ಬೇಳೂರು ಟಾಸ್ಕ್‌ ಫೋರ್ಸ್‌ ಕಾರ್ಯಕ್ಕೆ ವಿನಯ್ ಗುರೂಜಿ ಶ್ಲಾಘನೆ

By Kannadaprabha News  |  First Published Aug 27, 2020, 9:50 AM IST

ರಾಜ್ಯದಲ್ಲಿ ಕೊರೋನಾ ಮಹಾಮಾರಿ ತಾಂಡವವಾಡುತ್ತಿದ್ದು, ಕೊರೋನಾ ತಡೆಯುವ ನಿಟ್ಟಿನಲ್ಲಿ ವಿವಿಧ ರೀತಿಯ ಕಾರ್ಯ ನಿರ್ವಹಿಸಲಾಗುತ್ತಿದೆ. ಬೇಳೂರು ಟಾಸ್ಕ್ ಫೊರ್ಸ್ ಕೂಡ ಕಾರ್ಯನಿರ್ವಹಿಸುತ್ತಿದ್ದು ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಆ.27):  ರಾಜ್ಯದ ವಿವಿಧೆಡೆ 42 ದಿನಗಳ ಕಾಲ ಕೊರೋನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ‘ಹೆಲ್ತ್‌ ಕಿಟ್‌’ ವಿತರಿಸಿದ ಬೇಳೂರು ಟಾಸ್ಕ್‌ಫೋರ್ಸ್‌ ತಂಡದ ಕಾರ್ಯಕರ್ತರನ್ನು ಟಾಸ್ಕ್‌ ಫೋರ್ಸ್‌ ವತಿಯಿಂದ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕ ಉದ್ಯಾನದಲ್ಲಿ ಅಭಿನಂದಿಸಲಾಯಿತು.

ಮಹಾತ್ಮಗಾಂಧಿ ಸೇವಾ ಟ್ರಸ್ಟ್‌ ಸಂಸ್ಥಾಪಕ ಅವಧೂತ ವಿನಯ್‌ ಗುರೂಜಿ ಮಾರ್ಗದರ್ಶನದಲ್ಲಿ ಟ್ರಸ್ಟ್‌ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗಿತ್ತು. ತಂಡವು 42 ದಿನಗಳ ಕಾಲ ರಾಜ್ಯದ ವಿವಿಧ ವರ್ಗದ ಜನರಿಗೆ ಕೊರೋನಾ ವಿರುದ್ಧ ಹೋರಾಡುವ ವಿಶೇಷ ಕಿಟ್‌ ವಿತರಿಸಿದೆ. ಕೊರೋನಾ ವಿರುದ್ಧ ಹೋರಾಡಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.

Tap to resize

Latest Videos

'ತಿಂಗಳೊಳಗಾಗಿ ಕರ್ನಾಟಕವು ಕೊರೋನಾ ಮುಕ್ತ...

ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ವಿನಯ್‌ ಗುರೂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಗುರೂಜಿ, ಟಾಸ್ಕ್‌ ಫೋರ್ಸ್‌ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕೊರೋನಾ ನಿಯಂತ್ರಣಕ್ಕೆ ಗೋವು ಅಗತ್ಯವಾಗಿದ್ದು, ಇದರ ಮಹತ್ವ ತಿಳಿಸುವಂತೆ ಸಲಹೆ ನೀಡಿದರು.

ಸಮಾರಂಭದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಟೈಗರ್‌ ಅಶೋಕ್‌ ಕುಮಾರ್‌, ಟ್ರಸ್ಟ್‌ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ, ಕಾರ್ಯದರ್ಶಿ ಶಿವರಾಜ್‌, ಸಲಹಾ ಸಮಿತಿ ಸದಸ್ಯರಾದ ರಾಕೇಶ್‌ ಶೆಟ್ಟಿ, ಬಳ್ಳಾರಿ ನಗರಾಭಿವೃದ್ದಿ ಅಧ್ಯಕ್ಷರಾದ ದೊಮ್ಮಲೂರು ಶೇಖರ್‌, ಪ್ರಾಣಿದಯಾ ಕ್ಷೇಮಾಭಿವೃದ್ಧಿ ಮಂಡಳಿ ಸದಸ್ಯ ಮಿತ್ತಲ್‌, ಟಾಸ್ಕ್‌ ಫೋರ್ಸ್‌ ತಂಡದ ರಮೇಶ್‌ ರೆಡ್ಡಿ, ಕೆ.ಜಿ.ಗಂಗಣ್ಣ, ಮಂಜುನಾಥ್‌, ಟ್ರಸ್ಟ್‌ನ ಯೂಟ್ಯೂಬ್‌ ಚಾನಲ್‌ ಮುಖ್ಯಸ್ಥರಾದ ಸುರೇಶ್‌ ಚಿಕ್ಕಣ್ಣ ಹಾಗೂ ತಂಡದ ಕಾರ್ಯಕರ್ತರು ಪಾಲ್ಗೊಂಡಿದ್ದರು.

click me!