ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಭಿವೃದ್ಧಿ ಕಾಳಜಿಯಿಂದ ಧೂಳಾಪುರವಾಗಿದ್ದ ವಿಜಯಪುರ ನಗರ ಸದ್ಯ ಮಾದರಿ ನಗರವಾಗಿ ರೂಪುಗೊಂಡಿದೆ. ಅಸ್ತಮಾ ಮತ್ತಿತರೇ ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿದ್ದ ಜನರಿಗೆ ಮುಕ್ತಿ ಸಿಕ್ಕಿದ್ದು. ಆರೋಗ್ಯಯುತವಾದ ವಾತಾವರಣ ನಿರ್ಮಾಣಗೊಂಡಿದೆ. ಇದರಿಂದಾಗಿ ದೇಶದಲ್ಲಿ ವಿಜಯಪುರ ನಗರ ಉತ್ತಮ ವಾತಾವರಣದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ ಸಾರ್ವಜನಿಕರು
ವಿಜಯಪುರ(ಅ.08): ಕ್ಲೈಮೆಟ್ ಟ್ರೆಂಡ್ಸ್, ರೆಸ್ಪೈರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೈರರ್ ವರದಿಯಲ್ಲಿ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೇಶಕ್ಕೆ ವಿಜಯಪುರ ನಗರ 6ನೇ ಸ್ಥಾನ ಪಡೆದಿದೆ.
ನಗರ ಶಾಸಕರ ಅಭಿವೃದ್ಧಿ ಕಾಳಜಿಯಿಂದ ಧೂಳಾಪುರವಾಗಿದ್ದ ವಿಜಯಪುರ ನಗರ ಸದ್ಯ ಮಾದರಿ ನಗರವಾಗಿ ರೂಪುಗೊಂಡಿದೆ. ಅಸ್ತಮಾ ಮತ್ತಿತರೇ ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿದ್ದ ಜನರಿಗೆ ಮುಕ್ತಿ ಸಿಕ್ಕಿದ್ದು. ಆರೋಗ್ಯಯುತವಾದ ವಾತಾವರಣ ನಿರ್ಮಾಣಗೊಂಡಿದೆ. ಇದರಿಂದಾಗಿ ದೇಶದಲ್ಲಿ ವಿಜಯಪುರ ನಗರ ಉತ್ತಮ ವಾತಾವರಣದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ನಗರ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಜಯಪುರ: ಲಂಚ ಸಮೇತ ಲೋಕಾ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ
ನಗರದಲ್ಲಿ ಗುಣಮಟ್ಟದ ರಸ್ತೆಗಳು ಅಭಿವೃದ್ಧಿಗೊಂಡಿರುವುದು, ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿರುವುದು, ಎಲ್ಲೆಂದರಲ್ಲಿದ್ದ ಗಲೀಜು ಮಾಯವಾಗಿರುವುದು, ವಿದ್ಯುತ್ ಅವಘಡ ಆಗದೆ ಇರುವುದು ಹೀಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದನ್ನು ತಪ್ಪಿಸಲು ಕ್ರಮ ಕೈಗೊಂಡಿದ್ದರಿಂದ ಉತ್ತಮ ವಾತಾವರಣ ನಗರದಲ್ಲಿ ಮೂಡಿದೆ. ಹೀಗಾಗಿ ಶುದ್ಧ ಗಾಳಿ ಬೀಸುವ ನಗರದ ಪಟ್ಟಿಯಲ್ಲಿ ದೇಶದಲ್ಲಿ ವಿಜಯಪುರ ನಗರ 6ನೇ ಸ್ಥಾನಕ್ಕೆ ಬಂದಿದೆ. ಇದು ಎಲ್ಲರಿಗೂ ಸಂತೋಷದ ವಿಚಾರ ಎಂದು ಮಹಾನಗರ ಪಾಲಿಕೆ ಎಂಜಿನಿಯರ್ ವಿಭಾಗದವರು ತಿಳಿಸಿದ್ದಾರೆ.