ಬೆಳಗಾವಿ: ಉನ್ನತ ಅಧಿಕಾರಿ ಮಗಳಿಗೆ ಅಪ್ಪನ ಹೆಮ್ಮೆಯ ಸೆಲ್ಯೂಟ್‌..!

By Kannadaprabha News  |  First Published Sep 5, 2023, 9:30 PM IST

ಪಂಚಾಯತ್‌ ರಾಜ್ ಎಂಜಿನೀಯರಿಂಗ್ ಉಪವಿಭಾಗದ ಪ್ರಭಾರಿ ಸಹಾಯಕ ಕಾರ್ಯಕಾರಿ ಅಭಿಯಂತರರಾಗಿ ತಬಸಮ್ ಬಿ. ನಾಯಿಕವಾಡಿ ಅವರು ಸದ್ಯ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಕೆ.ಪಾಟೀಲ್ ಬೆಳಗಾವಿಗೆ ವರ್ಗಾವಣೆಯಾದ ಪ್ರಯುಕ್ತ ತೆರವಾದ ಸ್ಥಾನಕ್ಕೆ ನಿಯೋಜಿನೆಗೊಂಡು ಅಧಿಕಾರ ಸ್ವೀಕರಿಸಿದರು. ಇವರ ತಂದೆ ಬಿ.ಡಿ.ನಾಯಿಕವಾಡಿ ಅವರು ಇದೇ ಆವರಣದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರರಾಗಿದ್ದಾರೆ.


ರವಿ ಕಾಂಬಳೆ

ಹುಕ್ಕೇರಿ(ಸೆ.05):  ಇಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯಲ್ಲಿ ಸೋಮವಾರ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಆರ್‌ಡಿಪಿಆರ್‌ನ ಅಧೀನದ ಉಪವಿಭಾಗದಲ್ಲಿ ಈಗಾಗಲೇ ತಂದೆ ಸಹಾಯಕರಾಗಿದ್ದು ಮಗಳು ಇದೀಗ ಅಧಿಕಾರಿಯಾಗಿ ಕರ್ತವ್ಯದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Latest Videos

undefined

ಇಲ್ಲಿನ ಪಂಚಾಯತ್‌ ರಾಜ್ ಎಂಜಿನೀಯರಿಂಗ್ ಉಪವಿಭಾಗದ ಪ್ರಭಾರಿ ಸಹಾಯಕ ಕಾರ್ಯಕಾರಿ ಅಭಿಯಂತರರಾಗಿ ತಬಸಮ್ ಬಿ. ನಾಯಿಕವಾಡಿ ಅವರು ಸದ್ಯ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಕೆ.ಪಾಟೀಲ್ ಬೆಳಗಾವಿಗೆ ವರ್ಗಾವಣೆಯಾದ ಪ್ರಯುಕ್ತ ತೆರವಾದ ಸ್ಥಾನಕ್ಕೆ ನಿಯೋಜಿನೆಗೊಂಡು ಅಧಿಕಾರ ಸ್ವೀಕರಿಸಿದರು. ಇವರ ತಂದೆ ಬಿ.ಡಿ.ನಾಯಿಕವಾಡಿ ಅವರು ಇದೇ ಆವರಣದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರರಾಗಿದ್ದಾರೆ.

ಗ್ಯಾರಂಟಿಗಳ ಅನುಷ್ಠಾನದಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ: ಅಶೋಕ ಪಟ್ಟಣ

