ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸೋಕೆ ಮಹದಾಯಿ ಹೋರಾಟಗಾರರ ಮಾಸ್ಟರ್ ಪ್ಲಾನ್

By Suvarna News  |  First Published Mar 6, 2024, 9:14 PM IST

ಲೋಕಸಭೆ ಚುನಾವಣೆ ಹೊಸ್ತಿನಲಿನಲ್ಲಿಯೂ ಮಹದಾಯಿ ವಿಷಯ ರಾಜಕೀಯ ಪಕ್ಷಗಳಿಗೆ ಬಿಸಿತುಪ್ಪ ಆಗಿರೋ ಎಲ್ಲ ಲಕ್ಷಣಗಳು ಕಾಣ್ತಾ ಇದ್ದು, ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸೋಕೆ ಮಹದಾಯಿ ಹೋರಾಟಗಾರರು ಮುಂದಾಗಿದ್ದಾರೆ.


ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ (ಮಾ.6): ಪ್ರತಿ ಚುನಾವಣೆಯಲ್ಲಿ ಮಹದಾಯಿ ವಿಷಯ ರಾಜಕೀಯ ಪಕ್ಷಗಳಿಗೆ ಸವಾಲಾಗಿ ಎದುರಾಗುತ್ತಲೇ ಇರುತ್ವೆ. ಸದ್ಯ ಲೋಕಸಭೆ ಚುನಾವಣೆ ಹೊಸ್ತಿನಲಿನಲ್ಲಿಯೂ ಮಹದಾಯಿ ವಿಷಯ ರಾಜಕೀಯ ಪಕ್ಷಗಳಿಗೆ ಬಿಸಿತುಪ್ಪ ಆಗಿರೋ ಎಲ್ಲ ಲಕ್ಷಣಗಳು ಕಾಣ್ತಾ ಇದ್ದು, ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸೋಕೆ ಮಹದಾಯಿ ಹೋರಾಟಗಾರರು ಮುಂದಾಗಿದ್ದಾರೆ.

Tap to resize

Latest Videos

ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಮಹತ್ವದ ಯೋಜನೆ ಮಹದಾಯಿ ಮತ್ತು ಕಳಸಾ ಬಂಡೂರಿ. 2018ರ ಆಗಸ್ಟ್ ನಲ್ಲಿಯೇ ನ್ಯಾಯಾಧೀಕರಣ ನೀರು ಹಂಚಿಕೆ ಮಾಡಿ ಮಧ್ಯಂತರ ತೀರ್ಪು ನೀಡಿತ್ತು. ಆದರೆ ಅದರ ಪ್ರಗತಿಮಾತ್ರ ಆಗಿಲ್ಲ. ಕರ್ನಾಟಕ್ಕೆ ಹಂಚಿಕೆಯಾಗಿರುವ ನೀರಿನ ಪೈಕಿ 3.90 ಟಿಎಂಸಿ ಕುಡಿಯುವ ನೀರು ಪೂರೈಕೆಗೆ ಬಳಸಿಕೊಳ್ಳಲು ಅವಕಾಶವಿದೆ. ಇದಕ್ಕೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಗೆ 2022ರಲ್ಲಿ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿತ್ತು. ಆದರೆ ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಈ ಅನುಮೋದನೆ ಅನುಮತಿಸಲು ಇತ್ತೀಚೆಗೆ ನಿರಾಕರಿಸಿದೆ. ಇದು ಈಗ ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ  ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಜಯಲಲಿತಾ ಕೆಜಿ ಗಟ್ಟಲೆ ಚಿನ್ನಾಭರಣ ತಮಿಳುನಾಡು ಹಸ್ತಾಂತರಕ್ಕೆ ಕರ್ನಾಟಕ ಹೈಕೋರ್ಟ್‌ ಲಗಾಮು!

