ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಮಾ.30): ಪ್ರತಿಯೊಬ್ಬರೂ ವಾಸಕ್ಕೊಂದು ಸ್ವಂತ ಮನೆ ನಿರ್ಮಾಣ ಮಾಡಬೇಕೆಂದು ಕನಸು ಕಾಣ್ತಾರೆ. ಹೀಗಾಗಿ ಸೈಟ್ ಗಳ ಬೆಲೆ ಗಗನಕ್ಕೇರಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಚಿತ್ರದುರ್ಗದ (Chitradurga) ರಿಯಲ್ ಎಸ್ಟೇಟ್ (Real Estate) ದಂಧೆಕೋರರು ಅರಣ್ಯ ಪ್ರದೇಶದಲ್ಲೂ ನಿಯಮ ಬಾಹಿರವಾಗಿ ಲೇಔಟ್ ನಿರ್ಮಾಣ ಮಾಡ್ತಿದ್ದಾರೆ ಎಂಬ ಅರೋಪ ಕೇಳಿ ಬಂದಿದೆ.
ಸಂರಕ್ಷಿತ ಅರಣ್ಯದ (Reserved Forest) ನಡುವೆ ಖಾಸಗಿ ಲೇಔಟ್ (Private layout) ತಲೆಯೆತ್ತುತ್ತಿದ್ದು. ಲೇಔಟ್ ನಿರ್ಮಾಣಕ್ಕಾಗಿ ರಾಜಕಾಲುವೆಯ ಸೇತುವೆ ಹಾಗೂ ಚೆಕ್ ಡ್ಯಾಂ ಅನ್ನು ದಂಧೆಕೋರರು ಮುಚ್ಚಿದ್ದಾರೆ. ಇವೆಲ್ಲ ಕಂಡುಬಂದಿರುವುದು ಕೋಟೆನಾಡು ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ. ಹಲವು ವರ್ಷಗಳಿಂದ ಗುಡ್ಡದ ನೀರೆಲ್ಲಾ ಹರಿದು, ಮಲ್ಲಾಪುರದ ಕೆರೆ ಸೇರಲು ಸಹಕಾರಿಯಾಗಿದ್ದ ಜೋಗಿಮಟ್ಟಿ ಗಿರಿಧಾಮದ ಮೊದಲ ಸೇತುವೆಯನ್ನು, ಲೇಔಟ್ ನಿರ್ಮಾಣಕ್ಕಾಗಿ ಒತ್ತುವರಿ ಮಾಡಲಾಗಿದೆ. ಈ ಸೇತುವೆ ಅಲ್ಲದೇ ಅನ್ನಪೂರ್ಣೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ನಿರ್ಮಾಣ ಮಾಡಲಾಗಿದ್ದ ಚೆಕ್ ಡ್ಯಾಮನ್ನು ಸಹ ಸಂಪೂರ್ಣ ಮುಚ್ಚಿ, ಡಬಲ್ ರೋಡ್ ನಿರ್ಮಾಣ ಮಾಡಲಾಗಿದೆ.
VIJAYAPURA: 81ರ ಇಳಿವಯಸ್ಸಲು ಸ್ನಾತ್ತಕೋತ್ತರ ಪರೀಕ್ಷೆ ಬರೆದ ಅಜ್ಜ!
ಹಾಗೆಯೇ ನಾಲ್ಕು ಎಕರೆ ವಿಸ್ತೀರ್ಣದ ಈ ಜಮೀನು ಹಸಿರು ಪಟ್ಟಿಯಲ್ಲಿದ್ದೂ, ಕೃಷಿಯೇತರ ಚಟುವಟಿಕೆಗೆ ಪರಿವರ್ತನೆಯಾಗುವ ಮುನ್ನವೇ ನಿರ್ಭಯವಾಗಿ ಲೇಔಟ್ ನಿರ್ಮಾಣ ಮಾಡಲಾಗ್ತಿದೆ. ಬಹುತೇಕ ಲೇಔಟ್ ಕಾಮಗಾರಿ ಮುಗಿಯುವ ಹಂತದಲ್ಲಿದ್ದೂ, ಈ ಅಕ್ರಮ ಕಣ್ಮುಂದೆ ನಡೆದರೂ ಸಹ ಇಡೀ ಜಿಲ್ಲಾಡಳಿತ ಜಾಣ ಕುರುಡು ಪ್ರದರ್ಶಿಸುತ್ತಿರೋದು ವಿಪರ್ಯಾಸ ವೆಂದು ಸ್ಥಳೀಯರು ಕಿಡಿಕಾರಿದ್ದಾರೆ.