ತಾಲೂಕು ಆರ್‌ಡಿಪಿಆರ್ ಅಧೀನದ ಉಪವಿಭಾಗದಲ್ಲಿ ಈಗಾಗಲೇ ತಂದೆ ಸಹಾಯಕ ಅಧಿಕಾರಿಯಾಗಿರುವ ಇಲಾಖೆಗೆ ಮಗಳು ಉನ್ನತ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಅಪರೂಪದ ವಿದ್ಯಮಾನವೊಂದು ನಡೆದಿದೆ.
ತಂದೆ-ಮಗಳು ಒಂದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾದ ಈ ವಿದ್ಯಮಾನ ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಮಗಳು ಅಧಿಕಾರಿಯಾಗಿ ತಂದೆ ಸಹಾಯಕರಾಗಿರುವುದು ಹುಕ್ಕೇರಿ ತಾಲೂಕಿನ ಆರ್‌ಡಿಪಿಆರ್ ಇಲಾಖೆಯ ಇತಿಹಾಸದಲ್ಲೇ ವಿಶೇಷ ಗಳಿಗೆ ಎನಿಸಿದ್ದಲ್ಲದೇ ಮೊಟ್ಟ ಮೊದಲ ಪ್ರಕರಣ ಇದಾಗಿದೆ. ಹೊಸದಾಗಿ ಅಧಿಕಾರಿ ವಹಿಸಿಕೊಂಡ ಮಗಳು ತಬಸಮ್ ಅವರಿಗೆ ತಂದೆ ಬಿ.ಡಿ.ನಾಯಿಕವಾಡಿ ಅವರು ಶೇಕ್ ಹ್ಯಾಂಡ್ ಮಾಡಿ ನಮಸ್ಕರಿಸಿದ್ದು ಗಮನ ಸೆಳೆಯಿತು. ತನ್ನ ಎದುರೇ ಮಗಳು ಉನ್ನತ ಹುದ್ದೆ ಅಲಂಕರಿಸಿರುವುದನ್ನು ಕಂಡು ತಂದೆಯ ಕಣ್ಣಾಲಿಗಳಲ್ಲಿ ಕೆಲಕಾಲ ಆನಂದಭಾಷ್ಪ ಸುರಿಯಿತು. ಜತೆಗೆ ಜೀವನದ ಧನ್ಯತಾಭಾವ ಹೊರಹಾಕಿದರು.

ಹೊಸ ಹುದ್ದೆ ಅಲಂಕರಿಸಿರುವುದು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ತಂದೆಯ ಎದುರೇ ಕರ್ತವ್ಯ ನಿರ್ವಹಿಸುವುದರಿಂದ ಜೀವನ ಸಾರ್ಥಕ ಎನಿಸಿದೆ. ಇಂಥ ಸದಾವಕಾಶ ಎಲ್ಲರಿಗೂ ಸಿಗುವುದಿಲ್ಲ. ಇದು ನನ್ನ ಪೂರ್ವ ಜನ್ಮದ ಪುಣ್ಯ ಎಂದೇ ಹೇಳಬಹುದು ಎಂದು ಎಇಇ ತಬಸಮ್ ಬಿ.ನಾಯಿಕವಾಡಿ ಹೇಳಿದ್ದಾರೆ.  

 ಎಷ್ಟೇ ಎತ್ತರಕ್ಕೇರಿದರೂ ನಮ್ಮ ಮೂಲ ಬೇರನ್ನು ಮರೆಯಬಾರದು: ಹೆಬ್ಬಾಳ್ಕರ್

ಆಡಿ ಬೆಳೆಸಿದ ಮಗಳು ನಮ್ಮ ಇಲಾಖೆಯಲ್ಲಿ, ಅದೂ ನಾನು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿಯೇ ಉನ್ನತ ಅಧಿಕಾರಿಯಾಗಿರುವುದು ಹೆಮ್ಮೆಯ ವಿಷಯ. ಮಗಳ ಕೈಕೆಳಗೆ ಕೆಲಸ ಮಾಡುವುದರಲ್ಲಿ ಯಾವುದೇ ರೀತಿಯ ಸಂಕೋಚವಿಲ್ಲ. ಅಪ್ಪ-ಮಗಳ ಸಂಬಂಧ ಮನೆಗೆ ಮಾತ್ರ ಸೀಮಿತ ಎಂದು ಎಇ ಬಿ.ಡಿ.ನಾಯಿಕವಾಡಿ ಹೇಳಿದ್ದಾರೆ.  

ಇದೊಂದು ಅಪರೂಪದ ಸಮಾಗಮ. ತಂದೆ ಮಗಳ ಕಾಯಕ ಸಂಗಮ ಬಹುಷ ಇದೊಂದು ಇತಿಹಾಸ. ಇವರ ಕರ್ತವ್ಯ ಮಾದರಿಯಾಗಲಿ ಎಂದು ಕಸಾಪ ಅಧ್ಯಕ್ಷ ಪ್ರಕಾಶ್ ಅವಲಕ್ಕಿ ತಿಳಿಸಿದ್ದಾರೆ.  

click me!