ್ದಾರೆ.'ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಿದ ಸಚ್ಚಿದಾನಂದಮೂರ್ತಿ ಮತ್ತು ಬಸವರಾಜು ಸರ್ ಅವರಿಗೆ ಧನ್ಯವಾದಗಳು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಂತಹ ಪೊಲೀಸರಿಗೆ ಅವರ ಪ್ರಯತ್ನ ಮತ್ತು ಸಹಾಯಕ್ಕಾಗಿ ದಯವಿಟ್ಟು ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹ ಮಾಡಿ' ಎಂದು ಬರೆದಿದ್ದಾರೆ. 'ಇಂತಹ ಅಧಿಕಾರಿಗಳಿಗೆ ತುಂಬಾ ಧನ್ಯವಾದಗಳು ಹಲೋ ಪೊಲೀಸ್ ಅಧಿಕಾರಿಗಳು ತುಂಬಾ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಅಂತವರಿಗೆ ನಾವು ಎಂದಿಗೂ ಶರಣಾಗಿದ್ದೇವೆ, ಕೆಲವು ಪೊಲೀಸ್ ಅಧಿಕಾರಿಗಳು ಅರ್ಥವಿಲ್ಲದೆ ಸುಮ್ಮನೆ ತೊಂದರೆ ಕೊಡುವವರಿದ್ದಾರೆ. ಆದರೆ ಇಂಥ ಅಧಿಕಾರಿಗಳಿಗೆ ಒಳ್ಳೆಯದಾಗಲಿ' ಎಂದು ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

ದಾವಣಗೆರೆ: ಸೆಲ್ಫೀ ವಿಡಿಯೋ ಮಾಡಿಬ್ಯಾಂಕ್ ಉದ್ಯೋಗಿ ನಾಪತ್ತೆ! ತುಂಗಾ ಕಾಲುವೆಯಲ್ಲಿ ಬೈಕ್ ಪತ್ತೆ! ಸ್ಥಳಕ್ಕೆ ಎಂಪಿ ರೇಣುಕಾಚಾರ್ಯ ಭೇಟಿ
ಧೋನಿಯೇ ಕರ್ನಾಟಕದ ಈ ಬ್ರ್ಯಾಂಡ್‌ನ ಮೊದಲ ಅಂಬಾಸಿಡರ್, 110 ವರ್ಷಗಳ ಇತಿಹಾಸವಿದೆ ‘ದ್ರವ ಚಿನ್ನ’ದ ಸಾಬೂನಿಗೆ