ಆಸ್ಪತ್ರೆಯಿಂದ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಡಿಶ್ಚಾರ್ಜ್

By Suvarna News  |  First Published Mar 6, 2024, 10:16 PM IST

ವಿಪರೀತ ತಲೆ‌ನೋವು ಹಿನ್ನೆಲೆ ಸಣ್ಣ ಸರ್ಜರಿಗೆ ಒಳಗಾಗಿದ್ದ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.


ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮಾ.06): ಅನಾರೋಗ್ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಡಿಶ್ಚಾರ್ಜ್ ಆಗಿದ್ದಾರೆ. ಕೆಲ‌ದಿನಗಳಿಂದ ಸುಸ್ತು, ಆಯಾಸ, ತಲೆನೋವಿನಿಂದ ಬಳಲುತ್ತಿದ್ದ ಜಿಗಜಿಣಗಿ‌ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಲಾಗಿದ್ದಾರೆ. ಈ ಹಿನ್ನೆಲೆ ಒಂದು ವಾರಗಳ ಹಿಂದೆ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಈಗ  ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ. 

Latest Videos

undefined

ಡಿಶ್ಚಾರ್ಜ್ ಬೆನ್ನಲ್ಲೆ ಶಕ್ತಿದೇವಿಯ ದರ್ಶನ ಪಡೆದ ಸಂಸದ
ಡಿಶ್ಚಾರ್ಜ್ ಆದ ಬೆನ್ನಲ್ಲೆ ಸಖತ್ ಆಕ್ಟಿವ್ ಆಗಿರೋ‌ ಸಂಸದ ಜಿಗಜಿಣಗಿ ಸವದತ್ತಿಗೆ ತೆರಳಿ ತಾಯಿ ರೇಣುಕಾದೇವಿ ದರ್ಶನ ಪಡೆದರು. ಈ ಸಾರಿ ತಮಗೆ ಟಿಕೇಟ್ ಸಿಗುವ ಭರವಸೆಯಲ್ಲಿರುವ ಜಿಗಜಿಣಗಿ ಎರಡ್ಮೂರು ದಿನಗಳಲ್ಲಿ ಕ್ಷೇತ್ರದಾದ್ಯಂತ ಓಡಾಡಲಿದ್ದಾರೆ ಎನ್ನುವ ಮಾಹಿತಿಗಳು ಅವರ ಆಪ್ತವಲಯದಿಂದ ತಿಳಿದು ಬಂದಿವೆ. ವಯಸ್ಸಿನ ಕಾರಣ, ಪಿಟ್‌ನೆಸ್ ಕೊರತೆ ಹಿನ್ನೆಲೆ ಜಿಗಜಿಣಗಿಯವರಿಗೆ ಈ ಬಾರಿ ಟಿಕೇಟ್ ತಪ್ಪಲಿದೆ ಎನ್ನುವ ಮಾತುಗಳು ಕೇಳಿ‌ಬರ್ತಿದ್ವು. ಆದ್ರಿಗ ಆಸ್ಪತ್ರೆಯಿಂದ‌ ಡಿಶ್ಚಾರ್ಜ್ ಆಗಿರೋ ಅವರು ಲೋಕಸಭಾ ಚುನಾವಣಾ ಪೀಲ್ಡ್‌ಗೆ ವಾಪಸ್ ಆಗ್ತಿದ್ದಾರೆ.

ಸಂಸದರ ವಿರುದ್ದ ಆಕ್ರೋಶ, ಚಿತ್ರದುರ್ಗ ಜಿ.ಪಂ ಕಚೇರಿಗೆ ಟ್ಯಾಕ್ಟರ್ ನಿಲ್ಲಿಸಿ ರೈತರ ಪ್ರತಿಭಟನೆ

ಶಿವರಾತ್ರಿ ಬಳಿಕ ಪೀಲ್ಡಿಗಿಳಿಯಲಿರುವ ಹಿರಿಯ ಸಂಸದ
ಡಿಶ್ಚಾರ್ಜ್ ಬಳಿಕ ದೇಗುಲ ದರ್ಶನ ಪಡೆದು ವಿಜಯಪುರಕ್ಕೆ ವಾಪಸ್ ಆಗಿರುವ ಸಂಸದ ರಮೇಶ ಜಿಗಜಿಣಗಿ ಇನ್ನೂ ಎರಡ್ಮೂರು ದಿನ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಶಿವರಾತ್ರಿಯ ವರೆಗು ತಮ್ಮ ನಿವಾಸದಲ್ಲಿ ರೆಸ್ಟ್ ಮಾಡಲಿರುವ ಜಿಗಜಿಣಗಿ ಕುಟುಂಬಸ್ಥರ ಜೊತೆಗೆ ಕಾಲ‌ ಕಳೆಯಲಿದ್ದಾರೆ. ಶಿವರಾತ್ರಿ ಬಳಿಕ ತಮ್ಮ ಅಭಿಮಾನಿಗಳ, ಕಾರ್ಯಕರ್ತರನ್ನ ಭೇಟಿ ಮಾಡಲಿದ್ದಾರೆ. ಅಲ್ಲದೆ ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಜೊತೆಗೆ ಸಭೆಗಳನ್ನ ನಡೆಸಲಿದ್ದಾರೆ ಎನ್ನಲಾಗಿದೆ. ಕೆಲ ಬಿಜೆಪಿ ಮುಖಂಡರು ಸಹ ಜಿಗಜಿಣಗಿಯರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. 

