ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು?: ಪ್ರಾಣಿಗಳು ಸತ್ತರೆ ಮರಣೋತ್ತರ ಪರೀಕ್ಷೆ ಹೇಗೆ?

By Govindaraj S  |  First Published Dec 22, 2024, 7:32 PM IST

ಇದು ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಅರಣ್ಯ.ಇಲ್ಲಿ ಪ್ರಾಣಿಗಳು ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಲು ಬೇರೆ ಜಿಲ್ಲೆಯ ಅಥವಾ ಬಂಡೀಪುರದ ವೈದ್ಯರ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿಯಿದೆ. 
 


ವರದಿ: ಪುಟ್ಟರಾಜು. ಆರ್.ಸಿ.ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಡಿ.22): ಇದು ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಅರಣ್ಯ.ಇಲ್ಲಿ ಪ್ರಾಣಿಗಳು ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಲು ಬೇರೆ ಜಿಲ್ಲೆಯ ಅಥವಾ ಬಂಡೀಪುರದ ವೈದ್ಯರ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿಯಿದೆ. ಹೊರಗುತ್ತಿಗೆ ಆಧಾರದ ಮೇಲೆ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು ಕೊಟ್ಟರು ಕೂಡ ಯಾರೂ ಬರ್ತಿಲ್ವಂತೆ, ಇದು ಯಾವ ಹುಲಿ ಸಂರಕ್ಷಿತಾರಣ್ಯದ ಕಥೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ. ಹೌದು ಇದು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಕಥೆ. ರಾಜ್ಯದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒಂದಾಗಿದೆ. 

Tap to resize

Latest Videos

undefined

ಹುಲಿ, ಚಿರತೆ, ಆನೆ ಸೇರಿ ಹಲವು ಜೀವ ವೈಶಿಷ್ಟ್ಯಗಳ ತಾಣವಾಗಿದೆ. ಇಂತಹ ಪ್ರಸಿದ್ದ ಹುಲಿ ಸಂರಕ್ಷಿತ ಅರಣ್ಯದಲ್ಲೂ ಕೂಡ ಪಶು ವೈದ್ಯರ ಕೊರತೆಯಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದಲ್ಲೂ ಕೂಡ ಒಂದೊಂದು ಹುಲಿ ಸಂರಕದಷಿತಾರಣ್ಯಕ್ಕೂ ಕೂಡ ವೈದ್ಯರಿರಬೇಕು ಎಂಬ ನಿಯಮವಿದೆ. ಆದ್ರೆ ಈ ಹುಲಿ ಸಂರಕ್ಷಿತ ಅರಣ್ಯದಲ್ಲಿ ಪಶು ವೈದ್ಯರ ಕಳೆದ ಎಂಟು ತಿಂಗಳಿಂದ ಖಾಲಿ ಇದೆ. ಹುಲಿ ಸೇರಿ ಇತರೆ ಪ್ರಾಣಿಗಳು ಸತ್ತರೆ  ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಲೇಬೇಕು. ಸ್ವಾಭಾವಿಕವಾಗಿ ಸಾವನ್ನಪ್ಪಿದೆಯಾ ಅಥವಾ ಯಾರಾದರೂ ಬೇಟೆ, ದುಷ್ಕೃತ್ಯಗಳಿಂದ ಸಾವಾಗಿದೆಯಾ ಎಂಬ ಮಾಹಿತಿ ಪಡೆಯುವುದು ಅವಶ್ಯಕವಾಗಿದೆ. 

ಅಲ್ಲದೇ ಪ್ರಾಣಿಗಳು ಗಾಯಗೊಂಡರೆ ಅಂತಹ ಪ್ರಾಣಿಗಳ ಮೇಲೆ ನಿಗಾ ವಹಿಸಿ ಸೂಕ್ತ ಚಿಕಿತ್ಸೆ ಕೊಡುವುದು ಅರಣ್ಯ ಇಲಾಖೆಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಾದರೂ ಕೂಡ ಕೂಡ ಅರಣ್ಯ ಪ್ರದೇಶಕ್ಕೆ ಪಶು ವೈದ್ಯರ ಅವಶ್ಯಕತೆಯಿದೆ. ಇನ್ನೂ ಪಶು ವೈದ್ಯರ ಹುದ್ದೆ ಖಾಲಿ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ್ರೆ ಈಗಾಗಲೇ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲೂ ಪಶು ವೈದ್ಯರ ನೇಮಕಾತಿಗೆ ಜಾಹೀರಾತು ಕೊಟ್ಟಿದ್ಧೆವೆ. ಆದ್ರೆ ಇಲ್ಲಿಯವರೆಗೂ ಕೂಡ ಯಾವುದೇ ಪಶು ವೈದ್ಯರು ಕೂಡ ಬಂದಿಲ್ಲ ಅಂತಿದ್ದಾರೆ..

ಗೃಹ ಆರೋಗ್ಯ ಯೋಜನೆ ಫೆಬ್ರವರಿಯಲ್ಲಿ ರಾಜ್ಯವ್ಯಾಪಿ ವಿಸ್ತರಣೆ: ಸಚಿವ ದಿನೇಶ್ ಗುಂಡೂರಾವ್

ಒಟ್ನಲ್ಲಿ ಕಾಡಿನಲ್ಲಿ ಪ್ರಾಣಿಗಳ ಹಿತರಕ್ಷಣೆಯ ದೃಷ್ಟಿಯಿಂದಲೂ ಕೂಡ ಪಶು ವೈದ್ಯರ ಅಗತ್ಯತೆ ಸಾಕಷ್ಟಿದೆ. ಯಾವುದೇ ಪ್ರಾಣಿ ಗಾಯಗೊಂಡರು ಚಿಕಿತ್ಸೆ ಕೊಡುವುದು ಮುಖ್ಯ, ಹಾಗೆ ಸತ್ತ ಪ್ರಾಣಿಯ ಮರಣೋತ್ತರ ಪರೀಕ್ಷೆ ನಡೆಸುವುದು ಮುಖ್ಯ.ಪ್ರತಿ ಬಾರಿಯೂ ಕೂಡ ಬಂಡೀಪುರ ಅಥವಾ ಬೇರೆಡೆಯಿಂದ ಬರುವ ಪಶಿ ವೈದ್ಯರಿಗಾಗಿ ಕಾಯಲೂ ಸಾಧ್ಯವಿಲ್ಲದ ಸಂಗತಿ. ಅಧಿಕಾರಿಗಳು ಶೀಘ್ರದಲ್ಲಿಯೇ ಪಶು ವೈದ್ಯರನ್ನು ನೇಮಿಸಿಕೊಳ್ಳಲಿ ಎಂಬುದೇ ವನ್ಯ ಪ್ರಿಯರ ಆಶಯ.

click me!