ಲಾಕ್‌ಡೌನ್ ಉಲ್ಲಂಘಿಸಿದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಡ್ಯೂಟಿ

By Suvarna News  |  First Published May 14, 2021, 3:07 PM IST
  • ಕೋವಿಡ್ ನಿಯಮ ಉಲ್ಲಂಘಿಸಿದ ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು
  • ಕೋವಿಡ್ ಡ್ಯೂಟಿಗೆ ನಿಯೋಜಿಸಿದ ಕಾಲೇಜು ಡೀನ್
  • ವಾರಗಳ ಕಾಲ ಕೋವಿಡ್ ಆಸ್ಪತ್ರೆ ಡ್ಯೂಟಿ

ಕೊಡಗು (ಮೇ.14):  ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಪಿಕ್ನಿಕ್ ಹೋಗಿದ್ದ ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ಇಂದಿನಿಂದ ಕೊವಿಡ್  ಡ್ಯೂಟಿಗೆ ನಿಯೋಜಿಸಲಾಗಿದೆ.  

ಕೊಡಗು ಮೆಡಿಕಲ್ ಕಾಲೇಜಿನ 6  ವಿದ್ಯಾರ್ಥಿಗಳು ಲಾಕ್‌ಡೌನ್ ನಿಯಮ‌ ಉಲ್ಲಂಘಿಸಿ  ಬೈಕ್‌ನಲ್ಲಿ ಪಿಕ್ನಿಕ್ ಹೋಗಿದ್ದರು. ಮಡಿಕೇರಿ ಯಿಂದ ಮಾಂದಲಪಟ್ಟಿ ಮಾರ್ಗದಲ್ಲಿ ಜಾಲಿ ರೈಡ್ ಹೋಗಿದ್ದು ಈ ವೇಳೆ ಸಿಕ್ಕಿ ಬಿದ್ದಿದ್ದಾರೆ.

Tap to resize

Latest Videos

ಬೇರೆ ಜಿಲ್ಲೆಯಿಂದ ಬಂದರೆ 10 ದಿನ ಕ್ವಾರಂಟೈನ್‌ ...

ವಿದ್ಯಾರ್ಥಿಗಳನ್ನು ತಡೆದ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಮಾಸ್ಕ್ ಧರಿಸದೆ ಸಾರ್ವಜನಿಕರ ಜತೆ ಉಡಾಫೆ ವರ್ತನೆ ತೋರಿದ ವಿದ್ಯಾರ್ಥಿಗಳ ಬಗ್ಗೆ ಡೀನ್‌ಗೆ ದೂರು ನೀಡಲಾಗಿತ್ತು. 

'ಕಷ್ಟವಿದ್ದಾಗ ಕೇಳಲು ಬರದೆ ಎಲ್ಲ ಮುಗಿದ ಮೇಲೆ ಸೀಲ್‌ಡೌನ್‌ ಬೋರ್ಡ್ ಹಾಕ್ತೀರಾ'

ದೂರಿನ‌ ಆಧಾರದಲ್ಲಿ ಕ್ರಮ ಕೈಗೊಂಡ ಕಾಲೇಜು ಆಡಳಿತ ಮಂಡಳಿ ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳಿಗೆ ಕೊಡಗು ಕೋವಿಡ್ ಆಸ್ಪತ್ರೆಯಲ್ಲಿ ಡ್ಯೂಟಿಗೆ ನಿಯೋಜಿಸಲಾಗಿದೆ. ಒಂದು ವಾರ ಕೋವಿಡ್ ಡ್ಯೂಟಿಗೆ ನಿಯೋಜಿಸಿ ಮೆಡಿಕಲ್ ಕಾಲೇಜು ಡೀನ್ ಆದೇಶ ನೀಡಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!