ಅಸಲಿಗೆ ಆಗಿದ್ದೇನು
ಸಂಸದ ಜಿಗಜಿಣಗಿ ಆರೋಗ್ಯದ ಕುರಿತಂತೆ ಹಲವಾರು ಊಹಾಪೋಹಗಳು ಕೇಳಿ ಬಂದಿದ್ದವು. ರಾಜಕೀಯ ವಲಯದಲ್ಲು ಕೆಲ ವದಂತಿಗಳು ಹರಡಿದ್ದವು.‌ ವದಂತಿಗಳ ಬಗ್ಗೆ ಸ್ವತಃ ಜಿಗಜಿಣಗಿಯವರೇ ಏಷ್ಯಾನೆಟ್ ಸುವರ್ಣ ನ್ಯೂಸ್ ಎದುರು ಅಕ್ರೋಶ ಹೊರ ಹಾಕಿದ್ರು. ನಾನು ಬಾಗಲಕೋಟೆಯಲ್ಲಿ ಆಸ್ಪತ್ರೆಗೆ ದಾಖಲಾದ್ರೆ ನನಗೆ ಹಾರ್ಟ್ ಆಗಿದೆ ಎಂದು ಕೆಲ ರಾಜಕೀಯ ವ್ಯಕ್ತಿಗಳು ನನ್ನ ಅನಾರೋಗ್ಯದ ಬಗ್ಗೆ ಕೂಹಕವಾಡಿದ್ರು. ಅವರಿಗೆಲ್ಲ ಒಳ್ಳೆಯದಾಗಲಿ ಎಂದು ಆಕ್ರೋಶ ಹೊರಹಾಕಿದ್ರು. ಬಳಿಕ ವಿಪರೀತ ತಲೆನೋವಿನಿಂದಾಗಿ ಸಣ್ಣ ಸರ್ಜರಿಗೆ ಒಳಗಾಗುವ ಅನಿವಾರ್ಯತೆ ಬಂದ ಕಾರಣ ಕೆ.ಎಲ್.ಇ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಲ್ಲಿ ನೀರು ತುಂಬಿತ್ತು, ಇದು ವಿಪರೀತ ತಲೆನೋವಿಗೂ ಕಾರಣವಾಗಿತ್ತು ಎನ್ನಲಾಗಿತ್ತು, ತಮ್ಮ ಆಪ್ತರ ಬಳಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಗ್ಗೆ ಹೇಳಿಕೊಂಡಿದ್ದರು. ಸಧ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮತ್ತೆ ವಿಜಯಪುರ ಲೋಕಸಭಾ ಅಖಾಡಕ್ಕೆ ಧುಮುಕಲು ರೆಡಿಯಾಗಿ ಬಂದಿದ್ದಾರೆ.

ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸೋಕೆ ಮಹದಾಯಿ ಹೋರಾಟಗಾರರ ಮಾಸ್ಟರ್ ಪ್ಲಾನ್

ಸಂಸದರ ಆರೋಗ್ಯದ ಬಗ್ಗೆ ವದಂತಿ ; ಮಾಜಿ ಸಚಿವ ಅಪ್ಪು ಆಕ್ರೋಶ
ಸಂಸದರ ಆರೋಗ್ಯದ ಬಗ್ಗೆ ಹರಡಿದ್ದ ವದಂತಿಗಳ ಬಗ್ಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಫೇಸ್ಬುಕ್ ಲೈವ್ ಬಂದು ಆಕ್ರೋಶ ಹೊರಹಾಕಿದ್ರು. ಬೆಳಗಾವಿ ಕೆ.ಎಲ್.ಇ‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇಷ್ಟರಲ್ಲೆ ವಾಪಸ್ ಆಗಲಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳು ಆತಂಕಗೊಳ್ಳಬಾರದು ಎಂದಿದ್ದರು. ಇನ್ನು ವಿನಾಕಾರಣ ರಾಜಕೀಯ ವಲಯದಲ್ಲಿ ಜಿಗಜಿಣಗಿಯರ ಆರೋಗ್ಯ ಸ್ಥಿತಿಯ ಬಗ್ಗೆ ವದಂತಿ ಹರಡಿದವರ ವಿರುದ್ಧವು ಗರಂ ಆಗಿದ್ದರು.

click me!