Viral news: ಮಲ್ಪೆ ಬೀಚ್‌ನಲ್ಲಿ ಟನ್ನುಗಟ್ಟಲೇ ಗಂಗಾಮಾತೆಯ ಕೂದಲು ಪತ್ತೆ !

Published : Jun 22, 2023, 06:39 AM IST
Viral news: ಮಲ್ಪೆ ಬೀಚ್‌ನಲ್ಲಿ ಟನ್ನುಗಟ್ಟಲೇ ಗಂಗಾಮಾತೆಯ ಕೂದಲು ಪತ್ತೆ !

ಸಾರಾಂಶ

ಮಲ್ಪೆ ಸಮುದ್ರ ತೀರದಲ್ಲಿ ಶ್ಯಾವಿಗೆಯಂತಿರುವ ವಿಚಿತ್ರ ವಸ್ತುವೊಂದು ಟನ್ನುಗಟ್ಟಲೇ ಪತ್ತೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಮಲ್ಪೆ, ಪಡುಕರೆಸಮುದ್ರ ತೀರದಲ್ಲಿ ಜಲಚರ ವಸ್ತು ಸಮುದ್ರ ಅಲೆಗಳೊಂದಿಗೆ ಬಂದು ದಡದ ಮೇಲೆ ಬೀಳುತ್ತಿದೆ.

ಮಲ್ಪೆ (ಜೂ.22) ಮಲ್ಪೆ ಸಮುದ್ರ ತೀರದಲ್ಲಿ ಶ್ಯಾವಿಗೆಯಂತಿರುವ ವಿಚಿತ್ರ ವಸ್ತುವೊಂದು ಟನ್ನುಗಟ್ಟಲೇ ಪತ್ತೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಮಲ್ಪೆ, ಪಡುಕರೆಸಮುದ್ರ ತೀರದಲ್ಲಿ ಜಲಚರ ವಸ್ತು ಸಮುದ್ರ ಅಲೆಗಳೊಂದಿಗೆ ಬಂದು ದಡದ ಮೇಲೆ ಬೀಳುತ್ತಿದೆ.

ಸ್ಥಳೀಯ ಮೀನುಗಾರರು ಇದನ್ನು ಗಂಗಾಮಾತೆಯ ಕೂದಲು ಎಂದು ಕರೆಯುತ್ತಾರೆ. ಇದೇನೂ ಅಪರೂಪವಲ್ಲ, ಹಿಂದೆಯೂ ಇದು ಕಾಣಿಸಿಕೊಂಡಿತ್ತು, ಆದರೆ ಈ ಪ್ರಮಾಣದಲ್ಲಿ ಬಂದು ರಾಶಿ ಬಿದ್ದಿರಲಿಲ್ಲ ಎನ್ನುತ್ತಾರೆ ಮೀನುಗಾರರು.

ಆದರೆ ಇದು ಉದ್ದ ಲಾಡಿ ಹುಳದಂತಹ ಸಮುದ್ರ ಜೀವಿಗಳ ಹೊರಗಿನ ಪೊರೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನು ಸೆಲ್ಲಫೈನ್‌ ಟ್ಯೂಬ್‌ ವಮ್‌ರ್‍ ಎಂದು ಕರೆಯುತ್ತಾರೆ. ಸಮುದ್ರದ ಮಧ್ಯೆ ಬೆಳೆಯುವ ಜೀವಿಗಳ ಪೊರೆಗಳನ್ನು ಬಿಫೋರ… ಜಾಯ್‌ ಚಂಡಮಾರುತ ದಡಕ್ಕೆ ತಂದು ಎಸೆದಿದೆ ಎಂದು ಮಂಗಳೂರಿನ ಫಿಶರೀಸ್‌ ಕಾಲೇಜಿನ ತಜ್ಞರು ತಿಳಿಸಿದ್ದಾರೆ.

ಸಮುದ್ರದ ಆಳದ ಬಂಡೆಗಳ ಮೇಲೆ ಬೆಳೆಯುವ ಈ ಸಸ್ಯ ನಾಶವಾಗಿ ಆಗಾಗ ದಂಡೆಗೆ ತೇಲಿ ಬರುತ್ತಿರುತ್ತದೆ. ಮಲ್ಪೆ ಬೀಚಲ್ಲಿ ಸುಮಾರು ಹತ್ತನ್ನೆರಡು ವರ್ಷಗಳ ಹಿಂದೆ ಕಾಣಿಸಿತ್ತು. ಆದರೆ ಈ ಬಾರಿ ವಿಸ್ಮಯ ಅನ್ನುವಷ್ಟು ಯೆಥೇಚ್ಛವಾಗಿ ದಂಡೆಗೆ ಹರಿದು ಬಂದಿದೆ. ಸೈಕ್ಲೋನ್ ಪರಿಣಾಮ ಸಮುದ್ರದಲ್ಲಿನ ಸುಂಟರಗಾಳಿ, ಉಬ್ಬರವಿಳಿತದಿಂದ ಹೀಗೆ ದಂಡೆಗೆ ಬಂದು ಬಿದ್ದಿದೆ ಎಂದು ಹೇಳಲಾಗುತ್ತಿದೆ. 

 

ಮಲ್ಪೆ ಕಡಲ ತೀರದಲ್ಲಿ ಎಲ್ಲಿ ನೋಡಿದರಲ್ಲಿ ಗಂಗೆಯ ಕೂದಲು! ಏನಿದರ ವಿಶೇಷ?

PREV
Read more Articles on
click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