* ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಭಾನುವಾರದ ಭರ್ಜರಿ ಬಾಡೂಟ!
* ಜೇಮ್ಸ್’ ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಬಾಡೂಟ ನೀಡಿದ ಅಪ್ಪು ಫ್ಯಾನ್ಸ್
* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶಿವೆ ಚಿತ್ರಮಂದಿರದಲ್ಲಿ ಭರ್ಜರಿ ಬಾಡೂಟದ ವ್ಯವಸ್ಥೆ
ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ, (ಮಾ.20): ಪುನೀತ್ ರಾಜ್‌ಕುಮಾರ್ ನಿಧನವಾದ ಬಳಿಕ ಅವರ ಅಭಿಮಾನಿಗಳೆಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ಅವರ ಸ್ಮರಣೆ ಮಾಡಿಕೊಳ್ಳುತ್ತಲೆ ಬಂದಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಜೇಮ್ಸ್ ಫೀಲ್ಮಂ ಬಿಡುಗಡೆಯಾದ ಬಳಿಕವಂತೂ ಅವರ ಅಭಿಮಾನಿಗಳಿಗೆ ಪುನೀತ್ ರಾಜ್‌ಕುಮಾರ್ ರನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಮರಣೆ ಮಾಡಿಕೊಳ್ಳುತ್ತಿದ್ದಾರೆ.
ಅನೇಕ ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಪುನೀತ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಅನೇಕ ಕಡೆಗಳಲ್ಲಿ ಅನ್ನ ಸಂತರ್ಪಣೆ ಮಾಡಲಾಗಿದೆ. ಆದ್ರೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶಿವೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿದೆ. 2.25 ಕ್ವಿಂಟಾಲ್ ರೈಸ್ ತಯಾರಿಸಿ ಅಂದಾಜು 4 ಸಾವಿರ ಜನರಿಗೆ ಊಟ ಬಡಿಸಲಾಗಿದೆ. ಚಿಕನ್ ಊಟ ಸವಿದ ಅಭಿಮಾನಿಗಳು ‘ಜೇಮ್ಸ್’ ಸಿನಿಮಾ ನೋಡಿದ್ದಾರೆ.
James 2022: ರಾಜ್ಯದ ಜನತೆಗೆ ಪುನೀತ್ ರಾಜ್‌ಕುಮಾರ್ ದಿನದ ಸಂಭ್ರಮ!
*ಊಟ ಎಲ್ಲಿ, ಏಕೆ ಮತ್ತು ಏನೇನು?
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಂದು(ಭಾನುವಾರ) ಅಪ್ಪು ಅಭಿಮಾನಿಗಳು ಜೇಮ್ಸ್ ಸಿನಿಮಾ ನೋಡಲು ಬಂದವರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.ಗಂಗಾವತಿ ಶಿವೆ ಚಿತ್ರಮಂದಿರದಲ್ಲಿ ಜೇಮ್ಸ್ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಈ ಹಿನ್ನಲೆಯಲ್ಲಿ ಸಿನಿಮಾ ನೋಡಲು ಬಂದವರಿಗೆ ಅಪ್ಪು ಅಭಿಮಾನಿಗಳು ಚಿಕನ್ ಹಾಗೂ ಭಗರಖಾನ ಊಟ ಮಾಡಿಸಿದ್ದಾರೆ.
ಅಭಿಮಾನಿಗಳು ಸ್ವಂತ ಹಣದಿಂದ ಸುಮಾರು 2 ರಿಂದ 3 ಕ್ವಿಂಟಾಲ್ ಚಿಕನ್,ಎರಡುವರೆ ಕ್ವಿಂಟಾಲ್ ಭಗರಖಾನ್ ( ರೈಸ್) ಹಾಗೂ ಚಿಕನ್ ಜೊತಗೆ ದಾಲ್ಚಾ ರೆಡಿ ಮಾಡಿ ಸಿನಿಮಾ ನೋಡಲು ಬಂದವರಿಗೆ ಊಟ ಹಾಕಿದ್ದಾರೆ. ಕೇವಲ ನಾನ್ ವೆಜ್ ಹೇಳ್ತಾರೆ ಅಂದುಕೊಬೇಡಿ ಇಲ್ಲಿ ವೆಜ್ ಹಾಗೂ ನಾನ್ ವೆಜ್ ಎರಡೂ ವ್ಯವಸ್ಥೆ ಮಾಡಲಾಗಿತ್ತು.ಸುಮಾರು 4 ರಿಂದ 5 ಸಾವಿರ ಜನರಿಗೆ ಅಪ್ಪು ಅಭಿಮಾನಿಗಳು ಭರ್ಜರಿ ಬಾಡೂಟ ಹಾಕಿಸಿ ಅಪ್ಪು ಮೇಲಿನ ಅಭಿಮಾನ ಮೆರದಿದ್ದಾರೆ. ನಿನ್ನೆ(ಶನಿವಾರ) ರಾತ್ರಿ ಇಂದಲೇ ಚಿಕನ್ ರೆಡಿ ಮಾಡಿಕೊಂಡು ಆಯೋಜನರು ಸುಮಾರು ಮೂರು ಕ್ವಿಂಟಾಲ್ ನಷ್ಟು ಚಿಕನ್ ತಂದು ಚಿಕನ್ ಮಸಾಲಾ ಮಾಡಿ ಸಿನಿಮಾ ನೋಡಲು ಬಂದವರಿಗೆ ಊಟ ಹಾಕಿದ್ರು.