ಇನ್ನು ಈ ಅಕ್ರಮ ಲೇಔಟ್ ನಿರ್ಮಾಣಕ್ಕಾಗಿ ಚಿತ್ರದುರ್ಗದ ಕಂದಾಯಗಿರಿ, ಸಾಧಿಕ್ ನಗರ, ಜಟ್ ಪಟ್ ನಗರ ಹಾಗು ಸ್ಟೇಡಿಯಂ ರಸ್ತೆಗಳಲ್ಲಿನ ಬೆಟ್ಟಗುಡ್ಡಗಳು, ರಾಜಕಾಲುವೆಗಳು, ಚೆಕ್ ಡ್ಯಾಂಗಳು ಮತ್ತು ಸೇತುವೆಗಳನ್ನು ಸಂಪೂರ್ಣ ನೆಲಸಮಗೊಳಿಸಿದ್ದಾರೆ. ಈ ಬಗ್ಗೆ ನಗರಸಭೆ ಪೌರಾಯುಕ್ತರಾದ ಹನುಮಂತರಾಜ್ ಅವರನ್ನು ಕೇಳಿದ್ರೆ, ಅನ್ನಪೂರ್ಣೇಶ್ವರಿ ದೇಗುಲದ ಬಳಿಯ ಜಮೀನು, ಲೇಔಟ್ ನಿರ್ಮಾಣಕ್ಕೆ ಅನುನೋದನೆ ಸಿಕ್ಕಿಲ್ಲ. ಈ ಬಗ್ಹೆ ದೂರುಗಳು ಸಹ ಬಂದಿವೆ ಅಂತ ಅಸಹಯಕತೆಯನ್ನು ಹೊರಹಾಕಿದ್ದೂ, ಒಂದು ವೇಳೆ ಲೇಔಟ್ ನಿರ್ಮಾಣದಲ್ಲಿ ಅಕ್ರಮ ನಡೆದಿದ್ರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸ್ತೀವೆಂದು ಭರವಸೆ ನೀಡಿದ್ದಾರೆ.
RBI RECRUITMENT 2022 : ಮ್ಯಾನೇಜರ್ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೇಮಕಾತಿ
ಒಟ್ಟಾರೆ ಬರದನಾಡಲ್ಲಿ ಅಂತರ್ಜಲ ಹೆಚ್ಚಿಸಲು ಸರ್ಕಾರ ಹರಸಾಹಸ ಪಡ್ತಿದೆ. ಆದ್ರೆ ಅಕ್ರಮ ಲೇಔಟ್ ನಿರ್ಮಾಣಕ್ಕಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಬೆಟ್ಟಗುಡ್ಡ, ಚೆಕ್ ಡ್ಯಾಂ,ಸೇತುವೆಗಳನ್ನು ರಿಯಲ್ ಎಸ್ಟೇಟ್ ದಂಧೆಕೋರರು ನೆಲಸಮಗೊಳಿಸ್ತಿರೋದು ನಾಚಿಕೆಗೇಡಿನ ಸಂಗತಿ. ಇನ್ನಾದ್ರು ಜಿಲ್ಲಾಡಳಿತ ಎಚ್ಚೆತ್ತು ಇಂತಹ ಅಕ್ರಮಲೇಔಟ್ ನಿರ್ಮಾಣಕ್ಕೆ ಬ್ರೇಕ್ ಹಾಕಬೇಕಿದೆ.