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಹದಾಯಿಗಾಗಿ ಮಹಾವೇದಿಕೆ ಸಭೆಯನ್ನು ನಡೆಸಲಾಗಿತ್ತು. ಸಭೆಯಲ್ಲಿ ಉಗ್ರ ಹೋರಾಟದ ನಿರ್ಣಯವೊಂದನ್ನು ಕೈಗೊಳ್ಳಲಾಗಿದೆ. ಹೌದು, ಈ ಚುನಾವಣೆಯೊಳಗೆ ಮಹದಾಯಿ ವಿವಾದ ಇತ್ಯರ್ಥ ಆಗಬೇಕು. ಇಲ್ಲದೇ ಹೋದಲ್ಲಿ, ಚುನಾವಣೆಯಲ್ಲಿ ಜನರೇ ರಾಜಕೀಯ ಪಕ್ಷಗಳನ್ನು ಬಹಿಷ್ಕರಿಸಬೇಕು. ಈ ಮೂಲಕ ಮಹದಾಯಿ ಪ್ರಯೋಜನ ಪಡೆಯಲಿರೋ ಹುಬ್ಬಳ್ಳಿ-ಧಾರವಾಡದ ಜನತೆ ನಮ್ಮ ಹೋರಾಟಕ್ಕೆ ಕೈ ಜೋಡಿಸಬೇಕು. ಇಲ್ಲದೇ ಹೋದಲ್ಲಿ ಜನರಿಗೆ ನೀರು ಬರೋ ಅಮ್ಮಿನಬಾವಿ ಜಾಕ್ ವೆಲ್ ಅನ್ನೇ ಬಂದ್ ಮಾಡ್ತೇವಿ ಅಂತಾ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಹೋರಾಟಗಾರರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಜನೆವರಿಯಲ್ಲಿ ಎಲ್ಲ ಕ್ಲಿಯರ್ ಮಾಡುತ್ತೇವೆ ಅಂತಾ ಭರವಸೆ ನೀಡಿದ್ದರಂತೆ. ಆದರೆ ವನ್ಯಜೀವಿ ಮಂಡಳಿ ಅನುಮತಿಯೇ ಇತ್ತೀಚೆಗೆ  ನಿರಾಕರಣೆಗೊಂಡಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಅನ್ನೋದು ಹೋರಾಟಗಾರರ ಆಗ್ರಹ ಆಗಿತ್ತು.

ಭಿಕ್ಷಾಟನೆ ಜಾಗಕ್ಕೆ ಇಬ್ಬರು ಮಹಿಳೆಯರ ಕಿತ್ತಾಟ 'ದಯವಿಟ್ಟು ಆಕೆಗೆ ಹೆದರಿಸಿ ಸಾರ್' ಪೊಲೀಸ್‌ಗೆ ಭಿಕ್ಷುಕಿ ಕರೆ!

ಈ ಮಧ್ಯೆ ಇತ್ತೀಚೆಗೆ ನವಲಗುಂದಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ, ನಾವು ಟೆಂಡರ್ ಕರೆಯೋಕೆ ಸಿದ್ಧ  ಅದೇವಿ, ಪರಿಸರ ಸಚಿವಾಲಯದ ಅನುಮತಿ ಕೊಡಿಸಲು ಪ್ರಹ್ಲಾದ ಜೋಶಿಗೆ ಆಗುತ್ತಿಲ್ಲ ಎಂದು ಹೇಳುವ ಮೂಲಕ ಮತ್ತೇ ಮಹದಾಯಿಯಲ್ಲಿ ರಾಜಕೀಯ ಶುರುವಾಗುವಂತೆ ಮಾಡಿದ್ರು, ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅನೇಕ ಹೋರಾಟಗಳಿಗೆ ವೇದಿಕೆಯಾಗಿರುವ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಜಾಕವೆಲ್ ಬಂದ್ ಮಾಡೋದು ಮಾತ್ರವಲ್ಲ. ಬಿಜೆಪಿ-ಕಾಂಗ್ರೆಸ್ ನವರಿಗೆ ನವಲಗುಂದ ಭಾಗದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಗ್ರಾಮಗಳಿಗೆ ಬರೋದಕ್ಕೂ ಬಿಡುವುದಿಲ್ಲ ಅಂತಾ ನವಲಗುಂದದ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ ಇಷ್ಟು ದಿನ ತಣ್ಣಗಾಗಿದ್ದ ಮಹದಾಯಿ ಹೋರಾಟ ಮತ್ತೇ ಭುಗಿಲೇಳುತ್ತಿದ್ದು, ರಾಜಕಾರಣಿಗಳ ಭರವಸೆಗಳಿಂದ ಹೋರಾಟಗಾರರು ರೋಸಿ ಹೋಗಿದ್ದಾರೆ  ಹೀಗಾಗಿ ಲೋಕಸಭೆ ಚುನಾವಣೆ ವೇಳೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಂದು ಮಹದಾಯಿ ಬಂಡಾಯ ಮೊಳಗುವ ಲಕ್ಷಣಗಳು ಗೋಚರಿಸುತ್ತಿವೆ.

click me!