ವಿಜಯನಗರ: ಶುಭ ಕಾರ್ಯ ಮುಗಿಸಿ ಬರುತ್ತಿದ್ದಾಗ ಭೀಕರ ಅಪಘಾತ, ಒಂದೂವರೆ ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

Published : Nov 11, 2026, 08:59 PM IST
Vijayapura Accident

ಸಾರಾಂಶ

ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ಬಳಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಇತ್ತ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮಹಿಳೆಯರು ದುರ್ಮರಣ ಹೊಂದಿದ್ದಾರೆ.

ವಿಜಯನಗರ: ದೀಪಾವಳಿಯ ಮಾರನೇಯ ದಿನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ.

ಬೈಕ್ ಗೆ ಹಿಂಬದಿಯಿಂದ ಕಾರು ಡಿಕ್ಕಿ..

ತಾಯಮ್ಮ(55), ಜ್ಯೋತಿ (28) ಮತ್ತು ಒಂದೂವರೇ ವರ್ಷದ ದಿವ್ಯ ಮೃತ ಮಗು. ಇನ್ನು, ಬೈಕ್ ಚಾಲಕ ಲಕ್ಷ್ಮಣ್ ಮತ್ತು ಮಗಳು ಸೃಷ್ಟಿಗೆ ಗಂಭೀರ ಗಾಯವಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ಲಕ್ಷ್ಮಣ್ ಎಂಬುವರ ಕುಟುಂಬ ಹೊಸಪೇಟೆ ತಾಲೂಕಿನ ಕೊಟಗಿನಾಳ್ ಗೆ ಹೋಗಿತ್ತು.

ಶುಭಕಾರ್ಯ ಮುಗಿಸಿ, ಕೊಟಗಿನಾಳ್ ನಿಂದ ಮೆಟ್ರಿಗೆ ಹೋಗುವಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಲಕ್ಷ್ಮಣ್ ಮತ್ತು ಜ್ಯೋತಿ ದಂಪತಿಗೆ ದಿವ್ಯ ಮತ್ತು ಸೃಷ್ಟಿ ಎಂಬ ಮಕ್ಕಳಿದ್ದರು. ದಿವ್ಯ ಪ್ರಾಣ ಕಳೆದುಕೊಂಡಿದ್ದು, ಸೃಷ್ಟಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಗಾಯಾಳು ಲಕ್ಷ್ಮಣ್ ಮತ್ತು ಸೃಷ್ಟಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಸ್ಥಳೀಯರು ಪ್ರಾರ್ಥನೆ ಮಾಡಿದ್ದಾರೆ.

ಇನ್ನು, ಅಪಘಾತದ ವಿಚಾರ ತಿಳಿಯುತ್ತಿದ್ದಂತೆಯೇ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಗುರುರಾಜ್ ಕಟ್ಟಿಮನಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಘಟನೆಯ ಸ್ಥಳ ಪರಿಶೀಲಿಸಿ ಅಪಘಾತಕ್ಕೆ ಕಾರಣ ತಿಳಿದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೂ ಅಪಘಾತ

ಬೆಂಗಳೂರು ಮೈಸೂರು ರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ಸ್ಕೂಟರ್‍‌ಗೆ ಲಾರಿ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಸ್ಕೂಟಿಯಲ್ಲಿದ್ದ ಇಬ್ಬರು ಮಹಿಳೆಯರು ಪ್ರಾಣಕಳೆದುಕೊಂಡಿದ್ದಾರೆ. ಸಿಂಧುಶ್ರೀ (29), ವಿದ್ಯಾ (19) ಮೃತದುರ್ದೈವಿಗಳು. ಮಧ್ಯಾಹ್ನ 3:30ರ ಸುಮಾರಿಗೆ ದೀಪಾಂಜಲಿ ಮೆಟ್ರೋ ನಿಲ್ಧಾಣ ಬಳಿ ಘಟನೆ ನಡೆದಿದೆ. ಅಪಘಾತವೆಸಗಿ ಲಾರಿ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಬ್ಯಾಟರಾಯನಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಂಚಾರಿ ಪೊಲೀಸರು ಲಾರಿಯನ್ನ ಸೀಜ್ ಮಾಡಿದ್ದಾರೆ.

ಇನ್ನೊಂದು ನೋವಿನ ವಿಚಾರ ಏನೆಂದರೆ.. ಮೃತ ಸಿಂಧುಶ್ರೀ ಇನ್ನು ನಾಲ್ಕು ದಿನ ಕಳೆದರೆ ಮದುವೆ ಆಗಬೇಕಿತ್ತು. ಸೋಮವಾರ ಆಕೆಯ ಮದುವೆ ನಿಶ್ಚಯವಾಗಿತ್ತು. ಮದುವೆ ಪತ್ರಿಗೆ ಕೊಡಲು ಕತ್ರಿಗುಪ್ಪೆ ಕಡೆಗೆ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅತ್ತೆ ಮಗಳು ವಿದ್ಯಾ ಜೊತೆ ಸಿಂಧುಶ್ರೀ ತೆರಳುತ್ತಿದ್ದಳು ಎಂದು ತಿಳಿದುಬಂದಿದೆ.

PREV
Read more Articles on
click me!

Recommended Stories

ಬೆಂಗಳೂರಿನಿಂದ ಹಂಪಿ ಪ್ರವಾಸಕ್ಕೆ ಹೋಗೋರಿಗೆ 'ವೋಲ್ವೋ' ಬಸ್ ಸೇವೆ ಆರಂಭಿಸಿದ KSRTC: ವೇಳಾಪಟ್ಟಿ ಇಲ್ಲಿದೆ
ಹಾಕಿ ದಂತಕಥೆ ಸೋಮಯ್ಯ ಬೆಂಗಳೂರು ಮನೆಯಲ್ಲಿ ಚಿನ್ನದ ಪದಕ ಕದ್ದವರ ಬಂಧನ, ರಾಜಾಜಿನಗರದ ಪ್ರಸಿದ್ಧ ಗೋಲ್ಡ್ ಅಂಗಡಿಗೆ ಮಾರಿದ ಕಳ್ಳರು!