ಚಾಲಕನಿಗೆ ನಿದ್ದೆ ಮಂಪರು: ಪಿಕಪ್ ಸೇತುವೆಗೆ ಡಿಕ್ಕಿ

Kannadaprabha News   | Asianet News
Published : Mar 04, 2020, 10:29 AM IST
ಚಾಲಕನಿಗೆ ನಿದ್ದೆ ಮಂಪರು: ಪಿಕಪ್ ಸೇತುವೆಗೆ ಡಿಕ್ಕಿ

ಸಾರಾಂಶ

ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್‌ ವಾಹನವೊಂದು ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಗ್ಗೆ ಉಳ್ಳಾಲ ತಲಪಾಡಿ ಬಳಿಯ ಕೆ.ಸಿ.ರೋಡು-ಉಚ್ಚಿಲ ಸೇತುವೆಯಲ್ಲಿ ನಡೆದಿದೆ.  

ಮಂಗಳೂರು(ಮಾ.04): ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್‌ ವಾಹನವೊಂದು ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಗ್ಗೆ ಉಳ್ಳಾಲ ತಲಪಾಡಿ ಬಳಿಯ ಕೆ.ಸಿ.ರೋಡು-ಉಚ್ಚಿಲ ಸೇತುವೆಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಬಳಿಯ ಕೆ.ಸಿ.ರೋಡ್‌-ಉಚ್ಚಿಲ ನಡುವೆ ಈ ಘಟನೆ ನಡೆದಿದ್ದು, ಡಿಕ್ಕಿ ಹೊಡೆದ ವಾಹನ ಸೇತುವೆ ಮೇಲೆ ನಿಂತ ಕಾರಣದಿಂದ ಅದೃಷ್ಟಶವಾತ್‌ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕ ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ.

ಸ್ವಚ್ಛ ಭಾರತ್ ಯೋಜನೆಗೆ ಕೊಟ್ಟ ಕೋಟಿ ಕೋಟಿ ಹಣ ದುರ್ಬಳಕೆ

ಸೇತುವೆ ಕೆಳಗೆ ಹಲವು ಅಡಿಗಳಷ್ಟುಆಳವಿರುವ ಕಾರಣ ಒಂದು ವೇಳೆ ವಾಹನ ಕೆಳಗೆ ಬಿದ್ದಿದ್ದರೆ ದುರಂತ ನಡೆಯುವ ಸಂಭವ ಅಧಿಕವಾಗಿತ್ತು. ಮಂಗಳೂರು ನಾಗುರಿ ಸಂಚಾರಿ ಠಾಣಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?