1995ರ ವಕ್ಫ್ ಕಾಯ್ದೆ ರದ್ದುಪಡಿಸಿದರೆ ಸಾವಿರಾರು ಕೋಟಿ ರುಪಾಯಿ ಆಸ್ತಿ ಸರ್ಕಾರಕ್ಕೆ ಉಳಿಯಲಿದೆ. ವಕ್ಫ್ ಮ್ಯಾನೇಜ್‌ಮೆಂಟ್ ಸಿಸ್ಟಂ ಆಫ್ ಇಂಡಿಯಾದ ಪ್ರಸ್ತುತ ಮಾಹಿತಿ ಪ್ರಕಾರ ಒಟ್ಟು 8,54,509 ಆಸ್ತಿಗಳಿವೆ. ಈ ಆಸ್ತಿ 8 ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ವ್ಯಾಪಿಸಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ(ಸೆ.05): ರಾಷ್ಟ್ರದಲ್ಲಿ ಜಾರಿ ಇರುವ ವಕ್ಫ್ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
1995ರ ವಕ್ಫ್ ಕಾಯ್ದೆ ರದ್ದುಪಡಿಸಿದರೆ ಸಾವಿರಾರು ಕೋಟಿ ರುಪಾಯಿ ಆಸ್ತಿ ಸರ್ಕಾರಕ್ಕೆ ಉಳಿಯಲಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಕ್ಫ್ ಮ್ಯಾನೇಜ್‌ಮೆಂಟ್ ಸಿಸ್ಟಂ ಆಫ್ ಇಂಡಿಯಾದ ಪ್ರಸ್ತುತ ಮಾಹಿತಿ ಪ್ರಕಾರ ಒಟ್ಟು 8,54,509 ಆಸ್ತಿಗಳಿವೆ. ಈ ಆಸ್ತಿ 8 ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ವ್ಯಾಪಿಸಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ತಮಿಳುನಾಡಿನಿಂದ ಅನಗತ್ಯವಾಗಿ ಮೇಕೆದಾಟು ಯೋಜನೆಗೆ ವಿರೋಧ: ಸಿಎಂ ಸಿದ್ದು
ವಕ್ಫ್ ಕಾಯ್ದೆ ಹಳೆಯದಾಗಿದೆ. ಪಕ್ಷಪಾತವಾಗಿದೆ. ತಾರತಮ್ಯದಿಂದ ಕೂಡಿದೆ. ರಾಷ್ಟ್ರದ ಸಾಮರಸ್ಯ ಕದಡಲು ಜನರ ನಡುವೆ ವೈಷಮ್ಯ ಬಿತ್ತಲು ಹಿಂದಿನ ಸರ್ಕಾರಗಳು ಇದನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.
ಭಾರತವು ಮುಂದೆ ಸಾಗುತ್ತಿರುವ ಮತ್ತು ಜಾಗತಿಕ ಶಕ್ತಿಯಾಗಲು ಸಿದ್ಧವಾಗಿರುವ ಸಮಯದಲ್ಲಿ ಇಂತಹ ಪುರಾತನ ಕಾನೂನುಗಳು ಪ್ರಗತಿ, ಸಮಾನತೆ ಮತ್ತು ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಅಡ್ಡಿಯಾಗುತ್ತವೆ. ಹಲವಾರು ರಾಜ್ಯ ಸರ್ಕಾರಗಳು ಪ್ರತ್ಯೇಕ ವಕ್ಫ್ ಸಚಿವಾಲಯಗಳನ್ನು ಸ್ಥಾಪಿಸುವಷ್ಟುಮಟ್ಟಿಗೆ ಈ ಕಾನೂನು ದುರುಪಯೋಗ ಮಾಡಿಕೊಂಡಿರುವುದು ವಿಪರ್ಯಾಸ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ. ನಮ್ಮ ರಾಷ್ಚ$›ದ ಹಿತದೃಷ್ಟಿಯಿಂದ ವಕ್ಫ್ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.