Chikkamagaluru: ಶಿಕ್ಷಕರೇ ಇಲ್ಲದ ಜಾಂಬಳೆ ಶಾಲೆ: ಬೀಗ ಹಾಕಲು ಗ್ರಾಮಸ್ಥರ ನಿರ್ಧಾರ

By Govindaraj SFirst Published Aug 22, 2022, 11:58 PM IST
Highlights

ಜಿಲ್ಲಾ ಕೇಂದ್ರದಿಂದ ನೂರು ಕಿಲೋ ಮೀಟರ್ ದೂರದಲ್ಲಿ ಇರುವ ಆ ಗ್ರಾಮದಲ್ಲಿ ನೂರೆಂಟು ಸಮಸ್ಯೆ. ಮೂಲಭೂತ ಸೌಲಭ್ಯದ ಕೊರತೆಯ ನಡುವೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಪೋಷಕರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.22): ಜಿಲ್ಲಾ ಕೇಂದ್ರದಿಂದ ನೂರು ಕಿಲೋ ಮೀಟರ್ ದೂರದಲ್ಲಿ ಇರುವ ಆ ಗ್ರಾಮದಲ್ಲಿ ನೂರೆಂಟು ಸಮಸ್ಯೆ. ಮೂಲಭೂತ ಸೌಲಭ್ಯದ ಕೊರತೆಯ ನಡುವೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಪೋಷಕರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಇದರ ನಡುವೆ ಸರ್ಕಾರಿ ಶಾಲೆ ಮುಚ್ಚಿತು ಎಂದು ಮತ್ತೊಂದು ಶಾಲೆಗೆ ಮಕ್ಕಳನ್ನು ಕಳಿಸಿದರೆ ಆ ಶಾಲೆಯಲ್ಲಿ ಶಿಕ್ಷಕರೇ ಇಲ್ಲ. ಸರ್ಕಾರದ ಬೇಜವಾಬ್ದಾರಿ ವಿರುದ್ಧ ಮಲೆನಾಡಿನ ಜನರು ಆಕ್ರೋಶ ಹೊರಹಾಕಿದ್ದಾರೆ.

ಅತಿಥಿ ಶಿಕ್ಷಕರಿಂದ ಮಕ್ಕಳಿಗೆ ಪಾಠ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಜಾಂಬಳೆ ಗ್ರಾಮದ ಜನ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಶಿಕ್ಷಣ ಇಲಾಖೆಯ ವಿರುದ್ದ ಆಕ್ರೋಶವನ್ನು ಹೊರಹಾಕಿರುವ ಗ್ರಾಮಸ್ಥರು ಶಾಲೆಗೆ ಬೀಗ ಹಾಕುವ ಎಚ್ಚರಿಕೆ ನೀಡಿದ್ದಾರೆ. ಇಂತಹ ಪರಿಸ್ಥಿತಿ ಉದ್ಭವಕ್ಕೆ ಕಾರಣವಾಗಿರುವುದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ. 

Chikkamagaluru: ಸೆರೆ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಪುಂಡಾನೆಯಿಂದ ಮಲೆನಾಡಿಗರು ಹೈರಾಣು

