ಕನ್ನಡದಲ್ಲಿಯೇ ಮಾತನಾಡಿದ ಉಪರಾಷ್ಟ್ರಪತಿ

By Web DeskFirst Published Aug 29, 2018, 8:42 PM IST
Highlights

ಎರಡು, ಮೂರು ನಿಮಿಷಗಳವರೆಗೆ ಸುತ್ತೂರು ಶ್ರೀಕ್ಷೇತ್ರದ ಕುರಿತಾಗಿ ಕನ್ನಡದಲ್ಲಿಯೇ ಮಾತನಾಡಿದರು. ಬಳಿಕ ಇಂಗ್ಲಿಷ್‌ನಲ್ಲಿ ಮುಂದುವರೆಸಿದರು. 

ಮೈಸೂರು[ಆ.29]: ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಸುತ್ತೂರಿನಲ್ಲಿ ಮಂಗಳವಾರ ನಡೆದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ 103ನೇ ಜಯಂತಿ ಮಹೋತ್ಸವದಲ್ಲಿ  ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. 

ಅವರು ಎರಡು, ಮೂರು ನಿಮಿಷಗಳವರೆಗೆ ಸುತ್ತೂರು ಶ್ರೀಕ್ಷೇತ್ರದ ಕುರಿತಾಗಿ ಕನ್ನಡದಲ್ಲಿಯೇ ಮಾತನಾಡಿದರು. ಬಳಿಕ ಇಂಗ್ಲಿಷ್‌ನಲ್ಲಿ ಮುಂದುವರೆಸಿದರು. ನನಗೆ ಕನ್ನಡ ಮಾತನಾಡಲು ಬರುವುದಿಲ್ಲ, ಅರ್ಥವಾಗುತ್ತದೆ. ಆದ್ದರಿಂದ ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ ಎಂದರು. ನಡುವೆ ಹಿಂದಿಯನ್ನು ಬಳಸಿದರು. ವೆಂಕಯ್ಯ ನಾಯ್ಡು ಅವರು ಕರ್ನಾಟಕದಿಂದ 2 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

click me!