Weekend Curfew : ಬೇಕರಿ ಮಾಲೀಕರ ವಿರೋಧ - ತೀವ್ರ ನಷ್ಟದ ಆತಂಕ

By Kannadaprabha News  |  First Published Jan 7, 2022, 12:52 PM IST
  • ಕೊರೊನಾ ಹಾವಳಿ ಹಿನ್ನೆಲೆ ವಿಕೇಂಡ್ ಕರ್ಪ್ಯೂ  ವಿಧಿಸಿದ್ದು ಗುಮ್ಮಟನಗರಿಯಲ್ಲಿ ಬೇಕರಿ ಮಾಲಿಕರಿಗೆ ಶಾಕ್
  •  ವಿಕೇಂಡ್ ಕರ್ಪ್ಯೂ‌ಗೆ ವಿಜಯಪುರ ಬೇಕರಿ ಉದ್ಯಮಿಗಳು ಭಾರೀ ವಿರೋಧ 

 ವಿಜಯಪುರ (ಜ.07):  ಕೊರೊನಾ (Corona) ಹಾವಳಿ ಹಿನ್ನೆಲೆ ವಿಕೇಂಡ್ ಕರ್ಪ್ಯೂ  ವಿಧಿಸಿದ್ದು ಗುಮ್ಮಟ ನಗರಿಯಲ್ಲಿ ಬೇಕರಿ ಮಾಲಿಕರಿಗೆ ವಿಕೇಂಡ್ ಕರ್ಪ್ಯೂ (weekend Curfew) ಶಾಕ್ ತಗುಲಿದೆ.  ವಿಕೇಂಡ್ ಕರ್ಪ್ಯೂ‌ಗೆ ವಿಜಯಪುರ ಬೇಕರಿ ಉದ್ಯಮಿಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.  ವಿಕೇಂಡ್ ಲಾಕ್‌ಡೌನ್ (Lockdown) ಬೇಡ ಎಂದು ಮನವಿ ಮಾಡುತ್ತಿದ್ದಾರೆ.  

ಮಾಡಿಟ್ಟ ಸ್ವೀಟ್ (Sweets), ಬೇಕರಿ ಐಟಂ ಹಾಳಾಗುತ್ತದೆ ಎಂದು ಗೋಳು ತೋಡಿಕೊಳ್ಳುತ್ತಿದ್ದು,  ವಿಕೇಂಡ್ ನಲ್ಲೆ (weekend) ವ್ಯಾಪಾರ ಹೆಚ್ಚು, ಇದೆ ದಿನಗಳಂದು ಲಾಕ್ ಮಾಡಿದರೆ ನಮಗೆ ತೀವ್ರ ನಷ್ಟವಾಗುತ್ತದೆ ಎಂದು ಬೇಕರಿ ಉದ್ಯಮಿಗಳು ಹೇಳುತ್ತಿದ್ದಾರೆ.  ವಿಜಯಪುರ (Vijayapura) ಜಿಲ್ಲೆಯಲ್ಲಿ ಹೇಳಿಕೊಳ್ಳುವಂತ ಕೊರೊನಾ (corona) ಕೇಸ್ ಇಲ್ಲ.  ಆದರೂ ವಾರಾಂತ್ಯದ ಕರ್ಪ್ಯೂ ಯಾಕೆ ಎಂದು ವ್ಯಾಪರಸ್ತರು ಸರ್ಕಾರದ ಬಳಿ ಅಳಲು ತೊಡಿಕೊಳ್ಳುತ್ತಿದ್ದಾರೆ. 

Tap to resize

Latest Videos

 ಕೊರೊನಾ ಕೇಸ್ ಜಾಸ್ತಿಯಾದರೆ ನಾವೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತೇವೆ.  ವಿನಾಕಾರಣ ಬಂದ್ ಮಾಡಿಸಿದರೆ ವ್ಯಾಪಾರದ ಮೇಲೆ ಹೊಡೆತ ಬೀಳುತ್ತದೆ.  ಮಾಡಿಟ್ಟ ಬೆಲೆ ಬಾಳುವ ಬೇಕರಿ, ಸ್ವೀಟ್ (Sweets) ಐಟಮ್ ಹಾಳಾಗುತ್ತವೆ. ಇದರಿಂದ ಅತ್ಯಧಿಕ ಪ್ರಮಾಣದಲ್ಲಿ  ನಷ್ಟ ಎದುರಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡ ಬೇಕರಿ ಮಾಲಿಕರು ವೀಕೆಂಡ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ಬಸ್ ಸೇವೆ ಇರುತ್ತಾ..? : ರಾಜ್ಯ ಸರ್ಕಾರ ಕೊರೋನಾ ಸೋಂಕಿನ (Coronavirus) ನಿಯಂತ್ರಣಕ್ಕಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ(Weekedn Curfew) ಜಾರಿ ಮಾಡಿದೆ.  ಇದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ(KSRTC) ಮತ್ತು ಬಿಎಂಟಿಸಿಯ ಬಸ್‌ಗಳ(BMTC Bus) ಓಡಾಟದ ಕುರಿತು ಮಾರ್ಗಸೂಚಿಗಳನ್ನು(Guidelines) ಬಿಡುಗಡೆ ಮಾಡಲಾಗಿದ್ದು,  ಬಸ್‌ ಮತ್ತು ನಮ್ಮ ಮೆಟ್ರೊ (Namma Metro) ಸಂಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿರುವ ಮಾರ್ಗಸೂಚಿಯನ್ನು ರಿಲೀಸ್ ಮಾಡಿದ್ದು, ಅದು ಈ ಕೆಳಗಿನಂತಿದೆ.

