Vijayapura: ಭೀಮಾತೀರದ ಹಂತಕರಿಗೆ ಆತಂಕ ದೂರ: 40 ವರ್ಷದ ಗ್ಯಾಂಗ್‌ ವಾರ್‌ ಅಂತ್ಯ

By Sathish Kumar KH  |  First Published Feb 28, 2023, 12:48 PM IST

• ವಿಜಯಪುರ ನ್ಯಾಯಾಲಯಕ್ಕೆ ಹಾಜರಾದ ಆರೋಪಿ ಮಹಾದೇವ ಬೈರಗೊಂಡ..!
• ಜಿಲ್ಲಾ ನ್ಯಾಯಾಲಯದ ಸುತ್ತ ಪೊಲೀಸ್‌ ಬಿಗಿ ಬಂದೋಬಸ್ತ..!
• ಚಡಚಣ ಗ್ಯಾಂಗ್ ಜೊತೆಗೆ ಕಾಂಪ್ರಮೈಜ್ ಬಳಿಕ ಮೈಚಳಿ ಬಿಟ್ಟು ಓಡಾಡ್ತಿರೋ ಸಾಹುಕಾರ..


ವರದಿ - ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ 

ವಿಜಯಪುರ (ಫೆ.28): ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿದ್ದ ಹಂತಕ ಧರ್ಮರಾಜ್‌ ಚಡಚಣ ನಕಲಿ ಎನ್ಕೌಂಟರ್‌ ಹಾಗೂ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣ ಸಂಬಂಧ ಎಲ್ಲ ಆರೋಪಿಗಳು ಇಂದು ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. 

Tap to resize

Latest Videos

ಚಡಚಣ ಗ್ಯಾಂಗಿನ ಜೊತೆಗೆ ಎಡಿಜಿಪಿ ಅಲೋಕ್‌ಕುಮಾರ್ ನಡೆಸಿದ ಕಾಂಪ್ರಮೈಜ್ ಬಳಿಕ ಮಹಾದೇವ ಬೈರಗೊಂಡ ಮೈಚಳಿ ಬಿಟ್ಟು ಕೋರ್ಟಗೆ ಆಗಮಿಸಿದ್ದಾ‌ನೆ. ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ, ಪಿಎಸೈ ಗೋಪಾಲ್‌ ಹಳ್ಳೂರ್‌, ಸಿಪಿಐ ಮಲ್ಲಿಕಾರ್ಜುನ್‌ ಅಸೋಡೆ, ಮೂವರು ಪೊಲೀಸ್‌ ಪೇದೆಗಳು ಸೇರಿದಂತೆ 16 ಆರೋಪಿಗಳು ಹಾಜರಾಗಿದ್ದರು. ಒಟ್ಟು 17 ಆರೋಪಿಗಳಿದ್ದು, ಇದ್ರಲ್ಲಿ 6 ನೇ ಆರೋಪಿ ಬಾಬು ಕಚನಾಳರ್‌ ಊರ್ಫ್ ಮೆಂಬರ್‌ ಮಹಾದೇವ ಬೈರಗೊಂಡ ಮೇಲೆ ನಡೆದ ಚಡಚಣ ಗ್ಯಾಂಗ್‌ ಅಟ್ಯಾಕ್‌ ವೇಳೆ ಸಾವನ್ನಪ್ಪಿದ ಕಾರಣ 16 ಆರೋಪಿಗಳು ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಬಂದಿದ್ದರು.

ಭೀಮಾತೀರಕ್ಕೆ ಎಡಿಜಿಪಿ ಭೇಟಿ ನೀಡಿ ಗ್ಯಾಂಗ್ ನಡುವೆ ಸಂಧಾನ, ನೆತ್ತರ ಕಹಾನಿಗೆ ಬೀಳುತ್ತಾ ಬ್ರೇಕ್?

ಜಿಲ್ಲಾ ನ್ಯಾಯಾಲಯದ ಸುತ್ತ ಬಿಗಿ ಭದ್ರತೆ: ಹಂತಕ ಧರ್ಮರಾಜ್‌, ಸಹೋದರ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ ಕೋರ್ಟಗೆ ಹಾಜರಾಗ್ತಿರೋ ಹಿನ್ನೆಲೆಯಲ್ಲಿ ವಿಜಯಪುರ ಪೊಲೀಸ್ ಅಧಿಕಾರಿಗಳು ಪುಲ್‌ ಅಲರ್ಟ್‌ ಆಗಿದ್ದರು. ಜಿಲ್ಲಾ ನ್ಯಾಯಾಲಯದ ಎದುರು ಸಂಪೂರ್ಣ ಭದ್ರತೆಯನ್ನ ಕೈಗೊಂಡಿದ್ದರು. ಕೋರ್ಟ್‌ ಆವರಣಕ್ಕೆ ಪ್ರವೇಶಿಸುವವರ ಮೇಲೆ ನಿಗಾ ಇಟ್ಟಿದ್ದರು. ಯಾವುದೇ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಇನ್ನು ಕೋರ್ಟ್‌ ಆವರಣದಲ್ಲಿ ಮಾಧ್ಯಮಗಳಿಗೆ ನಿರ್ಭಂದ ಹೇರಲಾಗಿತ್ತು.

