ಗವಿ​ಮ​ಠ​ದಿಂದ ಕೋವಿ​ಡ್‌ ಸೋಂಕಿತ ಮಹಿ​ಳೆ ಅಂತ್ಯ ಸಂಸ್ಕಾ​ರ

Kannadaprabha News   | Asianet News
Published : May 14, 2021, 02:25 PM ISTUpdated : Jan 18, 2022, 05:46 PM IST
ಗವಿ​ಮ​ಠ​ದಿಂದ ಕೋವಿ​ಡ್‌ ಸೋಂಕಿತ ಮಹಿ​ಳೆ ಅಂತ್ಯ ಸಂಸ್ಕಾ​ರ

ಸಾರಾಂಶ

* ಮೃತ ಮಹಿಳೆಯ ಅಂತ್ಯ ಸಂಸ್ಕಾ​ರಕ್ಕೆ ಮುಂದಾ​ಗ​ದ ಸಂಬಂಧಿ​ಕರು, ಜಿಲ್ಲಾ​ಡ​ಳಿತ, ನಗ​ರ​ಸಭೆ  * ಗವಿ ಶ್ರೀಗಳ ಆದೇಶದಂತೆ ಅಂತ್ಯಕ್ರಿಯೆ * ಅಂತ್ಯ ಸಂಸ್ಕಾರದ ಖರ್ಚು ಭರಿಸಿದ ಗವಿಶ್ರೀಗಳು

ಕೊಪ್ಪಳ(ಮೇ.14): ಕೋವಿಡ್‌ ಸೋಂಕಿ​ನಿಂದ ಮೃತ​ಪಟ್ಟ ಮಹಿಳೆಯ ಅಂತ್ಯ ಸಂಸ್ಕಾರವನ್ನು ಗವಿ​ಮ​ಠ​ದಿಂದಲೇ ನೆರ​ವೇ​ರಿಸಲಾ​ಯಗಿದೆ.

ಗು​ರು​ವಾ​ರ ಕೊರೋನಾ ಸೋಂಕಿನಿಂದ ಕೊಪ್ಪ​ಳದ ಮೂರನೇ ವಾರ್ಡಿ​ನ 48 ವರ್ಷದ ಅಂಜಿನಮ್ಮ ತಮ್ಮ ಮನೆಯಲ್ಲೇ ಮೃತಪ​ಟ್ಟಿ​ದ್ದ​ರು. ಅಂತ್ಯ ಸಂಸ್ಕಾ​ರಕ್ಕೆ ಸಂಬಂಧಿ​ಕರು, ಜಿಲ್ಲಾ​ಡ​ಳಿತ, ನಗ​ರ​ಸಭೆ ಮುಂದಾ​ಗ​ದ ಹಿನ್ನೆ​ಲೆ​ಯಲ್ಲಿ ಗವಿಮಠ​ದಿಂದಲೇ ಮಾಡ​ಲಾ​ಗಿದೆ.

"

ಕೊಪ್ಪಳ: ಕೋವಿಡ್‌ ಆಸ್ಪತ್ರೆ ಕಸಗೂಡಿಸಿದ ಗವಿಸಿದ್ಧೇಶ್ವರ ಶ್ರೀ

​ಗವಿ ಶ್ರೀಗಳ ಆದೇಶದಂತೆ ಗವಿ ಮಠದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಂತ್ಯಕ್ರಿಯೆ ನೆರ​ವೇ​ರಿ​ಸಿ​ದ್ದಾರೆ. ಅಂತ್ಯ ಸಂಸ್ಕಾರದ ಖರ್ಚನ್ನು ಗವಿಶ್ರೀಗಳು ಭರಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!