ಚಿತ್ರದುರ್ಗ: ಅಸ್ಥಿಪಂಜರಗಳ ವಿಡಿಯೋ 2 ತಿಂಗಳ ಮೊದಲೇ ಶೂಟ್‌ ಆಗಿತ್ತು..!

By Kannadaprabha NewsFirst Published Dec 31, 2023, 8:33 AM IST
Highlights

ಮನೆಯಲ್ಲಿ ಅಸ್ಥಿಪಂಜರಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆಟ ವಾಡುವ ಮಕ್ಕಳು ಅಸ್ಥಿಪಂಜರಗಳನ್ನು ಎಣಿಸುತ್ತ ಕೊಠಡಿ ಹಾಗೂ ಹಾಲ್‌ನಲ್ಲಿ ಅಡ್ಡಾಡುವ ದೃಶ್ಯಗಳ ವಿಡಿಯೋ ಅದಾಗಿದ್ದು, ಟ್ಯೂನ್‌ವೊಂದನ್ನು ಸೇರಿಸಿ ಹರಿಬಿಡಲಾಗಿದೆ. 2 ತಿಂಗಳಿಗೂ ಮೊದಲೇ ಈ ವಿಡಿಯೋ ಮಾಡಲಾಗಿದೆ ಎನ್ನಲಾಗಿದೆ. ಕೆಂಪು ಟೀ ಶರ್ಟ್ ಹಾಕಿರುವ ಬಾಲಕನೊಬ್ಬ ಮಾತ್ರ ವಿಡಿಯೋದಲ್ಲಿ ಕಾಣಿಸುತ್ತಿದ್ದಾನೆ.

ಚಿತ್ರದುರ್ಗ(ಡಿ.31):  ಚಿತ್ರದುರ್ಗ ಹೊರವಲಯ ಜೈಲು ರಸ್ತೆಯಲ್ಲಿನಪಾಳುಬಿದ್ದ ಮನೆಯಲ್ಲಿ 5 ಅಸ್ಥಿಪಂಜರಗಳಿದ್ದ ಸಂಗತಿ 2 ತಿಂಗಳ ಹಿಂದೆಯೇ ಒಂದಷ್ಟು ಹುಡುಗರ ಗಮನಕ್ಕೆ ಬಂದಿತ್ತೆಂಬ ಕುತೂಹಲಕರ ವಿದ್ಯಮಾನ ಶನಿವಾರ ಬಯಲಾಗಿದೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಮೃತಪಟ್ಟವರ ಅಸ್ಥಿಪಂಜರ ಇದಾಗಿದ್ದು, ಬಡಾವಣೆ ಠಾಣೆ ಪೊಲೀಸರು ಗಮನಿಸಿ ಅಸ್ಥಿಪಂಜರಗಳನ್ನು ಮರಣೋತ್ತರ ಪರೀಕ್ಷೆಗೆ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಗೆ ಕಳುಸಿದ್ದರು.

ಏತನ್ಮಧ್ಯೆ ಮನೆಯಲ್ಲಿ ಅಸ್ಥಿಪಂಜರಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆಟ ವಾಡುವ ಮಕ್ಕಳು ಅಸ್ಥಿಪಂಜರಗಳನ್ನು ಎಣಿಸುತ್ತ ಕೊಠಡಿ ಹಾಗೂ ಹಾಲ್‌ನಲ್ಲಿ ಅಡ್ಡಾಡುವ ದೃಶ್ಯಗಳ ವಿಡಿಯೋ ಅದಾಗಿದ್ದು, ಟ್ಯೂನ್‌ವೊಂದನ್ನು ಸೇರಿಸಿ ಹರಿಬಿಡಲಾಗಿದೆ. 2 ತಿಂಗಳಿಗೂ ಮೊದಲೇ ಈ ವಿಡಿಯೋ ಮಾಡಲಾಗಿದೆ ಎನ್ನಲಾಗಿದೆ. ಕೆಂಪು ಟೀ ಶರ್ಟ್ ಹಾಕಿರುವ ಬಾಲಕನೊಬ್ಬ ಮಾತ್ರ ವಿಡಿಯೋದಲ್ಲಿ ಕಾಣಿಸುತ್ತಿದ್ದಾನೆ.

Latest Videos

ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ಮೂರು ನಿಗೂಢ ಅಸ್ಥಿಪಂಜರ ಪತ್ತೆ

ಈ ಹುಡುಗರು ಯಾರು?: ಅವರು ಹೇಗೆ ಮನೆಯೊಳಗೆ

ಪ್ರವೇಶ ಮಾಡಿದರು? ಎಂಬ ಪ್ರಶ್ನೆಗಳು ಇದೀಗ ಸುಳಿ ದಾಡಿವೆ. ವಿಡಿಯೋ ಸಾಮಾಜಿಕ ಜಾಲತಾಣಗಳಿಗೆ ಎಲ್ಲಿಂದ ಅಪ್ ಲೋಡ್ ಆಯ್ತು ಎಂಬ ಬಗ್ಗೆ ಸೈಬರ್‌ ಕ್ರೈಂ ಪೋಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಅಂತ್ಯಕ್ರಿಯೆ: ಬಸವೇಶ್ವರ ವೈದ್ಯಕೀಯ ಕಾಲೇಜು

ಆಸ್ಪತ್ರೆಯಲ್ಲಿದ್ದ ಅಸ್ಥಿಪಂಜರಗಳ ಮರಣೋತ್ತರ ಪರೀಕ್ಷೆ ಶನಿವಾರ ಸಂಜೆ ಪೂರ್ಣಗೊಳಿಸಲಾಗಿದ್ದು, ಅಂತ್ಯ ಸಂಸ್ಕಾ ರಕ್ಕೆ ಸಂಬಂಧಿಸಿ ಪೊಲೀಸರು ಜಗನ್ನಾಥ ರೆಡ್ಡಿ ಅವರ ಸಂಬಂಧಿಕರ ಅಭಿಪ್ರಾಯ ಕೇಳಿದ್ದಾರೆ. ರೆಡ್ಡಿ ಸಮುದಾಯದ ಪ್ರಕಾರ ಶವಗಳಿಗೆ ಅಗ್ನಿ ಸ್ಪರ್ಶ ಮಾಡಬೇಕು. ಆದರೆ ಈ ಪ್ರಕರಣದಲ್ಲಿ ಅಗ್ನಿ ಸ್ಪರ್ಶ ಮಾಡಲು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಆಕ್ಷೇಪಣೆ ಮಾಡಿದ್ದು, ಮತ್ತೆ ಅಸ್ಥಿ ಪಂಜರವನ್ನು ಮರು ಪರೀಕ್ಷೆ ಮಾಡುವ ಅನಿವಾರ್ಯತೆ ಬೀಳಬಹುದು. ಹಾಗಾಗಿ ಮಣ್ಣು ಮಾಡಿದರೆ ಸೂಕ್ತ ಎಂದಿದ್ದಾರೆ. ಅದರಂತೆ ಜೋಗಿ ಮಟ್ಟಿ ರಸ್ತೆಯಲ್ಲಿರುವ ರುದ್ರ ಭೂಮಿಯಲ್ಲಿ ಶನಿವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇನ್ನೆರಡು ದಿನಗಳಲ್ಲಿ ಸಾವಿನ ನಿಖರ ಕಾರಣ ತಿಳಿಯುವ ನಿರೀಕ್ಷೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

click me!