Vijayapura: ಸಿಂದಗಿಯ ಮೌಲಾಲಿ ಕುಟುಂಬದಲ್ಲಿ ಸಂಭ್ರಮದಿಂದ ಬಸವ ಜಯಂತಿ ಆಚರಣೆ

Published : Apr 21, 2026, 07:39 AM IST
Basava Jayanti

ಸಾರಾಂಶ

ಪೊಲೀಸ್‌ ಪೇದೆ ಮೌಲಾಲಿ ಆಲಗೂರ ಅವರು ಮುಸ್ಲಿಂರಾಗಿದ್ದರೂ, ಕಳೆದ 4 ವರ್ಷಗಳಿಂದ ತಮ್ಮ ಮನೆಯಲ್ಲಿ ಬಸವ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಬಸವಣ್ಣನವರ ಸಮಸಮಾಜದ ಚಿಂತನೆಗಳನ್ನು ಗೌರವಿಸಿ, ತಮ್ಮ ಮಕ್ಕಳಿಗೂ ಆ ಮೌಲ್ಯಗಳನ್ನು ತಿಳಿಸುತ್ತಾ ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಪೊಲೀಸ್‌ ಪೇದೆ ಮೌಲಾಲಿ ಆಲಗೂರ ಅವರು ಧರ್ಮದಲ್ಲಿ ಮುಸ್ಲಿಂರಾದರೂ ಪ್ರತಿ ವರ್ಷ ಬಸವ ಜಯಂತಿ ದಿನದಂದು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವದಿಂದ ನಮಿಸಿ, ಸಕಲರ ಒಳಿತಿಗಾಗಿ ಪ್ರಾರ್ಥಿಸಿ, ತನ್ನ 3 ಮಕ್ಕಳಿಗೂ ಬಸವಣ್ಣನ ಸಮಸಮಾಜದ ಚಿಂತನೆ ಕುರಿತು ತಿಳಿಸುತ್ತಾರೆ. 

ಪ್ರಸ್ತುತ ಇವರು ಬೆಂಗಳೂರು ಆಡುಗೋಡಿ ಪೊಲೀಸ್ ಗೃಹದಲ್ಲಿರುವ ಆರಕ್ಷಕ ಮೌಲಾಲಿ ಶ್ವಾನದಳದಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಬಸವ ಜಯಂತಿಯನ್ನು ತಮ್ಮ ಮನೆಯಲ್ಲಿಯೇ ಭಕ್ತಿ, ಭಾವ, ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾ ಬರುತ್ತಿದ್ದಾರೆ. 

12ನೇ ಶತಮಾನದಲ್ಲಿ ಆಳವಾಗಿ ಬೇರೂರಿದ ಜಾತಿ ವ್ಯವಸ್ಥೆ, ಶೋಷಣೆ, ಅಸಮಾನತೆ, ಅಸ್ಪೃಶ್ಯತೆ, ಅನಾಗರಿಕತೆ, ಲಿಂಗ ತಾರತಮ್ಯದ ವಿರುದ್ಧ ವಚನ ಕ್ರಾಂತಿ ಕೈಗೊಂಡ ಬಸವಣ್ಣನವರು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದ್ದಾರೆ. ಇಂತಹ ಶ್ರೇಷ್ಠ ದಾರ್ಶನಿಕ, ಮಹಾಪುರುಷ ನಮ್ಮ ದೇಶದಲ್ಲಿ ಅದರಲ್ಲೂ ನಮ್ಮ ಕನ್ನಡ ನಾಡಿನಲ್ಲಿ ಜನ್ಮ ತಾಳಿರುವುದು ಹೆಮ್ಮೆಯ ವಿಷಯ ಎನ್ನುವುದು ಮೌಲಾಲಿ ಆಲಗೂರ ಅವರ ಅಭಿಮತವಾಗಿದೆ. 

ಇದನ್ನೂ ಓದಿ: ಕೆಲ ಐಪಿಎಸ್‌ಗಳ ಕರ್ಮಕಾಂಡ ಬಯಲು ಮಾಡುತ್ತೇನೆ ಅನುಮತಿ ಕೊಡಿ: DCRE ಎಸ್ಪಿ ಕಾಶಿ DG&IGP ಗೆ ಪತ್ರ

ಜಯಂತಿ ಆಚರಣೆಯಲ್ಲಿ ಮಹಮದ್ ಜುಬೇರ, ಮಹಮ್ಮದ್ ಜಯಾನ್, ಖತಾಲಸಾಬ್‌, ರೆಹಮಾನ್, ಜುನೇರಾ ಪಾಲ್ಗೊಂಡಿದ್ದರು.

ಇದನ್ನೂ ಓದಿ: Hubballi: Fly91 ವಿಮಾನಕ್ಕೆ ಮಾತ್ರ ಹವಾಮಾನ ವೈಪರೀತ್ಯ ಹೇಗೆ ಸಾಧ್ಯ? ಸತ್ಯ ಮುಚ್ಚಿಟ್ಟರಾ?

 

 

PREV
Read more Articles on
click me!

Recommended Stories

ಹೆತ್ತ ತಾಯಿಯ ಶವಕ್ಕೆ ಹೆಗಲು ಕೊಡದ ಮಕ್ಕಳು; ಸಮಾಜ ಸೇವಕರಿಂದ್ಲೇ ಅಂತ್ಯಕ್ರಿಯೆ!
Hubballi: Fly91 ವಿಮಾನಕ್ಕೆ ಮಾತ್ರ ಹವಾಮಾನ ವೈಪರೀತ್ಯ ಹೇಗೆ ಸಾಧ್ಯ? ಸತ್ಯ ಮುಚ್ಚಿಟ್ಟರಾ?