10 ದಿನ ಊರು ಸಂಪೂರ್ಣ ಸೀಲ್‌ಡೌನ್: ಗ್ರಾಮಸ್ಥರ ದಿಟ್ಟ ನಿರ್ಧಾರ

By Kannadaprabha NewsFirst Published Jul 29, 2020, 12:15 PM IST
Highlights

ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗೆಜ್ಜಲಗೆರೆ ಗ್ರಾಮವನ್ನು 10 ದಿನ ಸೀಲ್‌ ಡೌನ್‌ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಪಂ ಆವರಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹಿರಿಯ ಮುಖಂಡರು ಹಾಗೂ ಮಾಜಿ ಜನಪ್ರತಿನಿಧಿಗಳು, ಜು. 29ರಿಂದ ಸೀಲ್‌ ಲ್ಡೌನ್ ಮಾಡಲು ತೀರ್ಮಾನ ಕೈಗೊಂಡರು.

ಮದ್ದೂರು(ಜು.29): ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗೆಜ್ಜಲಗೆರೆ ಗ್ರಾಮವನ್ನು 10 ದಿನ ಸೀಲ್‌ ಡೌನ್‌ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಪಂ ಆವರಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹಿರಿಯ ಮುಖಂಡರು ಹಾಗೂ ಮಾಜಿ ಜನಪ್ರತಿನಿಧಿಗಳು, ಜು. 29ರಿಂದ ಸೀಲ್‌ ಲ್ಡೌನ್ ಮಾಡಲು ತೀರ್ಮಾನ ಕೈಗೊಂಡರು.

ಬೆಳಗ್ಗೆ 6 ರಿಂದ 9ರವರೆಗೆ ಅಂಗಡಿ ತೆರೆದು ವ್ಯಾಪಾರ ನಡೆಸಿ ಬಳಿಕ ಬಂದ್‌ ಮಾಡಬೇಕು. ಗ್ರಾಮದ ಅಕ್ಕಪಕ್ಕ ಸೋಂಕಿತರು ಹೆಚ್ಚಾಗಿರುವುದರಿಂದ ಗ್ರಾಪಂ ವತಿಯಿಂದ ಗ್ರಾಮದಲ್ಲಿ ಸ್ಯಾನಿಟೈಸರ್‌ ಸಿಂಪಡಿಸಬೇಕು. ಕಡ್ಡಾಯವಾಗಿ ಜನರು ಮಾಸ್ಕ್ ಧರಿಸಬೇಕು. ವೃದ್ಧರು ಮತ್ತು ಮಕ್ಕಳು ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಯಾವುದೇ ಸರ್ಕಾರ ನನ್ನ ಕೈ, ಬರವಣಿಗೆ ಕಟ್ಟಿಹಾಕಲು ಅಸಾಧ್ಯ ಎಂದ 'ಹಳ್ಳಿಹಕ್ಕಿ'

ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಿಂದ ಸೋಂಕು ಹರಡುವ ಭೀತಿ ಇದೆ. ಗ್ರಾಮದಿಂದ ಕೆಲಸಕ್ಕೆ ಹೋಗುವ ಸ್ಥಳೀಯ ಕಾರ್ಮಿಕರು 10 ದಿನ ರಜೆ ಪಡೆದು ಮನೆಯಲ್ಲೇ ಇರಬೇಕು. ಒಂದು ವೇಳೆ ಕೆಲಸ ಹೋದರೆ 10 ದಿನಗಳ ಕಾಲ ಗ್ರಾಮಕ್ಕೆ ಪ್ರವೇಶ ಮಾಡದಂತೆ ನಿಷೇಧ ಹೇರುವ ಜೊತೆಗೆ ಕಾರ್ಖಾನೆಗಳ ಮಾಲೀಕರು ಸೋಂಕು ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಗ್ರಾಪಂ ವತಿಯಿಂದ ನೋಟೀಸ್ ನೀಡಲು ತೀರ್ಮಾನಿಸಲಾಯಿತು.

ಗ್ರಾಮಸ್ಥರು ಮದ್ಯಪಾನ ಮಾಡಲು ಮತ್ತು ಅನಗತ್ಯವಾಗಿ ಮದ್ದೂರು ಹಾಗೂ ಮಂಡ್ಯ ಕಡೆಗೆ ಓಡಾಡಬಾರದು. ತೀರ್ಮಾನಕ್ಕೆ ವಿರುದ್ಧವಾಗಿ ನಡೆದಲ್ಲಿ ದಂಡ ವಿಧಿಸುವುದು, ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥ ವಿತರಣೆ, ಹಾಲು ಖರೀದಿಸುವಾಗ ಮಾÓ್ಕ… ಧರಿಸುವುದು, ವರಮಹಾಲಕ್ಷ್ಮಿ ಹಬ್ಬ, ಶ್ರಾವಣ ಮಾಸದಲ್ಲಿ ದೇವಾಲಯಕ್ಕೆ ಬರುವ ಭಕ್ತರ ಪ್ರವೇಶ ನಿರ್ಬಂಧಿಸಿ, ದೇವಾಲಯದಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳಲು ಅರ್ಚಕರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಯಿತು.

ಆಪರೇಷನ್ ಕಮಲ ಮಾಡಿದ್ಯಾಕೆ..? ಕಾರಣ ರಿವೀಲ್ ಮಾಡಿದ ನಳಿನ್ ಕುಮಾರ್..!

ಸಭೆಯಲ್ಲಿ ಜಿ.ಟಿ. ಪುಟ್ಟಸ್ವಾಮಿ, ಜಿ.ಟಿ. ಕಂಡೇಗೌಡ, ಜಿ.ಎಸ್‌. ಚಂದ್ರಶೇಖರ್‌ , ಶಂಕರ್‌, ಜಿ.ಎಚ್‌. ವೀರಪ್ಪ, ಜಿ.ಸಿ. ಮಹೇಂದ್ರ, ಹರೀಶ್‌, ಗುರುಮೂರ್ತಿ, ನಾಗಣ್ಣ, ಜಿ.ಎ. ಶಂಕರ್‌ , ಲಿಂಗಪ್ಪಾಜಿ, ಆರೋಗ್ಯ ಇಲಾಖೆಯ ನಿರೀಕ್ಷಕ ಪ್ರವೀಣ್‌ ಇದ್ದರು.

click me!