ಆಶಾ ಕಾರ್ಯಕರ್ತೆಯರಿಗೆ ಸೌದಿ ಕರೆನ್ಸಿ ಹಂಚಿದ ಜಮೀರ್‌: ವೈರಲ್‌

By Kannadaprabha NewsFirst Published Feb 28, 2023, 7:37 AM IST
Highlights

ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ 500 ರಿಯಾಲ್‌ ಮುಖಬೆಲೆಯ ನೋಟುಗಳನ್ನು ವಿತರಿಸಿದ ಜಮೀರ್‌ ಅಹಮದ್‌. ಹಣ ಹಂಚಿಕೆ ಮಾಡಿರುವುದಕ್ಕೆ  ತರಾಟೆ ತೆಗೆದುಕೊಂಡ ನೆಟ್ಟಿಗರು. 

ಬೆಂಗಳೂರು(ಫೆ.28): ಚಾಮರಾಜ ಪೇಟೆಯಲ್ಲಿ ಶಾಸಕ ಜಮೀರ್‌ ಅಹಮದ್‌ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಕರೆನ್ಸಿ ಹಂಚಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಗೋರಿಪಾಳ್ಯದ ಅಂಚೆ ಕಚೇರಿ ಮುಂದೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಮ್ರಾ ಯಾತ್ರೆಗೆ ತೆರಳಲಿರುವ ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ಜಮೀರ್‌ ಅಹಮದ್‌ ಅವರು 500 ರಿಯಾಲ್‌ ಮುಖಬೆಲೆಯ ನೋಟುಗಳನ್ನು ವಿತರಿಸಿದ್ದು ಇದಕ್ಕೆ ಸುಮಾರು ಭಾರತೀಯ ರುಪಾಯಿಯಲ್ಲಿ 12 ಸಾವಿರ ಮೌಲ್ಯವಿದೆ. ಹಣ ಹಂಚಿಕೆ ಮಾಡಿರುವುದಕ್ಕೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕರು, ಆಶಾ ಕಾರ್ಯಕರ್ತೆಯರು ಉಮ್ರಾಗೆ ತೆರಳುತ್ತಿದ್ದರು. ಆದ್ದರಿಂದ ತಲಾ 500 ರಿಯಾಲ್‌ ಹಂಚಿದ್ದೇನೆ. ಸೌದಿಯಲ್ಲಿ ಇದನ್ನು ಬದಲಿಸಿಕೊಳ್ಳುವಂತೆ ವಿವರಣೆ ನೀಡಿದ್ದೇನೆ. ಹಣ ಹಂಚಿದ್ದರಿಂದ ಯಾವುದೇ ಕಾನೂನು ತೊಡಕು ಉಂಟಾಗುವುದಿಲ್ಲ ಎಂದು ಸಮರ್ಥಿಸಿಕೊಂಡರು.

Assembly election:ಮುಸ್ಲಿಮರ ಮತಬೇಟೆಗೆ ಸಿದ್ದುಗೆ ಸಾಥ್ ಕೊಡ್ತಿಲ್ವಾ ಜಮೀರ್‌ ಅಹಮದ್‌ ಖಾನ್?

ಜನಾಭಿಪ್ರಾಯ ಈ ಬಾರಿ ಕಾಂಗ್ರೆಸ್‌ ಪರವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಉಚಿತ ಅಕ್ಕಿ ಸೇರಿದಂತೆ ನೀಡಿದ ಜನಪರ ಯೋಜನೆಗಳನ್ನು ಜನರು ನೆನಪು ಮಾಡಿಕೊಳ್ಳುತ್ತಿದ್ದಾರೆ. 2018ರಲ್ಲಿ ಕಾಂಗ್ರೆಸ್‌ಗೆ ಮತ ನೀಡದೇ ತಪ್ಪು ಮಾಡಿದ್ದೇವೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು 120 ಸ್ಥಾನವಲ್ಲ, 150 ಸ್ಥಾನ ಪಡೆಯುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಗೆ ದುಡ್ಡು ಮಾಡುವ ಅವಸರ

ಬಿಜೆಪಿಯವರಿಗೆ ದುಡ್ಡು ಮಾಡುವ ಅವಸರವಿದೆ. ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಒಂದೊಂದು ಕ್ಷೇತ್ರದಲ್ಲೂ ನೂರು ಕೋಟಿ ರು. ಖರ್ಚು ಮಾಡಿದರೂ ಬಿಜೆಪಿ ಜಯಗಳಿಸುವುದಿಲ್ಲ. ದುಡ್ಡಿನ ಆಧಾರದಲ್ಲಿ ಚುನಾವಣೆ ನಡೆಯುವುದಿಲ್ಲ. ಮುಸ್ಲಿಂರಿಗೆ ಮತ ನೀಡಬೇಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ನೀಡಿದ್ದಾರೆ. ಯತ್ನಾಳ್‌ಗೆ ಮುಸ್ಲಿಮರು ಮತ ನೀಡುವುದಿಲ್ಲ. ಹಾಗಾಗಿ ಹೀಗೆ ಹೇಳುತ್ತಿದ್ದಾರೆ ಎಂದು ಜಮೀರ್‌ ತಿರುಗೇಟು ನೀಡಿದರು.

click me!