ಮಹೊರಂ ಹಬ್ಬದ ಹಿನ್ನೆಲೆಯಲ್ಲಿ ಕೆಂಡ ಹಾಯುವಾಗ ಇಲ್ಲೊಬ್ಬ ವ್ಯಕ್ತಿ ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತುಕೊಂಡು ದೇವರಿಗೆ ಶಿರಬಾಗಿ ನಮಿಸಿದ್ದಾರೆ.
ವಿಜಯಪುರ (ಜು.15): ಮಹೊರಂ ಹಬ್ಬದ ಹಿನ್ನೆಲೆಯಲ್ಲಿ ಕೆಂಡ ಹಾಯುವಾಗ ಇಲ್ಲೊಬ್ಬ ವ್ಯಕ್ತಿ ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತುಕೊಂಡು ದೇವರಿಗೆ ಶಿರಬಾಗಿ ನಮಿಸಿದ್ದಾರೆ.
ಹೌದು, ಬೆಂಕಿಯ ಶಾಖ ಸ್ವಲ್ಪವೇ ಕೈಗೆ ತಾಗಿದರೆ ಸಾಕು ಜೀವವೇ ಹೋದಂತೆ ಬಾಯಿ ಬಡಿದುಕೊಂಡು ನೋವು ಅನುಭವಿಸುತ್ತೇವೆ. ಆದರೆ, ಇಲ್ಲಿ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಭಕ್ತಿ ಪರಾಕಾಷ್ಟೆ ಮೆರೆದಿರುವ ಭಕ್ತನೊಬ್ಬ ನಿಗಿ ನಿಗಿ ಕಾಯುತ್ತಿದ್ದ ಬೆಂಕಿ ಕೆಂಡದ ಮೇಲೆ ಕಂಬಳಿಯನ್ನು ಹಾಸಿ ಕುಳಿತು ದೇವರಿಗೆ ಶಿರಬಾಗಿ ನಮಿಸಿದ್ದಾನೆ. ಈ ವಿಟಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಪ್ರತಿ ವರ್ಷ ಮೊಹರಂ ಹಬ್ಬದಲ್ಲಿ ಇದೇ ರೀತಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮದರಿ ಗ್ರಾಮದಲ್ಲಿ ನಡೆದಿದೆ. ಮೊಹರಂ ಹಬ್ಬದ ನಿಮಿತ್ಯ ಆಚರಣೆ ಮಾಡಲಾಗುವ ಗಂಧ ರಾತ್ರೀ ಹಬ್ಬದಲ್ಲಿ ವಿಚಿತ್ರ ಘಟನೆ ಕಂಡುಬಂದಿದೆ. ಮೊಹರಂ ನಿಮಿತ್ಯ ಬೆಂಕಿ ಹಾಯೋದು ವಾಡಿಕೆಯಿದೆ. ನಮ್ಮ ರಾಜ್ಯ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಮೊಹರಂ ಹಬ್ಬದ ನಿಮಿತ್ತ ಬೆಂಕಿ ಕೆಂಡವನ್ನು ಹಾಯುತ್ತಾರೆ. ಆದರೆ, ಇಲ್ಲೊಬ್ಬ ಭಕ್ತ ಬೆಂಕಿ ಕೆಂಡದಲ್ಲಿಯೇ ಕಂಬಳಿ ಹಾಸಿ ಕುಳಿತು ಅಲ್ಲಿಯೇ ಶಿರಬಾಗಿ ದೇವರಿಗೆ ನಮಿಸಿದ್ದಾರೆ. ಹೀಗೆ ದೇವರಿಗೆ ಭಕ್ತಿ ಸಮರ್ಪಿಸಿದ ವ್ಯಕ್ತಿ ಯಲ್ಲಪ್ಪ ಹುಗ್ಗಿ ಎಂಬಾತ ಆಗಿದ್ದಾನೆ.