* ಬಾಡೂಟದ ವಿಶೇಷ......
ಇನ್ನು ಅಭಿಮಾನಿಗಳು ಚಿಕನ್ ಮಾಡಸೋದಕ್ಕೂ ಕಾರಣ ಇದೆ.ಪವರ್ ಸ್ಟಾರ್ ಪುನೀತ್ ನಾನ್ ವೆಜ್ ಪ್ರೀಯ.ಎಲ್ಲೆ ಹೋದ್ರು ಅಪ್ಪು ನಾಟಿ ಕೋಳಿ ತಿಂತಿದ್ರು,ಅವರಿಗೆ ನಾನ್ ವೆಜ್ ಅಂದ್ರೆ ಎಲ್ಲಿಲ್ಲದ ಪ್ರೀತಿ.ಅದೇ ಕಾರಣಕ್ಕೆ ಅವರ ಕಟ್ಟಾ ಫ್ಯಾನ್ಸ್ ಇಂದು ಅಪ್ಪು ಹೆಸರಲ್ಲಿ ಅವರಿಷ್ಟವಾದ ನಾನವೆಜ್ ಮಾಡಿ ಜನರಿಗೆ ಹಾಕಿದ್ದಾರೆ.ಬಾಡೂಟ ಹಾಕೋದಕ್ಕೂ ಮುಂಚೆ,ಆಯೋಜಕರು ಶಿವೆ ಚಿತ್ರಮಂದಿರದಲ್ಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಿಕನ್ ಎಡೆ ಹಿಡಿದಿದ್ದು ವಿಶೇಷವಾಗಿತ್ತು.ಜೇಮ್ಸ್ ಸಿನಿಮಾ ಗಾಗಿ ಗಂಗಾವತಿಯ ಅಪ್ಪು ಫ್ಯಾನ್ಸ್ ಒಂದಲ್ಲ ಒಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ತೀದಾರೆ.ಇಡೀ ಗಂಗಾವತಿ ನಗರ ಅಪ್ಪು ಮಯವಾಗಿದೆ.ಎಲ್ಲಿ ನೋಡಿದ್ರಲ್ಲಿ ಅಪ್ಪು ಕಟೌಟ್ ಗಳೆ,ಸಿನಿಮಾ ಬಿಡುಗಡೆ ಮುನ್ನ ರಾಜ ಬೀದಿಯಲ್ಲಿ ಅಪ್ಪು ಮೆರವಣಿಗೆ ಮಾಡಿದ್ದಾರೆ.ಇಂದು ಸುಮಾರು ಮೂರು ಲಕ್ಷ ಖರ್ಚು ಮಾಡಿ ಬಾಡೂಟ ಹಾಕಿಸಿದ್ದಾರೆ.ಜೇಮ್ಸ್ ಸಿನಿಮಾ ನೋಡಲು ಬಂದ ಜನ ಸರತಿ ಸಾಲಿನಲ್ಲಿ ನಿಂತು ಚಿಕನ್ ಸವೆದ್ರು,ಹಿರಿಯರು,ಕಿರಿಯರು,ಮಹಿಳೆಯರು ಎನ್ನದೆ ಚಿಕನ್ ರುಚಿ ನೋಡಿದ್ರು.
ಒಟ್ಟಾರೆ ಗಂಗಾವತಿಯಲ್ಲಿ ಅಪ್ಪು ಅಭಿಮಾನಿಗಳು ಕಳೆದ ಒಂದು ತಿಂಗಳಿಂದ ರಾಜರತ್ನನ ಹಬ್ಬ ಮಾಡ್ತೀದಾರೆ. ತಮ್ಮ ಮನೆ ಮಗನಂತೆ ಕಂಡ ಅಪ್ಪುಗಾಗಿ ಅಭಿಮಾನಿಗಳ ತನು ಮನ ಧನ ಅರ್ಪಿಸುತ್ತಿದ್ದಾರೆ.ಸ್ವಂತ ಖರ್ಚಿನಿಂದ ಅಭಿಮಾನಿಗಳಿಗೆ ಬಾಡೂಟ ಹಾಕಿದ ಅಪ್ಪು ಅಭಿಮಾನಿಗಳ ನಡೆ ಮೆಚ್ಚುಗೆಗೆ ಕಾರಣವಾಗಿದೆ.