95 ಲಕ್ಷ ಅಭಿವೃದ್ಧಿಯ ಮೂರು ಸಮುದಾಯ ಭವನಗಳ ಕಾಮಗಾರಿಗಳಿಗೆ ಶಾಸಕ ಯತ್ನಾಳ ಭೂಮಿಪೂಜೆ

Published : May 25, 2026, 05:25 AM IST
BR Patil Yatnal

ಸಾರಾಂಶ

ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ₹95 ಲಕ್ಷ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಧಾರ್ಮಿಕ ದತ್ತಿ ಇಲಾಖೆ ಮತ್ತು ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಗರದ ಹಲವೆಡೆ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ.

ವಿಜಯಪುರ: ನಗರದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ₹ 95 ಮೊತ್ತದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಭೂಮಿಪೂಜೆ ನೆರವೇರಿಸಿದರು.

ಮೂರು ಸಮುದಾಯ ಭವನಗಳ ಕಾಮಗಾರಿ

ನಗರದ ವಾರ್ಡ್ ನಂ.2 ರಲ್ಲಿನ ಶಿವಬಸಪ್ಪ ಗದ್ದುಗೆ ದೇವಸ್ಥಾನದ ಹತ್ತಿರ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ₹ 10 ಲಕ್ಷ ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ, ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ₹ 15 ಲಕ್ಷ ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಹಾಗೂ ದರ್ಗಾದ ಕರಿಸಿದ್ದೇಶ್ವರ ದೇವಸ್ಥಾನ ಹತ್ತಿರ 2025-26ನೇ ಸಾಲಿನ‌ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ₹ 70 ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರತಿ ಭೂಮಿಪೂಜೆ ಬಳಿಕ ಸಾರ್ವಜನಿಕರ ಅಹವಾಲು ಆಲಿಸಿದರು.

ಇದನ್ನೂ ಓದಿ: ದಾಳಿಕೋರರ ಕೇಸ್‌ ವಾಪಸ್ ಮೂಲಕ ಸರ್ಕಾರ ಯಾವ ಸಂದೇಶ ನೀಡುತ್ತಿದೆ: ಸಿ.ಟಿ.ರವಿ ಪ್ರಶ್ನೆ

ಈ ವೇಳೆ ಪಾಲಿಕೆ ಮೇಯರ್‌ ಎಂ.ಎಸ್.ಕರಡಿ, ಹಾಲುಮತ ಸಮಾಜದ ಅಧ್ಯಕ್ಷ ಮಲ್ಲು ಯಾದವಾಡ, ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ, ಮುಖಂಡರಾದ ಭೀಮನಗೌಡ ಪಾಟೀಲ, ಸಾಯಬಣ್ಣ ಭೋವಿ, ಶಂಕರ ಬಾಲದಂಡಿ, ಈರಣ್ಣ ವಾಡೆದ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ 20 ಹೊಸ ಜಿಟಿಟಿಸಿ ಕೇಂದ್ರ ಸ್ಥಾಪನೆ: ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಘೋಷಣೆ

PREV
Read more Articles on
click me!

Recommended Stories

ರಾಜ್ಯ ಗೃಹ ಸಚಿವರಿಗೆ ಅನಾಮಧೇಯ ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಪೊಲೀಸ್ ಲೆಟರ್
ಪತಿ ಜೊತೆ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ? ಈ ಬಗ್ಗೆ ಖುದ್ದು ನಟಿ ಹೇಳಿದ್ದೇನು