ಹಿರಿಯ ಮುತ್ಸದ್ಧಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ/ ಶಂಕರಮೂರ್ತಿ ಆರೋಗ್ಯ ವಿಚಾರಿಸಿದ ಪ್ರಧಾನಿ/ ಲಾಕ್ ಡೌನ್ ಸಮಯ ಹೇಗೆ ವಿನಿಯೋಗ ಮಾಡುತ್ತಿದ್ದೀರಿ ಎಂದು ಪ್ರಶ್ನೆ/ ಅನುಭವ ಧಾರೆ ಎರೆಯಲು ಸಲಹೆ
ಶಿವಮೊಗ್ಗ (ಏ. 23) ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಹಿರಿಯ ರಾಜಕಾರಣಿ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಹೇಗೆ ಸಮಯ ಕಳೆಯುತ್ತಿದ್ದೀರಿ ಎಂದು ಮೋದಿ ಕೇಳಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದು, ಫೋನ್ ಮೂಲಕವೇ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿಗೆ ಶಂಕರಮೂರ್ತಿ ಮಾಹಿತಿ ನೀಡಿದ್ದಾರೆ.
ಕೊರೋನಾ ನಿರ್ವಹಣೆ, ಜಗವೇ ಮೆಚ್ಚಿತು ನರೇಂದ್ರ ಮೋದಿಯ
ಆರೋಗ್ಯ ಕಾಪಾಡಿಕೊಳ್ಳುವಂತೆ ಮೋದಿ ಶಂಕರಮೂರ್ತಿ ಅವರಿಗೆ ಸಲಹೆ ನೀಡಿದ್ದಾರೆ. ನಿಮ್ಮ ರಾಜಕೀಯ ಅನುಭವ ಹಾಗೂ ಪಕ್ಷ ಸಂಘಟನೆಯ ಅನುಭವ ಬೇರೆಯವರಿಗೂ ತಿಳಿಸಿ ಎಂದು ಹೇಳಿದ್ದಾರೆ.
ಒಂದೂವರೆ ನಿಮಿಷಗಳ ಕಾಲ ಶಂಕರಮೂರ್ತಿ ಅವರೊಂದಿಗೆ ದೂರವಾಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕರಮೂರ್ತಿ ಅವರೊಂದಿಗೆ ಮಾತನಾಡಿದ್ದಾರೆ.