ಮೈ ಚಳಿ ಬಿಟ್ಟು ಕೋರ್ಟ್‌ಗೆ ಹಾಜರಾದ ಬೈರಗೊಂಡಳ: ಇನ್ನು ನಿಮಗೆಲ್ಲ ಗೊತ್ತಿರುವ ಹಾಗೆಯೇ ಭೀಮಾತೀರದ ಎರಡು ಪ್ರಬಲ ಗ್ಯಾಂಗುಗಳಾದ ಬೈರಗೊಂಡ ಗ್ಯಾಂಗ್ ಹಾಗೂ ಚಡಚಣ ಗ್ಯಾಂಗಿನ ನಡುವೆ ಎಡಿಜಿಪಿ ಅಲೋಕ್‌ಕುಮಾರ್ ರಾಜಿ ಸಂದಾನ ಮಾಡಿಸಿದ್ದರು. ಈ ಸಂಧಾನಕ್ಕು ಮೊದಲು ಕೋರ್ಟ್‌ಗೆ ಹಾಜರಾಗಲು ನಡಗುತ್ತಲೆ ಬರುತ್ತಿದ್ದ ಮಹಾದೇವ ಈ ಬಾರಿ ಮೈಚಳಿ ಬಿಟ್ಟು ಕೋರ್ಟ್‌ಗೆ ಹಾಜರಾಗಿದ್ದಾನೆ. 

ಬೈರಗೊಂಡ ಸಾಹುಕಾರನಿಗಿದ್ದ ಹೆದರಿಕೆ ಏನು? ಭೀಮಾತೀರದಲ್ಲಿ ನಾಲ್ಕೈದು ದಶಕಗಳಿಂದ ಚಡಚಣ ಹಾಗೂ ಬೈರಗೊಂಡ ಕುಟುಂಬಗಳ ನಡುವೆ ವೈರತ್ವ ಬೆಳೆದುಕೊಂಡು ಬಂದಿದೆ. ಇನ್ನು ಕಳೆದ 2017ರ ಅಕ್ಟೋಬರ್ 30 ರಂದು ಚಡಚಣ ಮಲ್ಲಿಕಾಜೀ ಮಕ್ಕಳಾದ ಧರ್ಮರಾಜ್‌ ಮೇಲೆ ಆಗಿನ ಚಡಚಣ ಪಿಎಸ್‌ಐ ಶಸ್ತ್ರಾಸ್ತ್ರ ತಪಾಸಣೆ ನೆಪದಲ್ಲಿ ಹೋಗಿ ಗುಂಡು ಹಾರಿಸಿದ್ದನು. ಇತ್ತ ಆತನ ಸಹೋದರ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದನು. ಈ ಎರಡು ಪ್ರಕರಣಗಳನ್ನ ಧರ್ಮರಾಜ್‌ ನಕಲಿ ಎನ್ಕೌಂಟರ್‌ ಹಾಗೂ ಗಂಗಾಧರ ನಿಗೂಢ ಹತ್ಯೆ ಎಂದು ಪರಿಗಣಿಸಿ ಸಿಐಡಿ ಕೂಡ ತನಿಖೆ ನಡೆಸಿ ಕೋರ್ಟ್‌ ಗೆ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿತ್ತು. 

ಭೀಮಾತೀರದ ವೈಷಮ್ಯಕ್ಕೆ ತೆರೆ ಎಳೆದ ಅಲೋಕ್‌ ಕುಮಾರ್‌: ಚಡಚಣ-ಬೈರಗೊಂಡ ಗ್ಯಾಂಗ್‌ಗಳ ನಡುವೆ ಸಂಧಾನ ಯಶಸ್ವಿ

ಎಡಿಜಿಪಿ ಅಲೋಕ್ ಕುಮಾರ್ ರಾಜಿ ಸಂಧಾನ: ಮತ್ತೊಂದೆಡೆ 2020 ರ ನ.2ರಂದು ಇದೆ ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ ಮೇಲೆ ಕನ್ನಾಳ ಕ್ರಾಸ್‌ ಬಳಿ ಚಡಚಣ ಗ್ಯಾಂಗ್‌ ಹುಡುಗರು ಅಟ್ಯಾಕ್‌ ನಡೆಸುವ ಮೂಲಕ ಧರ್ಮರಾಜ್‌ ಚಡಚಣ, ಗಂಗಾಧರ ಚಡಚಣ ಹತ್ಯೆ ಪ್ರತಿಕಾರಕ್ಕೆ ಯತ್ನಸಿದ್ದರು. ಹೀಗಾಗಿ ಬೈರಗೊಂಡ ಕೋರ್ಟ್‌ ಗೆ ಹಾಜರಾಗುವ ವೇಳೆ ಮತ್ತೆ ಚಡಚಣ ಗ್ಯಾಂಗ್‌ ಅಟ್ಯಾಕ್‌ ಮಾಡುವ ಭೀತಿ ಇತ್ತು. ಇತ್ತೀಚೆಗೆ ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ಚಡಚಣ ಗ್ಯಾಂಗಿನ ವಿಮಲಾಬಾಯಿ ಹಾಗೂ ಬೈರಗೊಂಡನ ಗ್ಯಾಂಗ್‌ನ ರಾಜಿ ಸಂಧಾನ ಮಾಡಿಸಿದ್ದಾರೆ‌. ಹೀಗಾಗಿ ತನ್ನ ಮೇಲೆ ಅಟ್ಯಾಕ್ ಆಗುತ್ತದೆ ಎನ್ನುವ ಭಯ ಬಿಟ್ಟು ಮಹಾದೇವ ಬೈರಗೊಂಡ ಕೋರ್ಟ್‌ಗೆ ಹಾಜರಾಗುತ್ತಿದ್ದಾನೆ. 

click me!