Bagalkot: ಹಿರಿಯ ಕಾಂಗ್ರೆಸ್ಸಿಗ ಎಚ್‌.ಬಿ.ಪಾಟೀಲ ನಿಧನ

By Suvarna NewsFirst Published Feb 2, 2022, 7:41 AM IST
Highlights

*  ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ
*  ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಪಾಟೀಲ್‌
*  ಪಾಟೀಲರ ನಿಧನಕ್ಕೆ ಗಣ್ಯರ ಸಂತಾಪ
 

ಬಾಗಲಕೋಟೆ(ಫೆ.02): ಹಿರಿಯ ಕಾಂಗ್ರೆಸಿಗ(Congress), ಬಾಗಲಕೋಟೆ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಚ್.ಬಿ.ಪಾಟೀಲ(HB Patil) (80) ಹೃದಯಾಘಾತದಿಂದ(Heart Attack) ಬಾಗಲಕೋಟೆಯಲ್ಲಿಮಂಗಳವಾರ ಸಂಜೆ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಐವರು ಪುತ್ರಿಯರು ಇದ್ದಾರೆ. 

ಮೃತರ ಅಂತ್ಯಕ್ರಿಯೆ(Funeral) ಬಾದಾಮಿ(Badami) ತಾಲೂಕಿನ ರೆಡ್ಡೇರ ತಿಮ್ಮಾಪುರದಲ್ಲಿ ಇಂದು(ಬುಧವಾರ) ಮಧ್ಯಾಹ್ನ ನಡೆಯಲಿದೆ. 1942ರಲ್ಲಿ ರಡ್ಡೇರ ತಿಮ್ಮಾಪುರ ಗ್ರಾಮದಲ್ಲಿ ಜನಿಸಿದ್ದ ಎಚ್.ಬಿ.ಪಾಟೀಲ ಸ್ನಾತಕೋತ್ತರ ಪದವಿಧರರು ಜೊತೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ದೆಹಲಿಯಲ್ಲಿ ಸಾರ್ವಜನಿಕ ಆಡಳಿತದ ಕುರಿತು ಅಧ್ಯಯನ ನಡೆಸಿದ್ದರು. ಬಾಗಲಕೋಟೆ ನೂಲಿನ ಗಿರಣಿಯ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸಿದ್ದ ಎಚ್.ಬಿ.ಪಾಟೀಲ 1984ರಲ್ಲಿ ಬಾಗಲಕೋಟೆ ಲೋಕ ಸಭಾ ಕ್ಷೇತ್ರದ ಸದಸ್ಯರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು, 1989ರಲ್ಲಿ ನಡೆದ ಬಾಗಲಕೋಟೆ(Bagalkot) ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

Latest Videos

Vijayapura: ಮುದ್ದೇಬಿಹಾಳ ಮಾಜಿ ಶಾಸಕ ಎಂ.ಎಂ. ಸಜ್ಜನ ಇನ್ನಿಲ್ಲ

ಗಣ್ಯರ ಶೋಕ:

ಎಚ್.ಬಿ.ಪಾಟೀಲ ಅವರ ನಿಧನಕ್ಕೆ ಸಚಿವ ಗೋವಿಂದ ಕಾರಜೋಳ,  ಮಾಜಿ ಸಂಸದ ಆರ್.ಎಸ್.ಪಾಟೀಲ, ಅಜಯಕುಮಾರ ಸರನಾಯಕ, ವಿಪ ಸದಸ್ಯರಾದ ಆರ್.ಬಿ.ತಿಮ್ಮಾಪೂರ, ಪಿ. ಎಚ್.ಪೂಜಾರ, ಮಾಜಿ ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ. ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ಸಾಮಾಜಿಕ ಹೋರಾಟಗಾರ ಘನಶ್ಯಾಮ ಭಾಂಡಗೆ, ಕಾಂಗ್ರೆಸ್ ಮುಖಂಡರಾದ ಆನಂದ ಜಿಗಜಿನ್ನಿ, ನಾಗರಾಜ ಹದ್ಲಿ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.
ಎಚ್.ಬಿ.ಪಾಟೀಲ 1984ರಲ್ಲಿ ಬಾಗಲಕೋಟೆ ಲೋಕ ಸಭಾ ಕ್ಷೇತ್ರದ ಸದಸ್ಯರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು, 1989ರಲ್ಲಿ ನಡೆದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು

