* ಬೆನ್ನಿಗೆ ಕಬ್ಬಿಣದ ಸಲಾಕೆ ಚುಚ್ಚಿಕೊಂಡು ಮೀಟರ್‌ಗಟ್ಟಲೇ ಲಾರಿ, ಟ್ರಾಕ್ಟರ್ ಎಳೆಯುವ ಭಕ್ತರು
* ಎಳೆಮಕ್ಕಳು ಬಾಯಿಗೆ ಕಬ್ಬಿಣದ ಸಲಾಕೆ ಚುಚ್ಚಿಕೊಳ್ಳುವ ವಿಶಿಷ್ಠವಾದ ಹರಿಕೆ
* ಬಿಸಿಲ ಝಳದ ನಡುವೆಯೂ ಭಕ್ತಿಯ ಪರವಶತೆ
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಏ.30): ಚಿಕ್ಕಮಗಳೂರಿನಲ್ಲಿ ಕರುಮಾರಿಯಮ್ಮ(Karumariyamma) ದೇವಿಯ ವಿಶೇಷ ಕರಗ ಮಹೋತ್ಸವ ನಡೆಯಿತು. ಇದು ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಯಿತು. ನಗರದ ಬಸವನಹಳ್ಳಿ ಕೆರೆ ಪ್ರದೇಶದಿಂದ ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಹೊರಟ ಉತ್ಸವದಲ್ಲಿ ಗಮನ ಸೆಳೆದಂತದ್ದು ಭಕ್ತಾಧಿಗಳ ಭಕ್ತಿಯ ಪರಾಕಾಷ್ಠೆಯ ದ್ಯೋತಕವಾಗಿ ನಡೆದ ಸಿಡಿ ರೂಪದ ಭಕ್ತಿಯಾರ್ಚನೆಯ ವಿಧಿವಿಧಾನ.
undefined
ಹರಕೆ ತೀರಿಸಿದ ಭಕ್ತರು
ದೇವರಿಗೆ ಹರಕೆ ಹೊತ್ತುಕೊಳ್ಳುವ ಭಕ್ತರು ಹರಕೆ ತೀರಿದ ಮೇಲೆ ನಾನಾ ರೀತಿ ಹರಕೆ ತೀರಿಸಿ ಭಕ್ತಿ ಸಮರ್ಪಿಸುತ್ತಾರೆ. ಅದೇ ರೀತಿ ಚಿಕ್ಕಮಗಳೂರು(Chikkamagaluru) ನಗರದಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ದೇಹವನ್ನ ದಂಡಿಸಿ ಭಕ್ತಿ ಸಮರ್ಪಿಸಿದ್ದಾರೆ. ಈ ಜಾತ್ರೆಯಲ್ಲಿ ಕಳೆದ ವರ್ಷ ಹರಕೆ ಹೊತ್ತಿದ್ದ ಭಕ್ತರು(Devotees) ಈ ವರ್ಷ ಬೆನ್ನಿಗೆ ಕಬ್ಬಿಣದ ಕೊಂಡಿಗಳುಳ್ಳ ಸರಪಳಿಯನ್ನ ಹಾಕಿಕೊಂಡು ಟ್ರ್ಯಾಕ್ಟರ್, ಲಾರಿ, ಕಾರು, ಆಟೋಗಳನ್ನ ಎಳೆದು ಭಕ್ತಿ ಸಮರ್ಪಿಸಿ ಹರಕೆ ತೀರಿಸಿದ್ದಾರೆ. ದೇವರಿಗೆ(God) ಉಪವಾಸವಿದ್ದು ಅಥವ ಮುಡಿ ನೀಡಿ ಅಥವ ವಿಶಿಷ್ಟ ರೀತಿಯ ಅಡುಗೆಯನ್ನ ಮಾಡಿ ದೇವರಿಗೆ ನೈವೇದ್ಯ ಮಾಡಿ ಹರಕೆ ತೀರಿಸುವುದು ಸರ್ವೇ ಸಾಮಾನ್ಯ. ವಾಡಿಕೆ. ಆದರೆ, ನಗರದ ಕರುಮಾರಿಯಮ್ಮನ ಭಕ್ತರು ಈ ಈ ರೀತಿ ದೇಹವನ್ನ ದಂಡಿಸಿ ದೇವಿಗೆ ಹರಕೆ ತೀರಿಸುತ್ತಾರೆ. ಈ ಬಾರಿ 26 ಜನರು ವಿಭಿನ್ನವಾಗಿ ತಮ್ಮ ಹರಕೆ ತೀರಿಸಿದ್ದಾರೆ. ಜಾತ್ರೆ ಹಿನ್ನೆಲೆ ಶುಕ್ರವಾರ ಬೆಳಿಗ್ಗೆ ದಂಟರಮಕ್ಕಿಯ ಕೆರೆಕೋಡಿಯಮ್ಮನ ಸನ್ನಿಧಿಯಲ್ಲಿ ಕರಗ ಪೂಜೆ ನೇರವೇರಿಸಿದರು.
