ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ಪ್ರಕಾಶ ಹಾಗೂ ಅದೇ ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ ಹೂಗಾರ್ ನಡುವೆ ಸಂಭಾಷಣೆ ಭಾರಿ ವೈರಲ್ ಆಗಿದೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಜ.24): ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ಪ್ರಕಾಶ ಹಾಗೂ ಅದೇ ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ ಹೂಗಾರ್ ನಡುವೆ ಸಂಭಾಷಣೆ ಭಾರಿ ವೈರಲ್ ಆಗಿದೆ.
undefined
ಆಡಳಿತ ವೈಧ್ಯಾದಿಕಾರಿಯಾಗಿ ಕೆಳಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಇದು ಒಬ್ಬ ಜವಾಬ್ದಾರಿಯುತ ಅಧಿಕಾರಿಯ ಕರ್ತವ್ಯ. ಆದ್ರೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ಪ್ರಕಾಶ ತನ್ನ ಕೆಳಹಂತದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.
PM Narendra Modi: ಇಂದು ಕೊಡೇಕಲ್ ಗ್ರಾಮಕ್ಕೆ ಪ್ರಧಾನಿ ಮೋದಿ ಆಗಮನ; ಜಿಲ್ಲಾಧಿಕಾರಿ ಸ್ನೇಹಲ್ ಸುದ್ದಿಗೋಷ್ಠಿ
ಡಾ.ಪ್ರಕಾಶರಿಂದ ದಿನಾಲು ಕಿರುಕುಳಕ್ಕೆ ಒಳಗಾದ ಅಧಿಕಾರಿಗಳು ಇದೀಗ ಆತನ ವಿರುದ್ಧ ಪ್ರತಿಭಟಿಸಿ ಡಿಹೆಚ್ಒ ಹಾಗೂ ಟಿಹೆಚ್ಒ ಗೆ ದೂರು ನೀಡಿದ್ದಾರೆ.
ಡಾ.ಪ್ರಕಾಶ ಒಬ್ಬ ಆಡಳಿತಾಧಿಕಾರಿಯಾಗಿ ಕೆಳಹಂತದ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸಾರ್ವಜನಿಕ ವಲಯಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಒಂದು ಕೆಲಸದ ವಿಚಾರಕ್ಕೆ ಈ ರೀತಿಯ ಅವಾಚ್ಯ ಶಬ್ದ ಬಳಸಿ ಬೈಯುವುದು, ಕೆಳಹಂತದ ಅಧಿಕಾರಿಯೊಂದಿಗೆ ದರ್ಪ ತೋರುತ್ತಿರುವುದು ಎಷ್ಟರ ಮಟ್ಟಿಗೆ ಸರಿ..? ಕೆಲಸ ಮಾಡು ಇಲ್ಲಂದ್ರೆ ರಾಜೀನಾಮೆ ನೀಡು ಎಂದು ಬೆದರಿಕೆ ಹಾಕಿರುವುದು ವೈದ್ಯಾಧಿಕಾರಿಯ ದರ್ಪದ ದರ್ಶನ ತೆರೆದಿಟ್ಟಂತಾಗಿದೆ.
ನಿತ್ಯ ಕಿರುಕುಳ: ಬೇಸತ್ತ ಸಿಬ್ಬಂದಿ
ಕಲ್ಲದೇವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೇಲೆ ಆಡಳಿತ ವೈದ್ಯಾಧಿಕಾರಿ ನಿತ್ಯ ಅವಾಚ್ಯ ಪದ ಬಳಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ದಿಢೀರನೇ ತಮ್ಮ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದ್ರು.
ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರಕಾಶ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದ ಬಳಸಿ ನಿಂದಿಸುತ್ತಾನಂತೆ. ಇನ್ನು ಇವರ ಮಾತು ಕೇಳದಿದ್ದರೆ ಅಂತಹ ಸಿಬ್ಬಂದಿ ವೇತನವನ್ನು ತಡೆ ಹಿಡಿದು ವಿನಾಕಾರಣ ಅವರಿಗೆ ಹಿಂಸೆ ನೀಡುತ್ತಾನೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ವೈದ್ಯಾಧಿಕಾರಿ ಡಾ.ಪ್ರಕಾಶ ವಿರುದ್ದ ದೂರು
ಡಾ.ಪ್ರಕಾಶನ ನಿತ್ಯ ಕಿರುಕುಳಕ್ಕೆ ಬೇಸತ್ತ ಆಸ್ಪತ್ರೆ ಸಿಬ್ಬಂದಿ ಆತನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅವಾಚ್ಯ ಪದ ಬಳಸಿ ನಿಂದಿಸಿ ಸಿಬ್ಬಂದಿ ಮಾನಸಿಕ ಕಿರುಕುಳ ನೀಡುತ್ತಿರುವ ವೈದ್ಯಾಧಿಕಾರಿ ಡಾ. ಪ್ರಕಾಶನನ್ನು ಆರೋಗ್ಯ ಕೇಂದ್ರದಿಂದ ವರ್ಗಾವಣೆ ಗೊಳಿಸಬೇಕು. ಇಲ್ಲದೇ ಹೋದಲ್ಲಿ ಸಿಬ್ಬಂದಿ ಸಾಮೂಹಿಕವಾಗಿ ವರ್ಗಾವಣೆಗೊಳಿಸುವುದರ ಜೊತೆಗೆ
ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತ ಸಿಬ್ಬಂದಿಗಳು ಆಗ್ರಹಿಸಿದ್ರು.
ಆಸೆಯಿರುವ ಹಿರಿಯರನ್ನೇ ಸಚಿವರನ್ನಾಗಿಸಿ: ಶಾಸಕ ರಾಜೂಗೌಡ
ವಿಷಯ ತಿಳಿಯುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಸುರಪುರ ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ವಿ. ನಾಯಕ, ಸಿಬ್ಬಂದಿ ಮನವಿ ಸ್ವೀಕರಿಸಿ ಮಾತನಾಡಿ, ವೈದ್ಯಾಧಿಕಾರಿ ಡಾ. ಪ್ರಕಾಶ ಅವರ ಮೇಲೆ ಸಾರ್ವಜನಿಕರಿಂದಲೂ ದೂರುಗಳು ಬಂದಿದ್ದು, ಈ ಕುರಿತು ಡಿಹೆಚ್ಒ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.