ನಾನು 30 ವರ್ಷಗಳ ರಾಜಕಾರಣದಲ್ಲಿ ಯಾವುತ್ತೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲ ಜನರು ನಮ್ಮವರು ಎಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಆದರೆ ಕೆಲವರು ಮಾಧ್ಯಮಗಳ ಮೂಲಕ ನಾನು ಲಿಂಗಾಯತ ವಿರೋಧಿ ಅನಿಸುತ್ತಿದ್ದಾರೆ. ನನ್ನನ್ನು ಲಿಂಗಾಯತ ವಿರೋಧಿ ಎಂದವರ ನಾಲಿಗೆ ಕತ್ತರಿಸಬೇಕು. ಆ ದೇವರೇ ಅವರ ನಾಲಿಗೆಯನ್ನು ಕಟ್ ಮಾಡುತ್ತಾನೆ ಎಂದ ಸಂಸದ ರಮೇಶ ಜಿಗಜಿಣಗಿ
ವಿಜಯಪುರ(ಮಾ.13): ನನ್ನನ್ನು ಲಿಂಗಾಯತ ವಿರೋಧಿ ಎನ್ನುವವರ ನಾಲಿಗೆ ಕತ್ತರಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಪ್ರಾಡಕ್ಟ್ ಯೋಜನೆ ಕಾರ್ಯಕ್ರಮ ಉದ್ಘಾಟನೆ ವೇಳೆ ವೇದಿಕೆ ಮೇಲೆ ಭಾಷಣ ಮಾಡುವಾಗ ಈ ರೀತಿ ಆಕ್ರೋಶ ಹೊರಹಾಕಿದರು. ನಾನು 30 ವರ್ಷಗಳ ರಾಜಕಾರಣದಲ್ಲಿ ಯಾವುತ್ತೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲ ಜನರು ನಮ್ಮವರು ಎಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಆದರೆ ಕೆಲವರು ಮಾಧ್ಯಮಗಳ ಮೂಲಕ ನಾನು ಲಿಂಗಾಯತ ವಿರೋಧಿ ಅನಿಸುತ್ತಿದ್ದಾರೆ. ನನ್ನನ್ನು ಲಿಂಗಾಯತ ವಿರೋಧಿ ಎಂದವರ ನಾಲಿಗೆ ಕತ್ತರಿಸಬೇಕು. ಆ ದೇವರೇ ಅವರ ನಾಲಿಗೆಯನ್ನು ಕಟ್ ಮಾಡುತ್ತಾನೆ ಎಂದರು.
ಯಾರೋ ಪಾಕ್ ಪರ ಘೋಷಣೆ ಕೂಗಿದ್ರೆ ನಾಸಿರ್ ಏಕೆ ಹೊಣೆ: ಸಚಿವ ಎಂ.ಬಿ.ಪಾಟೀಲ್
ಟಿವಿಯ ಒಬ್ಬ ವ್ಯಕ್ತಿ ಲಿಂಗಾಯತ ವಿರೋಧಿ ಎಂದು ಭಾಷೆ ಬಳಸಿದ್ದಾರೆ. ದೇವರು ಅವನ ನಾಲಿಗೆ ಕತ್ತರಿಸಲಿ ಎಂದ ಅವರು, ನಾನು ದಲಿತರನ್ನು ಕಟ್ಟಿಕೊಂಡು ರಾಜಕೀಯ ಮಾಡಿದ್ದರೆ ಇಷ್ಟು ಮುಂದಕ್ಕೆ ಬರೋಕೆ ಆಗ್ತಾ ಇರಲಿಲ್ಲ ಎಂದಿದ್ದಾರೆ.