ಮಳೆಯಲ್ಲೇ ಹಂಪಿ ಬೈ ನೈಟ್‌ ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

Kannadaprabha News   | Asianet News
Published : Aug 23, 2021, 01:52 PM ISTUpdated : Aug 23, 2021, 02:00 PM IST
ಮಳೆಯಲ್ಲೇ ಹಂಪಿ ಬೈ ನೈಟ್‌ ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಸಾರಾಂಶ

*  ವಿಜಯನಗರ ಸಾಮ್ರಾಜ್ಯದ ಇತಿಹಾಸ ಪ್ರಸ್ತುತಪಡಿಸುವಿಕೆ *  ಧ್ವನಿ ಬೆಳಕಿನ ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಉಪರಾಷ್ಟ್ರಪತಿ *  ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರಿಗೆ ಸನ್ಮಾನ   

ಹೊಸಪೇಟೆ(ಆ.23):  ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಮತ್ತು ಅವರ ಕುಟುಂಬದವರು ಹಂಪಿಯ ಎದುರು ಬಸವಣ್ಣ ಮಂಟಪದ ಎದುರು ಹಂಪಿ ಬೈ ನೈಟ್‌ ಕಾರ್ಯಕ್ರಮವನ್ನು ಶನಿವಾರ ರಾತ್ರಿ ವೀಕ್ಷಿಸಿದರು.

ಉಪರಾಷ್ಟ್ರಪತಿ ಸಂಜೆ 7.20ಕ್ಕೆ ಆಗಮಿಸಿ ತಮಗೆ ವ್ಯವಸ್ಥೆ ಮಾಡಲಾಗಿದ್ದ ಆಸನದಲ್ಲಿ ಕುಳಿತುಕೊಳ್ಳುತ್ತಲೇ ಮಳೆ ಶುರುವಾಯಿತು. ಉಪರಾಷ್ಟ್ರಪತಿ, ಅವರ ಪತ್ನಿ ಎಂ. ಉಷಾ ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತಾ ಸಿಬ್ಬಂದಿ ಛತ್ರಿ ಹಿಡಿದರು.

ಹಂಪಿ ಬೈ ನೈಟ್‌:

ವಿಜಯನಗರ ಸಾಮ್ರಾಜ್ಯದ ಇತಿಹಾಸ ಪ್ರಸ್ತುತಪಡಿಸುವಿಕೆ, ತ್ರೇತಾಯುಗ, ದ್ವಾಪರಯುಗ, ವಾಲಿ-ಸುಗ್ರೀವ ಕದನ, ಕಿಷ್ಕಿಂದಾ ಕಾಂಡ, ಮಾತಂಗ ಮುನಿ, ಸತ್ಯಹರಿಶ್ಚಂದ್ರ, ಪಂಪಾ ವಿರೂಪಾಕ್ಷೇಶ್ವರ ಇತಿಹಾಸ ಸಾರುವ ಸುಮಾರು 30 ನಿಮಿಷಗಳ ಧ್ವನಿ ಬೆಳಕಿನ ಕಾರ್ಯಕ್ರಮ ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದರು. ಮಳೆ ಬಿರುಸಾಗುತ್ತಲೇ ಕುಟುಂಬದ ಸದಸ್ಯರು ಕಾರಿನೊಳಗೆ ಕುಳಿತು ಹಂಪಿ ಬೈ ನೈಟ್‌ ವೀಕ್ಷಿಸಿದರು.

ಬೆಂಗಳೂರಿನ HAL ಬಳಿಕ ತುಂಗಭದ್ರಾ ಅಣೆಕಟ್ಟಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ!

ಕಾರ್ಯಕ್ರಮದ ಆರಂಭದಿಂದ ಕೊನೆ ವರೆಗೆ ಮಳೆ ಸುರಿಯುತ್ತಲೇ ಇತ್ತು. ಆದರೂ ಮಳೆಯಲ್ಲೇ ವೆಂಕಯ್ಯ ನಾಯ್ಡು ಕಾರ್ಯಕ್ರಮ ವೀಕ್ಷಿಸಿದರು. ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್‌, ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ, ಎಎಸ್ಪಿ ಬಿ.ಎನ್‌. ಲಾವಣ್ಯ ಮತ್ತಿತರರಿದ್ದರು.

ಇದಕ್ಕೂ ಮುನ್ನ ಮಯೂರ ಭುವನೇಶ್ವರಿ ಹೋಟೆಲ್‌ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ವೇಳೆ ಆಗಮಿಸಿದ ಸಚಿವ ಬಿ. ಶ್ರೀರಾಮುಲು ಹಾಗೂ ಮಾಜಿ ಸಂಸದರಾದ ಸಣ್ಣ ಫಕ್ಕೀರಪ್ಪ, ಜೆ. ಶಾಂತಾ ಮತ್ತು ಮಾಜಿ ಶಾಸಕ ಸುರೇಶ ಬಾಬು ಅವರು ಉಪರಾಷ್ಟ್ರಪತಿ ಅವರನ್ನು ಸನ್ಮಾನಿಸಿದರು.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!