* ಬೇವಿನಮರಕ್ಕೆ ಭಕ್ಷ್ಯ ಭೋಜನಗಳ ನೈವೇದ್ಯ
* ಕೊರೋನಾ ದೇವಿಯಲ್ಲಿ ಪ್ರಾರ್ಥನೆ
* ಕುಟುಂಬ ಸಮೇತರಾಗಿ ಹೋಮ
ಬಳ್ಳಾರಿ(ಮೇ.30): ಕೊರೋನಾ ಸಾವು ನೋವಿನಿಂದ ಆತಂಕಗೊಂಡಿರುವ ಹಳ್ಳಿಗರು ಇದೀಗ ಮೌಢ್ಯಚಾರಣೆಗೆ ಶರಣಾಗಿದ್ದಾರೆ. ವಿಭಿನ್ನ ರೀತಿಯ ಆಚರಣೆಗಳು ಕೇಳಿ ಬರುತ್ತಿವೆ. ಕೊರೋನಾ ದೇವಿ ನಿರ್ಮಿಸಿ ಅದಕ್ಕೆ ಭಕ್ಷ್ಯ ಭೋಜನಗಳ ನೈವೇದ್ಯ ಮಾಡಿ ತಮ್ಮೂರಿಗೆ ಕೊರೋನಾ ಸುಳಿಯದಂತೆ ನೋಡಿಕೊಳ್ಳಬೇಕು ಎಂದು ಪ್ರಾರ್ಥಿಸುತ್ತಿದ್ದಾರೆ. ಕೆಲವೆಡೆ ಹವನಗಳು ನಡೆಯುತ್ತಿವೆ.
ಕೂಡ್ಲಿಗಿ ತಾಲೂಕಿನ ಚಂದ್ರೇಶೇಖರಪುರದಲ್ಲಿ ಊರಿನ ಹೊರಗಿನ ಬೇವಿನ ಮರದಡಿ ಮೊಸರು ಅನ್ನದ ಎಡೆ ಮಾಡಿ ಪ್ರಾರ್ಥಿಸಿದ್ದಾರೆ. ಇದರಿಂದ ಕೊರೋನಾ ತಮ್ಮೂರಿಗೆ ಬರುವುದಿಲ್ಲ ಎಂದು ಪ್ರತಿಯೊಂದು ಮನೆಯವರು ಬೇವಿನ ಮರಕ್ಕೆ ಎಡೆ ಸಲ್ಲಿಸಿದ್ದಾರೆ.
undefined
ಕೊಟ್ಟೂರು ತಾಲೂಕಿನ ಸುಟ್ಟಕೋಡಿಹಳ್ಳಿ, ಗಂಗಮ್ಮನಹಳ್ಳಿ ಮತ್ತಿತತರ ಹಳ್ಳಿಗಳಲ್ಲಿ ಮಹಿಳೆಯರು ಶುಕ್ರವಾರ ದಿನವಿಡೀ ಕೊರೋನಾ ದೇವಿಗೆ ಪೂಜಿಸಿ ಹೋಳಿಗೆ ತಯಾರಿಸಿ ಊರ ಹೊರಗಿನ ಪ್ರದೇಶಕ್ಕೆ ತೆರಳಿ ಹೋಳಿಗೆ ಮತ್ತಿತರ ಪದಾರ್ಥ ಎಡೆಕೊಟ್ಟು ತಮ್ಮ ಗ್ರಾಮಗಳನ್ನು ಈ ಸೋಂಕಿನಿಂದ ದೂರಮಾಡಿ ಪಾರು ಮಾಡುವಂತೆ ಪ್ರಾರ್ಥಿಸಿದ್ದಾರೆ.
ಎಡಗಾಲಿನಲ್ಲಿ ಮಾತ್ರ ಒಂಭತ್ತು ಬೆರಳುಳ್ಳ ಮಗು ಜನನ
ಕುಟುಂಬ ಸಮೇತರಾಗಿ ಹೋಮ:
ಹರಪನಹಳ್ಳಿ ತಾಲೂಕಿನ ಹೊಂಬಳಗಟ್ಟಿಯಲ್ಲಿ ಕುಟುಂಬವೊಂದು 20 ದಿನಗಳಿಂದ ವಿವಿಧ ಹೋಮ, ಹವನ ಮಾಡುತ್ತಿದೆ. ಹೊಂಬಳಗಟ್ಟಿಯ ವಿಶ್ವಾರಾಧ್ಯ ಮಠದಲ್ಲಿ ಸುರಪುರ ಹಿರೇಮಠದ ಹೊಳಿಬಸಯ್ಯ ಶಾಸ್ತ್ರಿಗಳು ತಮ್ಮ ಕುಟುಂಬ ಸಮೇತರಾಗಿ ಮೃತ್ಯುಂಜಯ ಹೋಮ, ಗಣ ಹೋಮ, ಧನ್ವಂತರಿ ಹೋಮ, ನವಗ್ರಹ ಹೋಮ ಸೇರಿ ವಿವಿಧ ಹೋಮಗಳನ್ನು ಮಾಡುತ್ತಿದ್ದಾರೆ. ಪ್ರತಿದಿನ ಸಂಜೆ 5ರಿಂದ ರಾತ್ರಿ 8.30ರ ವರೆಗೆ ಪ್ರಾರ್ಥಿಸುತ್ತಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona