Shivamogga Karnataka Sangha ಕರ್ನಾಟಕ ಸಂಘದಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ

By Suvarna News  |  First Published Jan 23, 2022, 6:28 PM IST

* ಕರ್ನಾಟಕ ಸಂಘದಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ
* ಲೇಖಕರಿಂದ ಮತ್ತು ಪ್ರಕಾಶಕರಿಂದ ಕೆಳಕಂಡ ನಿಯಮಗಳಿಗೆ ಒಳಪಟ್ಟಂತೆ ಕೃತಿಗಳಿಗೆ ಆಹ್ವಾನ
* ಮರುಮುದ್ರಣಗೊಂಡ ಕೃತಿಗಳಿಗೆ, ಹಸ್ತ ಪ್ರತಿಗಳಿಗೆ ಮತ್ತು ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ


ಶಿವಮೊಗ್ಗ, (ಜ.23): ಪ್ರತಿ ವರ್ಷದಂತೆ ಶಿವಮೊಗ್ಗ ಕರ್ನಾಟಕ ಸಂಘವು (Shivamogga Karnataka Sangh) 2021ನೇ ಸಾಲಿನಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನವನ್ನು (Book Prize ) ನೀಡಲು ಲೇಖಕರಿಂದ ಮತ್ತು ಪ್ರಕಾಶಕರಿಂದ ಕೆಳಕಂಡ ನಿಯಮಗಳಿಗೆ ಒಳಪಟ್ಟಂತೆ ಕೃತಿಗಳನ್ನು ಆಹ್ವಾನಿಸುತ್ತಿದೆ.

ಮರುಮುದ್ರಣಗೊಂಡ ಕೃತಿಗಳಿಗೆ, ಹಸ್ತ ಪ್ರತಿಗಳಿಗೆ ಮತ್ತು ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಈ ಹಿಂದೆ ಕರ್ನಾಟಕ ಸಂಘದ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ, ಇನ್ನಿತರೆ ಯಾವುದೇ ವಿಭಾಗಕ್ಕೆ ಸ್ಪರ್ಧಿಸಬಹುದು.

Tap to resize

Latest Videos

undefined

Sahitya Akademi Award: ಕನ್ನಡದ ಮೂವರು ಲೇಖಕರಿಗೆ ಒಲಿದ ಪ್ರಶಸ್ತಿ

ಕರ್ನಾಟಕ ಸಂಘದ ಸದಸ್ಯರು ಭಾಗವಹಿಸುವಂತಿಲ್ಲ. ಪುಸ್ತಕ ಬಹುಮಾನಕ್ಕೆ ಪುಸ್ತಕದ ಒಟ್ಟು ೦೪ ಪ್ರತಿಗಳನ್ನು ಕಳುಹಿಸಬೇಕು / ಬಹುಮಾನಕ್ಕೆ ಕಳುಹಿಸಿದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.

ಅಂಕಣ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಗ್ಗೆ ದಾಖಲೆ ನೀಡಬೇಕು.  ಬರಹಗಾರರು/ಪ್ರಕಾಶಕರು - ಪತ್ರದ ಮುಖೇನ ಸ್ವವಿವರ / ವಿಳಾಸ / ಮೊಬೈಲ್ ನಂ. ಮತ್ತು ಯಾವ   ಪ್ರಕಾರಕ್ಕೆ ಸಲ್ಲಿಸುತ್ತಿರುವುದು ಎಂಬ ಬಗ್ಗೆ ವಿವರವನ್ನು ಕಳುಹಿಸಬೇಕು.

ಒಂದು ಪ್ರಕಾರಕ್ಕೆ ಕನಿಷ್ಠ ೦೫ ಕೃತಿಗಳು ಬರದಿದ್ದರೆ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ. ವಿವಿಧ ಪ್ರಕಾರಕ್ಕೆ ಪುಸ್ತಕ ಕಳಿಸಿದಲ್ಲಿ ಒಂದೊAದು ಪ್ರಕಾರಕ್ಕೂ ೦೪ ಪುಸ್ತಕಗಳು ಪ್ರತ್ಯೇಕವಾಗಿರಬೇಕು.

ಪ್ರಕಾರ                               ಇವರ ಹೆಸರಿನ ಬಹುಮಾನ          

1. ಕಾದಂಬರಿ                   ಕುವೆಂಪು

2. ಅನುವಾದ                   ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ

3. ಮಹಿಳಾ ಸಾಹಿತ್ಯ            ಶ್ರೀಮತಿ ಎಂ.ಕೆ. ಇಂದಿರಾ

4. ಮುಸ್ಲಿಂ ಬರಹಗಾರರು            ಶ್ರೀ ಪಿ. ಲಂಕೇಶ್

5. ಕವನ ಸಂಕಲನ               ಡಾ. ಜಿ. ಎಸ್. ಶಿವರುದ್ರಪ್ಪ

6. ಅಂಕಣ ಬರಹಗಾರರು          ಡಾ. ಹಾ. ಮಾ. ನಾಯಕ

7. ಸಣ್ಣ ಕಥಾ ಸಂಕಲನ            ಡಾ. ಯು. ಆರ್. ಅನಂತಮೂರ್ತಿ    

8. ನಾಟಕ                    ಡಾ. ಕೆ. ವಿ. ಸುಬ್ಬಣ್ಣ

9. ಪ್ರವಾಸ ಸಾಹಿತ್ಯ              ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತಿç

10. ವಿಜ್ಞಾನ ಸಾಹಿತ್ಯ             ಶ್ರೀ ಹಸೂಡಿ ವೆಂಕಟಶಾಸ್ತಿç

11. ಮಕ್ಕಳ ಸಾಹಿತ್ಯ              ಡಾ. ನಾ. ಡಿಸೋಜ             

12. ವೈದ್ಯ ಸಾಹಿತ್ಯ              ಡಾ. ಹೆಚ್. ಡಿ. ಚಂದ್ರಪ್ಪಗೌಡ

 ಮೇಲ್ಕಂಡ ಪ್ರಕಾರಗಳ ಸಾಹಿತ್ಯ ಕೃತಿಗಳ ನಾಲ್ಕು ಪ್ರತಿಗಳನ್ನು ಸಲ್ಲಿಸಲು ದಿನಾಂಕ 22-2-2022ರ ವರೆಗೆ ಕಾಲಾವಕಾಶವಿರುತ್ತದೆ, ನಂತರ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ಪುಸ್ತಕಗಳನ್ನು ಗೌರವ ಕಾರ್ಯದರ್ಶಿಗಳು, ಕರ್ನಾಟಕ ಸಂಘ, ಬಿ.ಹೆಚ್.ರಸ್ತೆ, ಶಿವಮೊಗ್ಗ-577201 ಇವರಿಗೆ ಅಂಚೆ/ಕೊರಿಯರ್ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು.

ಅತ್ಯುತ್ತಮವೆಂದು ಆಯ್ಕೆ ಆದ ಕೃತಿಗಳಿಗೆ ರೂ: 10,000 (ಹತ್ತು ಸಾವಿರ) ನಗದು ಬಹುಮಾನ ಮತ್ತು ಫಲಕವನ್ನು ನೀಡಿ ಗೌರವಿಸಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದು ಕರ್ನಾಟಕ ಸಂಘದ ಪರವಾಗಿ ಗೌರವ ಕಾರ್ಯದರ್ಶಿ ಪ್ರೊ. ಆಶಾಲತಾ .ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಕರ್ನಾಟಕ ಸಂಘದ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ದೂರವಾಣಿ ಸಂಖ್ಯೆ (08162-277406 /9980159696/ 9590777200  

ಮನುಷ್ಯ ಆಡುವ ಮಾತು ಆತನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂಬ ಮಾತಿದೆ. ಭಾಷೆಯ ಬೆಳವಣಿಗೆ ಮತ್ತು ಅದರ ಬಳಕೆ ನಾಗರಿಕತೆಯ ಬೆಳವಣಿಗೆಯ ಸಂಕೇತ. ಇದನ್ನು ಧ್ಯೇಯವಾಗಿಟ್ಟುಕೊಂಡು ಶಿವಮೊಗ್ಗದ ಕರ್ನಾಟಕ ಸಂಘ ಸಕ್ರಿಯವಾಗಿ ಕಳೆದ 91 ವರ್ಷಗಳಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಸಾಕಷ್ಟು ಕೆಲಸ ಮಾಡಿಕೊಂಡು ಬಂದಿದೆ.

 ರಾಜ್ಯದಾದ್ಯಂತ ವಿಶೇಷವಾಗಿ ಅವಿಭಜಿತ ಶಿವಮೊಗ್ಗ ಜಿಲ್ಲೆ ಮತ್ತು ಮಲೆನಾಡು ಪ್ರದೇಶಗಳ ಸಾಹಿತ್ಯಾಸಕ್ತರಿಗೆ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ನವೆಂಬರ್ 8, 1930 ರಂದು ರಾಷ್ಟ್ರಕವಿ ಮತ್ತು ಜ್ಞಾನಪೀಠ ಪುರಸ್ಕೃತ ಕುವೆಂಪು ಅವರಿಂದ ಉದ್ಘಾಟನೆಗೊಂಡ ಸಂಘವು ವರ್ಷವಿಡೀ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ, ಸಂವಾದ ಮತ್ತು ಉಪನ್ಯಾಸಗಳನ್ನು ಇಲ್ಲಿ ನಡೆಯುತ್ತಿರುತ್ತವೆ. ಪುಸ್ತಕಗಳನ್ನು ಪ್ರಕಟಿಸುತ್ತದೆ, ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

click me!