ಹೌದು! ಕಳಸ ತಾಲೂಕಿನ ಕುದುರೆಮುಖ ಸಮೀಪದ ಬಿಳಗಲ್ ಶಾಲೆ ಮುಚ್ಚಿದ ಬಳಿಕ ಅಲ್ಲಿನ ಗಿರಿಜನರು ತಮ್ಮ ಮಕ್ಕಳನ್ನ 5 ಕಿ.ಮೀ.ದೂರದ ಕುದುರೆಮುಖ ಶಾಲೆಗೆ ಕಳಿಸುತ್ತಿದ್ದರು. ಕುದುರೆಮುಖ ಶಾಲೆಯೂ ಮುಚ್ಚಿದ್ದರಿಂದ ಆ ಮಕ್ಕಳನ್ನ 10 ಕಿ.ಮೀ. ದೂರದ ಜಾಂಬಳೆ ಶಾಲೆಗೆ ಕಳಿಸುತ್ತಿದ್ದರು. ಆದರೆ, ಆ ಶಾಲೆಗೆ ಶಿಕ್ಷಕರೇ ಇಲ್ಲ. ಮೂವರು ಅತಿಥಿ ಶಿಕ್ಷಕರಿದ್ದು ಎಲ್ಲಾ ವಿಷಯದ ಪಾಠವನ್ನೂ ಅವರೇ ಮಾಡುತ್ತಿದ್ದಾರೆ. 42 ಮಕ್ಕಳಿರೋ ಶಾಲೆಯಲ್ಲಿ ಕೇವಲ ಒಬ್ಬರಾದರೂ ಖಾಯಂ ಶಿಕ್ಷಕರಿಲ್ಲ. ಸರ್ಕಾರದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶಿಕ್ಷಕರ ನೇಮಕಕ್ಕೆ 15 ದಿನಗಳ ಗಡುವು: ಶಿಕ್ಷಕರ ಕೊರತೆಯಿಂದ 1ರಿಂದ 7ನೇ ತರಗತಿವರೆಗಿನ 42 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ. ಮಕ್ಕಳಿಗೆ ಬಿಸಿಯೂಟ, ಪುಸ್ತಕ, ಸಮವಸ್ತ್ರ ಕೊಡಲಾಗುತ್ತಿದೆ. ಆದರೆ ಶಿಕ್ಷಕರೇ ಇಲ್ಲದಿದ್ದ ಮೇಲೆ ಇವೆಲ್ಲಾ ವ್ಯರ್ಥ ಅಲ್ಲವೇ  ಶಾಲೆಗೆ ಶಿಕ್ಷಕರ ನೇಮಕ ತುರ್ತಾಗಿ ಆಗಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಕುದುರೆಮುಖ ಸರ್ಕಾರಿ ಶಾಲೆ ಬಾಗಿಲು ಮುಚ್ಚಿದ ಮೇಲೆ ಜಾಂಬಳೆ ಶಾಲೆ ಅಸುಪಾಸಿನ ಹತ್ತಾರು ಗ್ರಾಮಗಳ ಬಡ ಮಕ್ಕಳಿಗೆ ಏಕೈಕ ಶಾಲೆ ಆಗಿದೆ.15 ದಿನದಲ್ಲಿ ಶಿಕ್ಷಕರ ನೇಮಕವಾಗದಿದ್ದರೆ ಶಾಲೆಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.  

ಬಿಜೆಪಿಗೆ ಸಮಾನತೆ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಲ್ಲ: ಸಿದ್ದರಾಮಯ್ಯ

ಬಿಸಿಯೂಟ ಬಿಟ್ಟರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕುದುರೆಮುಖ ಸರ್ಕಾರಿ ಶಾಲೆ ಬಾಗಿಲು ಮುಚ್ಚಿದ ಮೇಲೆ ಜಾಂಬಳೆ ಶಾಲೆ ಹಾಸುಪಾಸಿನಲ್ಲಿದ್ದ ಜಾಂಬಳೆ, ನೆಲ್ಲಿಬೀಡು, ಕೆಂಗನಕೊಂಡ, ಬಿಳಗಲ್ ಸೇರಿದಂತೆ ಹತ್ತಾರು ಹಳ್ಳಿಯ ಬಡ ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ. ಆದರೆ, ಈ ಶಾಲೆಯಲ್ಲಿ ಖಸಯಂ ಶಿಕ್ಷಕರೇ ಇಲ್ಲದಂತಾಗಿದೆ. ಶಾಲೆಗೆ ಕೂಡಲೇ ಶಿಕ್ಷಕರನ್ನ ನೇಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

click me!