ಮುರುಘಾ ಮಠದಲ್ಲಿ ಕಳುವಾಗಿದ್ದ ಬೆಳ್ಳಿ ಪುತ್ಥಳಿ ದಿಢೀರ್ ಪ್ರತ್ಯಕ್ಷ: ಗೋಣಿ ಚೀಲದಲ್ಲಿ ತಂದಿಟ್ಟು ಕಳ್ಳರು ಪರಾರಿ

By Govindaraj S  |  First Published Jul 15, 2024, 5:46 PM IST

ಮುರುಘಾ ಮಠದಲ್ಲಿದ್ದ ಬೆಳ್ಳಿ ಪುತ್ಥಳಿ ಕಳವು ಪ್ರಕರಣಕ್ಕೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಠದ ಆವರಣದಲ್ಲಿಯೇ ಗೋಣಿ ಚೀಲದಲ್ಲಿ‌ ಬೆಳ್ಳಿ ಪುತ್ಥಳಿ ತಂದಿಟ್ಟು ಪರಾರಿ ಆಗಿದ್ದಾರೆ ಐನಾತಿ ಕಳ್ಳರು. ಈ ಕೃತ್ಯ ಹೊರಗಿನವರದ್ದೋ? ಅಥವಾ ಮಠದಲ್ಲಿಯೇ ಇರುವ ಕೆಲವರ ಕೈವಾಡವೋ ಎನ್ನುವ ಅನುಮಾನ ಮೂಡಿ ಬಂದಿದೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜು.15): ಮುರುಘಾ ಮಠದಲ್ಲಿದ್ದ ಬೆಳ್ಳಿ ಪುತ್ಥಳಿ ಕಳವು ಪ್ರಕರಣಕ್ಕೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಠದ ಆವರಣದಲ್ಲಿಯೇ ಗೋಣಿ ಚೀಲದಲ್ಲಿ‌ ಬೆಳ್ಳಿ ಪುತ್ಥಳಿ ತಂದಿಟ್ಟು ಪರಾರಿ ಆಗಿದ್ದಾರೆ ಐನಾತಿ ಕಳ್ಳರು. ಈ ಕೃತ್ಯ ಹೊರಗಿನವರದ್ದೋ? ಅಥವಾ ಮಠದಲ್ಲಿಯೇ ಇರುವ ಕೆಲವರ ಕೈವಾಡವೋ ಎನ್ನುವ ಅನುಮಾನ ಮೂಡಿ ಬಂದಿದೆ. ಈ ಕುರಿತು ವರದಿ ಇಲ್ಲಿದೆ. ಗೋಣಿ ಚೀಲದಲ್ಲಿ ಶಾಲೆಯ ಮುಂಭಾಗ ಬೆಳ್ಳಿ ಪುತ್ಥಳಿ ತಂದಿಟ್ಟು ಪರಾರಿ ಆಗಿರುವ ಕಳ್ಳರು. ಮತ್ತೊಂದೆಡೆ ಇಡೀ ಮಠವನ್ನೇ ಹುಡುಕಿದ್ರು ಪ್ರಕರಣದ ಬಗ್ಗೆ ಸುಳಿವು ಸಿಗ್ತಿಲ್ಲ, ಆದ್ರೆ ಏಕಾಏಕಿ ಹೇಗೆ ಬಂತು ಆಲೋಚಿಸ್ತಿರೋ ಖಾಕಿ ಪಡೆ. ಈ ದೃಶ್ಯಗಳು ಕಂಡು ಕೋಟೆನಾಡಿನ ಪ್ರಸಿದ್ದ ಪರಂಪರೆಯ ಮಠ ಮುರುಘಾ ಮಠದ ಆವರಣದಲ್ಲಿ. 

Tap to resize

Latest Videos

ಇದೇ ತಿಂಗಳು ೧೧ನೇ ತಾರೀಖು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಸವಕುಮಾರ ಶ್ರೀಗಳು ಮುರುಘಾ ಮಠದ ದರ್ಬಾರ್ ಹಾಲ್‌ನಲ್ಲಿ ಇದ್ದ ಮುರುಘಾ ಶರಣರ ಸುಮಾರು ೨೦ ಕೆಜಿ ತೂಕದ ಬೆಳ್ಳಿ ಪುತ್ಥಳಿ ಕಳವಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಕಳ್ಳರನ್ನ ಪತ್ತೆ ಹಚ್ಚಿ ಎಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ದಿನವೇ ಪೊಲೀಸರು ತನಿಖೆ ಚುರುಕುಗೊಳಿಸಿ, ಮಠದಲ್ಲಿರುವ ಸಿಬ್ಬಂದಿಗಳ‌ ವಿಚಾರಣೆ ನಡೆಸಿದ್ದರು. ಈ ಬಗ್ಗೆ ಮಾತನಾಡಿದ ಬಸವಕುಮಾರ ಶ್ರೀಗಳು, ಪುತ್ಥಳಿ ಸಿಕ್ಕಿರುವದು ನಮಗೆ ಸಮಾಧಾನ‌ ಇಲ್ಲ. ಇದರ ಹಿಂದನ ಉದ್ದೇಶ ಏನು? ಯಾರಿದ್ದಾರೆ ಎಂಬುದು ನಮಗೆ ಗೊತ್ತಾಗಬೇಕಿದೆ. 

ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡ್ತಿದ ಮೇಲೆ‌ ಈ ಬೆಳವಣಿಗೆ ಆಗಿದೆ.‌ ಇದು ಇಲ್ಲಿಗೆ ನಿಲ್ಲಬಾರದು, ಶ್ರಿ ಮಠದ ಬಗ್ಗೆ ಈ ರೀತಿ ಅಲೋಚನೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು. ಇನ್ನೂ ಪ್ರಕರಣ ಸಂಬಂಧ ಮೊದಲು ಮಠದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದ, ಹಿಂದಿನ ಮುರುಘಾ ಮಠದ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಶ್ರೀಗಳು ಮಾತನಾಡಿ, ಕಳವಾಗಿದ್ದ ಬೆಳ್ಳಿ ಪುತ್ಥಳಿ ಪತ್ತೆ ಆಗಿದ್ದು ಖುಷಿ ತಂದಿದೆ. ಕಳ್ಳತನ ಮೇಲೆ ಕೆಲವರ ಮೇಲೆ‌‌ ಶಂಕಿಸಿ ತೀವ್ರ ವಿಚಾರಣೆಯನ್ನು ಪೊಲೀಸರು ನಡೆಸಿದ್ದರು. ತನಿಖೆ ತೀವ್ರಗೊಂಡ ಬೆನ್ನಲ್ಲೇ ಕಳ್ಳರು ಪುತ್ಥಳಿ ತಂದು ಹಾಕಿದ್ದಾರೆ. ಈ ಪ್ರಕರಣ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಬೇಕು. ಕದ್ದವರು ಯಾರು? ಮರಳಿ ತಂದವರು ಯಾರೆಂದು ಬಯಲಾಗಬೇಕು. 

ಮುರುಘಾ ಮಠದಲ್ಲಿ ಮುರುಘಾ ಶರಣರ 22 ಕೆಜಿ ತೂಕದ ಬೆಳ್ಳಿ ಪುತ್ಥಳಿ ಕಳವು: ದೂರು ಬಳಿಕ ಆಕ್ಟೀವ್ ಆದ ಪೊಲೀಸರು!

ಮಠದ ಕಾಂಪೌಂಡ್ ಹೊರಗಿನಿಂದಲೇ ಗೋಣಿಚೀಲದಲ್ಲಿ ಪುತ್ಥಳಿ ಎಸೆದಿದ್ದಾರೆನ್ನಿಸುತ್ತದೆ. ಕಳ್ಳತನಕ್ಕೂ ಮೊದಲು ಸಿಸಿಟಿವಿ ಆಫ್ ಮಾಡಿದ್ದಾರೆ, ಕಳ್ಳರು ಬುದ್ಧಿವಂತರು ಎಂಬುದು ಗೊತ್ತಾಗುತ್ತದೆ. ನನ್ನ ಮೇಲೂ ಕಳ್ಳತನದ ಆರೋಪ ಹೊರಿಸಲು ಷಡ್ಯಂತ್ರ ನಡೆದಿತ್ತು.‌ ಪೊಲೀಸರ ತನಿಖೆಯಿಂದ ಕಳ್ಳತನ ಪ್ರಕರಣ ಪೂರ್ಣ ಬಯಲಾಗಬೇಕು ಎಂದು ಒತ್ತಾಯಿಸಿದರು. ಒಟ್ಟಾರೆ ಪೊಲೀಸರ ಕೈಗೆ ಎಲ್ಲಿ ಸಿಕ್ಕಿ ಬೀಳ್ತಿವೋ ಎನ್ನುವ ಭಯದಲ್ಲಿ‌‌ ಕಳ್ಳರು ರಾತ್ರೋರಾತ್ರಿ ಬೆಳ್ಳಿ ಪುತ್ಥಳಿ ತಂದಿಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಇದು ಮಠದಲ್ಲಿ ಇರುವವರ ಕೃತ್ಯವೇ ಇರಬೇಕು ಎಂದು ಸಾರ್ವಜನಿಕ ವಲಯದಲ್ಲಿ ಗುಸು ಗುಸು ಶುರುವಾಗಿದ್ದು. ಇದಕ್ಕೆ ಪೊಲೀಸರು ಶೀಘ್ರ‌‌ ಕಳ್ಳರನ್ನು ಬಂಧಿಸುವ ಮೂಲಕ ಉತ್ತರ ಕೊಡಬೇಕಿದೆ.

click me!