ಟ್ರಂಪ್ ಹತ್ಯೆ ಯತ್ನ: ನಿಜವಾದ ಕೋಠಿ ಮಠದ ಶ್ರೀಗಳ ಭವಿಷ್ಯ!
ಮೊಹರಂ ಹಬ್ಬದ ಗಂಧ ರಾತ್ರೀ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಟ್ಟಿಗೆಗೆ ಬೆಂಕಿ ಹೊತ್ತಿಸಿ ಅದರಿಂದ ಕೆಂಡ ಮಾಡಲಾಗುತ್ತದೆ. ಬೆಂಕಿ ಕೆಂಡದ ಮೇಲೆ ಜನರು ಹಾದು ಹೋಗುವುದು ವಾಡಿಕೆ. ಆದರೆ, ಇದೇ ಬೆಂಕಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತು ಯಲ್ಲಪ್ಪ ಅಚ್ಚರಿ ಮೂಡಿಸಿದ್ದಾರೆ. ಆದರೆ, ಪುನಃ ಈ ರೀತಿಯಾಗಿ ಬೇರೆ ಯಾರನ್ನೂ ಮಾಡಲು ಬಿಡದೇ ಗ್ರಾಮಸ್ಥರು ತಡೆದಿದ್ದಾರೆ. ಉಳಿದಂತೆ ಹಲವು ಭಕ್ತರು ಮೊಹರಂ ಹಬ್ಬದ ನಿಮಿತ್ತು ಬೆಂಕಿ ಕೊಂಡವನ್ನು ಹಾಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದ್ದಾರೆ.
ಟ್ರಂಪ್ ಮೇಲೆ ಗುಂಡಿನ ದಾಳಿ ಮುನ್ಸೂಚನೆ ಕೊಟ್ಟಿದ್ರಾ ಕೋಡಿಮಠ ಸ್ವಾಮೀಜಿ:
ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಂತೆ ನಾವು ಕ್ರೋಧಿನಾಮ ಸಂವತ್ಸರದಲ್ಲಿ ಪಂಚ ಭೂತಗಳಾದ ಭೂಮಿ, ಆಕಾಶ, ನೀರು, ವಾಯು, ಬೆಂಕಿಯಿಂದ ಭಾರೀ ತೊಂದರೆ ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಕರ್ನಾಟಕ ಮುಂಬೈ ಸೇರಿದಂತೆ ದೇಶದೆಲ್ಲಡೆ ಭಾರಿ ಮಳೆ ಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಲಾಗಿದೆ.
ಅಹಿಂದಾ ಪರ ಎನ್ನುವ ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ ನಟ ಚೇತನ್ ಅಹಿಂಸಾ
ಕೋಡಿಮಠಶ್ರೀಗಳು 2024ರ ವರ್ಷ ಭವಿಷ್ಯವನ್ನು ಹೇಳುವಾಗ ಈ ವರ್ಷ ಭಯಾನಕ ಅನುಭವನ್ನು ನೀಡಲಿದೆ ಎಂದಿದ್ದರು. ಈ ವರ್ಷ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ ಹಾಗೆ ನೋವುಗಳು ಸಂಭವಿಸಬಹುದು ಎಂದಿದ್ದರು. ಇದರ ಜತೆಯಲ್ಲಿ ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ. ದೇಶದಲ್ಲಿ ಅಸ್ಥಿರತೆ, ಯುದ್ಧ ಭೀತಿ, ಅಣುಬಾಂಬ್ ಸ್ಫೋಟಗೊಳ್ಳು ಬಹುದು. ಇದರೊಂದಿಗೆ ಜಗತ್ತಿಗೆ ಮತ್ತೊಮ್ಮೆ ರೋಗ ಹರಡುವ ಸಾಧ್ಯತೆ ಜೊತೆಗೆ ದೊಡ್ಡ ಸುನಾಮಿಯೊಂದು ಎದ್ದು ಜಗತ್ತಿಗೆ ಅಪಾಯವಾಗಲಿದೆ ಎಂದು ಹೇಳಿದ್ದರು.