ವಿಜಯಪುರ: ಲಂಚ ಸಮೇತ ಲೋಕಾ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ

By Kannadaprabha News  |  First Published Oct 8, 2023, 8:17 PM IST

ತಾಲೂಕಿನ ತಂಗಡಗಿ ಗ್ರಾಪಂನ ಪಿಡಿಒ ಬಸವರಾಜ ತಾಳಿಕೋಟಿ ಮತ್ತು ತಾಂತ್ರಿಕ ಸಹಾಯಕ ಪ್ರಸನ್ನ ಶೆಟ್ಟರ ಲೋಕಾಯುಕ್ತರ ಬಲೆಗೆ ಬಿದ್ದಿರುವ ಅಧಿಕಾರಿಗಳು. ಶುಕ್ರವಾರ ವಿಜಯಪುರದ ಕಚೇರಿಯಲ್ಲಿ ದಾಖಲಾಗಿದ್ದ ದೂರಿನನ್ವಯ ಶನಿವಾರ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಮುದ್ದೇಬಿಹಾಳ(ಅ.08): 30 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಪಿಡಿಒ ಮತ್ತು ತಾಂತ್ರಿಕ ಸಹಾಯಕನನ್ನು ಲೋಕಾಯುಕ್ತರರು ರೆಡ್ ಹ್ಯಾಂಡ್ ಹಿಡಿದ ಘಟನೆ ತಂಗಡಗಿ ಗ್ರಾಪಂನಲ್ಲಿ ಶನಿವಾರ ನಡೆದಿದೆ.

ತಾಲೂಕಿನ ತಂಗಡಗಿ ಗ್ರಾಪಂನ ಪಿಡಿಒ ಬಸವರಾಜ ತಾಳಿಕೋಟಿ ಮತ್ತು ತಾಂತ್ರಿಕ ಸಹಾಯಕ ಪ್ರಸನ್ನ ಶೆಟ್ಟರ ಲೋಕಾಯುಕ್ತರ ಬಲೆಗೆ ಬಿದ್ದಿರುವ ಅಧಿಕಾರಿಗಳು. ಶುಕ್ರವಾರ ವಿಜಯಪುರದ ಕಚೇರಿಯಲ್ಲಿ ದಾಖಲಾಗಿದ್ದ ದೂರಿನನ್ವಯ ಶನಿವಾರ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

Latest Videos

undefined

ದೇಶಕ್ಕೆ ಮತ್ತೆ ಮೋದಿ ನಾಯಕತ್ವ ಅವಶ್ಯಕ: ಚಕ್ರವರ್ತಿ ಸೂಲಿಬೆಲೆ

2020-21 ನೇ ಸಾಲಿನಲ್ಲಿ ತಾಲೂಕಿನ ತಂಗಡಗಿ ಗ್ರಾಪಂನ ಕಾಂಪೌಂಡ್‌ನ ಗೋಡೆ ಕಟ್ಟಡಕ್ಕೆ ಸಂಬಂಧಿಸಿದ ಬಿಲ್ ಮಂಜೂರು ಮಾಡಲು 35 ಸಾವಿರರೂ ಬೇಡಿಕೆ ಇಟ್ಟಿದ್ದರು. ಈ ಪೈಕಿ 30 ಸಾವಿರ ಲಂಚದ ಹಣ ಸ್ವೀಕರಿಸುವಾಗ ಸಿಕ್ಕಿ ಹಾಕಿಕೊಂಡಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ ಆನಂದ ಟಕ್ಕಣ್ಣವರ, ಆನಂದ ಡೋಣಿ, ಸಿಬ್ಬಂದಿಗಳಾದ ಸಂತೋಷ ಅಮರಖೇಡ, ಮಹೇಶ ಪೂಜಾರಿ, ಈರಣ್ಣ ಕನ್ನೂರ, ಆನಂದ ಪಡಶೆಟ್ಟಿ, ಸಾಬು ಮುಂಜೆ, ಎಸ್.ಎಂ.ಬಳಗಾನೂರ, ಮದನಸಿಂಗ ರಜಪೂತ, ಮಾಳಪ್ಪ ಸಾಲಗೊಂಡ, ಸಂತೋಷ ಚೌವ್ಹಾಣ ಹಾಗೂ ವಸೀಂ ಅಕ್ಕಲಕೋಟ ಇದ್ದರು.

click me!