ಘಟಿಕೋತ್ಸವದಲ್ಲಿ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರಿಗೆ ಅವಮಾನ

By Suvarna News  |  First Published Mar 30, 2022, 8:36 PM IST

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಂದರ್ಭದಲ್ಲಿ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರಿಗೆ ಸಭಾಭವನದ ಒಳಗೆ ಬಿಡದೆ ಯೂನಿವರ್ಸಿಟಿ ಸಿಬ್ಬಂದಿ ಉದ್ಧಟತನ ತೋರಿದ್ದಾರೆನ್ನಲಾಗಿದೆ.


ವರದಿ: ಗಿರೀಶ್ ಕುಮಾರ್, ಏಷ್ಯಾನೆಟ್ ಸುವರ್ಣನ್ಯೂಸ್ 

ಗದಗ (ಮಾ.30): ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ (Karnataka State Rural Development and Panchayat Raj University - KSRDPRU) ಘಟಿಕೋತ್ಸವ ಸಂದರ್ಭದಲ್ಲಿ ವಿರೇಶ್ವರ ಪುಣ್ಯಾಶ್ರಮದ (Veereshwara punyashrama) ಕಲ್ಲಯ್ಯಜ್ಜನವರನ್ನು ಅವಮಾನಿಸಲಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ. ಗದಗ (Gadag) ನಗರದ ಹೊರ ವಲಯದಲ್ಲಿರುವ ವಿಶ್ವವಿದ್ಯಾಲಯದ ಸಭಾ ಭವನದಲ್ಲಿ ಮಾರ್ಚ್ 30ರಂದು ಬುಧವಾರ ಘಟಿಕೋತ್ಸವ ಕಾರ್ಯಕ್ರಮ ನಡೆದಿತ್ತು.  ನಿಗದಿಯಂತೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಿತ್ತು.

Latest Videos

undefined

ಸಭೆ ಆರಂಭವಾಗಿ ಕೆಲ ನಿಮಿಷದಲ್ಲಿ ಕಲ್ಲಯ್ಯಜ್ಜನವರು (Kallayya ajja) ಶಿಷ್ಯ ಬಳಗದೊಂದಿಗೆ ಸಭಾಭವನಕ್ಕೆ ಆಗಮಿಸಿದ್ರು. ಈ ವೇಳೆ ವಿಶ್ವ ವಿದ್ಯಾಲಯದ ಸಿಬ್ಬಂದಿ ಸೆಕ್ಯೂರಿಟಿ ನೆಪವೊಡ್ಡಿ ಕಲ್ಲಯ್ಯಜ್ಜನವರನ್ನು ಸಭಾ ಭವನದ ಮುಖ್ಯ ದ್ವಾರದಲ್ಲೇ ತಡೆದಿದ್ದಾರಂತೆ. ಅಂಧರಾಗಿರೋ ಸ್ವಾಮಿಗಳನ್ನು ಕೆಲ ಹೊತ್ತು ಕಾಯುವಂತೆ ಹೇಳಿದ್ರಂತೆ. ಇದ್ರಿಂದ ಬೇಸರಗೊಂಡ ಕಲ್ಲಯ್ಯಜ್ಜನವರು ಅಲ್ಲಿಂದ ಹೊರ ಬಂದ್ರು ಎನ್ನಲಾಗ್ತಿದೆ.

ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ (Thaawar Chand Gehlot) ಅವರು ಸಂಜೆ ನಾಲ್ಕು ಗಂಟೆಗೆ ಶ್ರೀಮಠಕ್ಕೆ ಭೇಟಿ ನೀಡಲಿದ್ದರು. ಅದಕ್ಕೂ ಮುನ್ನವೇ ರಾಜ್ಯಪಾಲರನ್ನು ಭೇಟಿಯಾಗಲು ಶ್ರೀಗಳು ಬಂದಿದ್ರು. ಆದ್ರೆ, ಭೇಟಿಗೆ ಬಂದ ಶ್ರೀಗಳ ಜೊತೆ ಯೂನಿವರ್ಸಿಟಿ ಸಿಬ್ಬಂದಿ ಅನುಚಿತವಾಗಿ ವರ್ತಿಸಿದೆ ಎನ್ನಲಾಗಿದೆ‌‌.

ಅಮಿತ್ ಶಾ ಬಂದ ನಂತ್ರ ಸರಕಾರ ಬದಲಾವಣೆ ಬಗ್ಗೆ ಗೊತ್ತಾಗಲಿದೆ BS Yediyurappa

ಈ ಬಗ್ಗೆ ಮಾತ್ನಾಡಿದ ಕಲ್ಲಯ್ಯಜ್ಜನವರು ಅಲ್ಲಿ ಯಾರೂ ಅವಮಾನ ಮಾಡಿಲ್ಲ. ಕೆಲ ಹೊತ್ತು ಕಾಯುವಂತೆ ಹೇಳಿದ್ರು. ಸಮಯದ ಅಭಾವ ಇದ್ದಿದ್ದರಿಂದ ನಾನೇ ವಾಪಾಸ್ ಬಂದೆ ಅಂತಾ ಹೇಳಿಕೊಂಡಿದ್ದಾರೆ. ಇತ್ತ, ವಿಶ್ವವಿದ್ಯಾಲಯದ ಕುಲಪತಿ ವಿಷ್ಣುಕಾಂತ್ ಚಟಪಲ್ಲಿ, ಹೊರಗಡೆ ನಿಲ್ಲಿಸಿದ್ದು ತಪ್ಪು, ವಯಕ್ತಿಕವಾಗಿ ಶ್ರೀಮಠ ಹಾಗೂ ಕಲ್ಲಯ್ಯಜ್ಜನವರ ಬಗ್ಗೆ ಗೌರವ ಇದೆ. ಸೆಕ್ಯೂರಿಟಿ ಕಾರಣಕ್ಕೆ ರಾಜ್ಯಪಾಲರ ಸಿಬ್ಬಂದಿ ತಡೆದಿರಬಹುದು.. ಲೋಪ ಆಗಿದ್ದಲ್ಲಿ ಕಲ್ಲಯ್ಯಜ್ಜನವರನ್ನ ಭೇಟಿಯಾಗಿ ಕ್ಷಮೆ ಕೇಳ್ತೀನಿ ಎಂದಿದಾರೆ.

ಸ್ಥಳೀಯ ರಾಜಕೀಯ ನಾಯಕರು ಸೇರಿದಂತೆ ಅನೇಕರು ಸಭಾಭವನ್ನಕ್ಕೆ ಬಂದ್ರೂ ಅವರನ್ನ ಯಾರೂ ತಡೆದಿಲ್ಲ. ಆದ್ರೆ, ಉತ್ತರ ಕರ್ನಾಟಕದ ಹೆಮ್ಮೆ ಅಂತಾನೇ ಕರೆಯುವ ಪುಣ್ಯಾಶ್ರಮದ ಪ್ರತಿನಿಧಿಯನ್ನ ಹೊರಗೆ ನಿಲ್ಲಸಿದ್ದು ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ.

ಮುಂಬರುವ ಚುನಾವಣೆಗೆ ಕೋಡಿಹಳ್ಳಿ ಚಂದ್ರಶೇಖರ್ ನೂತನ ಪಕ್ಷ ರಚನೆ ಘೋಷಣೆ 

click me!