50 ವರ್ಷದ ಸವಿನೆನಪಿಗೆ ಧರ್ಮಸ್ಥಳ ಧರ್ಮಾಧಿಕಾರಿಗೆ ‘ಧರ್ಮಯಾನ’ಗ್ರಂಥ ಸಮರ್ಪಣೆ

Kannadaprabha News   | Asianet News
Published : Aug 25, 2020, 07:59 AM ISTUpdated : Aug 25, 2020, 09:21 AM IST
50 ವರ್ಷದ ಸವಿನೆನಪಿಗೆ ಧರ್ಮಸ್ಥಳ ಧರ್ಮಾಧಿಕಾರಿಗೆ ‘ಧರ್ಮಯಾನ’ಗ್ರಂಥ ಸಮರ್ಪಣೆ

ಸಾರಾಂಶ

ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಯಾಗಿ 50 ವರ್ಷ ಪೂರೈಸಿದ್ದು, ಈ ನಿಟ್ಟಿನಲ್ಲಿ ಧರ್ಮಯಾನ ಗ್ರಂಥ ಸಮರ್ಪಣೆ ಮಾಡಲಾಗಿದೆ.

ಬೆಳ್ತಂಗಡಿ (ಆ.24):  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೆಗ್ಗಡೆಯವರಾಗಿ 50 ವರ್ಷಗಳಾದ ಸವಿನೆನಪಿಗಾಗಿ, ಸುವರ್ಣ ಮಹೋತ್ಸವ ಸಮಿತಿಯಿಂದ ರಚಿಸಲಾದ ಅಭಿನಂದನಾ ಗ್ರಂಥ ‘ಧರ್ಮಯಾನ’ವನ್ನು ಆಯ್ದ ಆಮಂತ್ರಿತರ ಸಮ್ಮುಖ ಸಮಿತಿಯ ಅಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್‌ ಹೆಗ್ಗಡೆ ದಂಪತಿಗೆ ಸೋಮವಾರ ಸಮರ್ಪಿಸಿದರು.

ಸುಮಾರು 750 ಪುಟಗಳುಳ್ಳ ಧರ್ಮಯಾನ ಅಭಿನಂದನಾ ಗ್ರಂಥದಲ್ಲಿ 180 ಬಿಡಿಲೇಖನಗಳಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭ ಸಂದೇಶಗಳಿವೆ. ಹೆಗ್ಗಡೆಯವರನ್ನು ದೀರ್ಘಕಾಲ ಕಂಡ ಅನೇಕ ದಾರ್ಶನಿಕರು, ಧಾರ್ಮಿಕರು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಸ್ವಾತಂತ್ರ್ಯ ಹೋರಾಟಗಾರರು ಮುಂತಾದವರು ಗ್ರಂಥದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಕೋರ್ಟ್‌ಗಳಿಲ್ಲ, ಧರ್ಮಸ್ಥಳದ ಶ್ರೀ ಮಂಜುನಾಥನೇ ಎಲ್ಲ!..

ಈ ಬೃಹತ್‌ ಸಂಪುಟವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ವಿವೇಕ್‌ ರೈ, ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಮತ್ತು ತಾಳ್ತಜೆ ವಸಂತ ಕುಮಾರ್‌ ಅವರನ್ನೊಳಗೊಂಡ ಸಂಪಾದಕ ಮಂಡಳಿಯು ವಿಮರ್ಶಿಸಿದೆ. 1968 ರಲ್ಲಿ ಧರ್ಮಸ್ಥಳದ ಪಟ್ಟಾಧಿಕಾರಿಯಾಗಿ ಡಾ. ವೀರೇಂದ್ರ ಹೆಗ್ಗಡೆ ನಾಡಿನ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಅನನ್ಯವಾದ ಕಾಣಿಕೆಯನ್ನಿತ್ತಿದ್ದಾರೆ. 2018ರಲ್ಲಿ ಇವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಅನೇಕ ವಿನೂತನ ಕಾರ್ಯಕ್ರಮಗಳ ಬಗ್ಗೆ 23 ಪುಸ್ತಕಗಳ ಸುವರ್ಣ ಸಂಚಯ ಈಗಾಗಲೇ ಹೊರಗೆ ಬಂದಿದೆ.

ಹೆಣ್ಣು​ಮ​ರಿಗೆ ಜನ್ಮ ನೀಡಿದ ಧರ್ಮ​ಸ್ಥ​ಳದ ಆನೆ ಲಕ್ಷ್ಮೀ...

ಸಂಪುಟವನ್ನು ಸ್ವೀಕರಿಸಿದ ಧರ್ಮಾಧಿಕಾರಿ ಡಾ.ಹೆಗ್ಗಡೆ ಮಾತನಾಡಿ, ಕ್ಷೇತ್ರವು ಪರಂಪರಾನುಗತವಾಗಿ ಕಟ್ಟುಕಟ್ಟಳೆಯ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದರೂ, ಜನ ಸಾಮಾನ್ಯರೊಂದಿಗೆ ಬೆರೆತುಕೊಂಡಿದೆ. ಆದುದರಿಂದ ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ತನಗೆ ಸಾಧ್ಯವಾಯಿತು ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮ ಹಾಜರಿದ್ದರು. ಸುವರ್ಣ ಸಮಿತಿಯ ಸಂಚಾಲಕ ಶ್ರೀನಾಥ್‌ ವಂದಿಸಿದರು.

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