 * ಕರ್ಫ್ಯೂ ಸಂದರ್ಭದಲ್ಲಿ ಅಗತ್ಯ ಸೇವೆಗಳಿಗಾಗಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಗೆವರೆಗೆ ಬಿಎಂಟಿಸಿ ಬಸ್‌ ಇರಲಿದೆ. ಅಂದರೆ ಶನಿವಾರ, ಭಾನುವಾರ ಜನಸಾಮಾನ್ಯರಿಗೆ ಬಿಎಂಟಿಸಿ ಬಸ್‌ಗಳ ಸಂಚಾರ ಇರುವುದಿಲ್ಲ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ.

* ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಪ್ರಯಾಣದ ವೇಳೆ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತಮ್ಮೊಡನೆ ಇರಿಸಿಕೊಂಡಿರಬೇಕು.

* ಯಾವುದಾದರೂ ಪರೀಕ್ಷೆಗಳು ಇದ್ದಲ್ಲಿ, ವಿದ್ಯಾರ್ಥಿಗಳಿಗೂ ಪ್ರವೇಶ ಪತ್ರವನ್ನು ತೋರಿಸುವುದು ಕಡ್ಡಾಯ.

* ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಸರ್ಕಾರಿ, ಖಾಸಗಿ ಬ್ಯಾಂಕ್​​, ವಿಮಾ ಇಲಾಖೆ ಸಿಬ್ಬಂದಿಗೂ ಅವಕಾಶವಿದೆ.

* ವಾರಂತ್ಯದಲ್ಲಿ ಶೇ.10 ರಷ್ಟು ಬಸ್​ಗಳು ಮಾತ್ರ ಕಾರ್ಯನಿರ್ವಹಿಸಲಿವೆ

* ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್​ನಲ್ಲಿ ಬಸ್​ ಸೇವೆ ಲಭ್ಯ ಇರುವುದಿಲ್ಲ

* ಬಸ್​​ನಲ್ಲಿ ಪ್ರಯಾಣಿಕರು ಮಾಸ್ಕ್​​ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

* ರೈಲು, ವಿಮಾನಗಳ ಮೂಲಕ ಬರುವ ಪ್ರಯಾಣಿಕರು ಟಿಕೆಟ್ ಹಾಗೂ ಐಡಿ ಕಾರ್ಡ್ ತೋರಿಸಿ ಬಸ್​ಗಳಲ್ಲಿ ಪ್ರಯಾಣ ಮಾಡಬಹುದು.

* ಆಸ್ಪತ್ರೆಗೆ ತೆರಳುವ ರೋಗಿ ಮತ್ತು ಸಹಾಯಕರ ಪ್ರಯಾಣಕ್ಕೆ ಅವಕಾಶವಿದೆ.

* ವೀಕೆಂಡ್​ ಕರ್ಫ್ಯೂ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

* ರಾಜ್ಯ ಹಾಗೂ ಹೊರ ರಾಜ್ಯದ ನಡುವೆ ಬಸ್ ಸಂಚಾರ ಇರಲಿದೆ. ಗೋವಾ, ಕೇರಳ, ‌ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.

* ವೀಕೆಂಡ್ ಕರ್ಫ್ಯೂ​ ವೇಳೆಯೂ ನಮ್ಮ ಮೆಟ್ರೋ ಸಂಚಾರ ಇರಲಿದೆ. ಹಸಿರು, ನೇರಳೆ ಮಾರ್ಗದಲ್ಲಿ ಯಥಾಪ್ರಕಾರ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ (ಸದ್ಯ ಮೆಟ್ರೋ ರೈಲಿನಲ್ಲಿ 1800-1900 ಜನ ಪ್ರಯಾಣಿಸುತ್ತಿದ್ದಾರೆ. ಈಗ ಇದರ ಮಿತಿಯನ್ನು 800-900ಕ್ಕೆ ಇಳಿಸಲಾಗಿದೆ)

* ಸದ್ಯ 15 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸುತ್ತಿದೆ. ವೀಕೆಂಡ್ ಕರ್ಫ್ಯೂ ವೇಳೆ 30 ನಿಮಿಷಕ್ಕೊಂದು ಮೆಟ್ರೋ ಸಂಚಾರ ಮಾಡಲಿದೆ.

ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಸರ್ಕಾರ ಹೊರಡಿಸಿರುವ ಎಲ್ಲ ನಿಯಮ ಜಾರಿಗೆ ಸಿದ್ಧತೆ. ಎಲ್ಲ ಡಿಸಿಪಿಗಳಿಗೂ ಈ ಬಗ್ಗೆ ಸೂಚನೆಯನ್ನ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ಯಾವುದೇ ಪಾಸ್ ನೀಡಲ್ಲ. ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಕ್ರಿಮಿನಲ್​ ಕೇಸ್ ದಾಖಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

ವಿನಾಯಿತಿ ಇರುವವರು ದಾಖಲೆ ಇಟ್ಟುಕೊಂಡು ಬರಬೇಕು. ವೀಕೆಂಡ್ ಲಾಕ್​ಡೌನ್ ವೇಳೆ ನಗರ ಸಂಪೂರ್ಣ ಬಂದ್​ ಆಗಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

click me!