Chikkamagaluru: ಭೂ ಒತ್ತುವರಿದಾರರಿಗೆ ರಿಲೀಫ್? ಗುತ್ತಿಗೆ ಆಧಾರ ಭೂಮಿ ನೀಡಲು ಮುಂದಾದ ಸರ್ಕಾರ
ನೋಡುಗರ ಎದೆ ಝೆಲ್ಲೆನಿಸಿದ ದೃಶ್ಯ
ನೋಡುಗರ ಎದೆಯನ್ನು ಝೆಲ್ಲೆನಿಸುವ ರೀತಿಯಲ್ಲಿ ಭಕ್ತರು ಬೆನ್ನಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಂಡ್ರು. ಕಳೆದ 46 ವರ್ಷಗಳಿಂದಲೂ ಆಚರಣೆ ಮಾಡಿಕೊಂಡು ಬರುತ್ತಿರುವ ಜಾತ್ರೆ ಹತ್ತು ಹಲವು ವಿಶೇಷಗಳಿಂದ ಕೂಡಿರುತ್ತೇದೆ. ಹರಕೆ ಮಾಡಿಕೊಂಡ ಹಾಗೂ ಇಷ್ಟಾರ್ಥ ಈಡೇರಿಸಿಕೊಂಡ ಭಕ್ತಾಧಿಗಳು ತಮ್ಮ ಭಕ್ತಿಯನ್ನು ಬೆನ್ನಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಂಡು ಮೀಟರ್‌ಗಟ್ಟಲೇ ದೂರದವರೆಗೆ ಲಾರಿ, ಟ್ರ್ಯಾಕ್ಟರ್, ಇತರೆ ನಾಲ್ಕು ಚಕ್ರದ ಭಾರೀ ವಾಹನಗಳನ್ನು ಎಳೆದು ಆಶ್ಚರ್ಯ ಮೂಡಿಸುತ್ತಾರೆ.ಇನ್ನು ಎಳೆ ಮಕ್ಕಳು ಬಾಯಿಗೆ ಕಬ್ಬಿಣದ ಸಲಾಕೆಯನ್ನು ಚುಚ್ಚಿಕೊಳ್ಳುವ ಮೂಲಕ ಕರುಮಾರಿಯಮ್ಮ ದೇವರಿಗೆ ಹರಿಕೆಯನ್ನು ತೀರಿಸಿದ್ದಾರೆ.
ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಸಹಾಯ, ಸಿಟಿ ರವಿ ಕೆಂಡಾಮಂಡಲ
ಬಿಸಿಲ ಝಳದ ನಡುವೆಯೂ ಭಕ್ತಿಯ ಪರವಶತೆ
ಬಿಸಿಲ ಝಳದ ನಡುವೆಯೂ ಭಕ್ತಿಯ ಪರವಶತೆಯಲ್ಲಿ ವಾಹನ ಎಳೆಯುತ್ತಿದ್ದವರನ್ನು ಸುತ್ತಲೂ ನೆರೆದಿದ್ದ ಸಾವಿರಾರು ಭಕ್ತಾಧಿಗಳು ದೈವಸ್ತುತಿ ಮೂಲಕ ಹುರಿದುಂಬಿಸಿ ಭಕ್ತಿಯಾರ್ಚನೆ ನಿರ್ವಿಘ್ನವಾಗಿ ನಡೆಯುವಂತಾಗಲು ಸಹಕರಿಸಿದರು. ಇನ್ನು ಕೆಲವು ಭಕ್ತಾಧಿಗಳು ತಮ್ಮ ಹರಕೆಗಳನ್ನು ಬಾಯಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಳ್ಳುವ ಮೂಲಕ ತೀರಿಸಿದರು.ತರುವಾಯ ಭಕ್ತಾಧಿಗಳು ದೇವಸ್ಥಾನ ಪ್ರವೇಶಿಸಿ ಅಂತಿಮ ವಿಧಿವಿಧಾನ ಪೂರೈಸಿದರು.
ಒಟ್ಟಾರೆ ಚಿಕ್ಕಮಗಳೂರಿನ ತಮಿಳು ಕಾಲೋನಿಯಲ್ಲಿ(Tamil Colony) ನಡೆಯುವ ಕರುಮಾರಿಯಮ್ಮ ದೇವಿ ಜಾತ್ರೆ ನೋಡಗರ ಗಮನ ಸೆಳೆಯುತ್ತೇದೆ. ಎಲ್ಲಾ ಸಮುದಾಯದ ಜನರು ಕೂಡ ಜಾತ್ರೆ(Fair) ಭಾಗವಹಿಸಿತ್ತಾರೆ. ದೂರ ಊರಿನಿಂದ ಬಂದ ಭಕ್ತರು ಹರಿಕೆ ತೀರಿಸಿ, ದೇವಿ ದರ್ಶನವನ್ನು ಪಡೆಯುತ್ತಿದ್ದಾರೆ. ಜಾತ್ರೆಯಲ್ಲಿ ಭಾಗವಹಸಿದವರು ಗೋವಿಂದ ಎಂದು ಕೂಗು ಮೂಲಕ ಹರಿಕೆ ತೀರಿಸುವರಿಗೆ ಧೈರ್ಯ ತುಂಬಿದ್ದರು.