ಕಳಚಿದ ಸಮಾಜವಾದದ ಕೊಂಡಿ ಮಾಜಿ ಸಂಸದ ಎಚ್‌ಬಿಪಾ

ಕೆರೂರ(Kerur):  ಸಮೀಪದ ರಡ್ಡೇರ ತಿಮ್ಮಾಪುರ ಗ್ರಾಮದ ಹಿರಿಯ ಕಾಂಗ್ರೆಸ್ ನಾಯಕ ಬಾಗಲಕೋಟೆಯ ಮಾಜಿ ಸಂಸದ ರಾಜಕಾರಣದ ಅಜಾತಶತ್ರು ಎಂದೆ ಕರೆಯಲ್ಪಡುತ್ತಿದ್ದ ಮುತ್ಸದ್ಧಿ ರಾಜಕಾರಣಿ ಎಚ್.ಬಿ.ಪಾಟೀಲ ಮಂಗಳವಾರ ನಿಧನರಾದರು. 1984 ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾಗಿ 5 ವರ್ಷಗಳ ಕಾಲ ಸಂಸದರಾಗಿ ಸರ್ಕಾರದ ವಿವಿಧ ಸಂಸದೀಯ ಸಮಿತಿಗಳಲ್ಲಿ ಜನಪರ ಸೇವೆ ಸಲ್ಲಿಸಿದ್ದರು. ಜ್ಯಾತ್ಯಾತೀತ ಸಿದ್ಧಾಂತದ ಪ್ರಬಲ ಪ್ರತಿಪಾದಕರಾಗಿದ್ದ ಇವರು ಸುನಗದ ಮಾಜಿ ಸಂಸದ ಎಸ್.ಬಿ.ಪಾಟೀಲರ ಗರಡಿಯಲ್ಲಿ ಪಳಗಿ ರಾಜಕೀಯದ ಕಡೆ ಪ್ರೇರಿತರಾಗಿದ್ದರು. ಅವರ ಅಗಲಿಕೆಯಿಂದ ಸಮಾಜವಾ ದದ ಕೊಂಡಿಯೊಂದು ಕಳಚಿದಂತಾಗಿದೆ.

Kolar: ಶ್ರೀಪಾದರಾಜ ಮಠದ ಕೇಶವನಿಧಿ ಶ್ರೀ ವಿಧಿವಶ

ಬಾಲ್ಯ ಶಿಕ್ಷಣ: 

1942 ಮಾ.29 ರಂದು ರಡ್ಡೇರ ತಿಮ್ಮಾಪುರ ಗ್ರಾಮದಲ್ಲಿ ಜನಿಸಿದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ರಾಮದುರ್ಗ, ಬಾಗಲಕೋಟನಲ್ಲಿ ಮುಗಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ರಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತಂದೆಯ ಅಕಾಲಿಕ ಮರಣದಿಂದ ಮುಧೋಳದ ಮಾಲೋಜಿರಾವ ಮಾಧ್ಯಮಿಕ ಶಾಲೆಯಲ್ಲಿ ಒಂದು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ರಾಜಕೀಯ ಪ್ರವೇಶ: 

ಬಾದಾಮಿ ತಾಲೂಕು ಬೋರ್ಡ್‌ಗೆ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಮುಂದಡಿಯಿಟ್ಟ ಇವರು ಬಾಗಲಕೋಟೆ ಸಹಕಾರ ನೂಲಿನ ಗಿರಣಿಯ ಚೇರಮನ್‌ರಾಗಿ 3 ವರ್ಷದ ಅವಧಿಯಲ್ಲಿ ಒಂದು ಪಾಳಿಯ 6000 ಸ್ಪಿಂಡಲ್‌ನಷ್ಟಿದ್ದ ಉತ್ಪಾದನೆಯನ್ನು 25000 ಸ್ಪಿಂಡಲಗಳ 3 ಪಾಳಿಯವರೆಗೆ ಉತ್ಪಾದನೆಯನ್ನು ವಿಸ್ತಿರಿಸಿ ಕಾರ್ಮಿಕರಿಗೆ ವೇತನ ಹೆಚ್ಚಿಸಿ ಅನುಕೂಲಗಳನ್ನು ಒದಗಿಸಿ ಜನಪ್ರಿಯತೆ ಗಳಿಸಿದರು. ನಂದಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಪರವಾನಿಗೆ ಕೊಡಿಸಿ ರೈತರ ಪ್ರೀತಿಗೆ ಪಾತ್ರರಾದರು. ಕರ್ನಾಟಕ ರಾಜ್ಯದ ಸಹಕಾರ ನೂಲಿನ ಗಿರಣಿಗಳ ಮಹಾಮಂಡಳದ ಮೊದಲ ಅಧ್ಯಕ್ಷರಾದರು ಮುಂದೆ ಅಖಿಲ ಭಾರತ ಮಹಾಮಂಡಳದ ಗೌರ್ನಿಂಗ್ ಕೌನ್ಸಿಲ್‌ಗೆ ಚುನಾಯಿತರಾಗಿ ಖಾದಿಕ್ಷೇತ್ರಕ್ಕೆ ಕಾಯಕಲ್ಪ ನೀಡಿದ ಗಾಂಧಿವಾದಿ ಇನ್ನೂ ನೆನಪು ಮಾತ್ರ.

 

click me!