ವೀರಶೈವ ಲಿಂಗಾಯತ ಸಂಘಟಿತ ಶಕ್ತಿ ಆಗಬೇಕು: ಸಚಿವ ಈಶ್ವರ ಖಂಡ್ರೆ

Published : May 04, 2025, 05:30 PM IST
ವೀರಶೈವ ಲಿಂಗಾಯತ ಸಂಘಟಿತ ಶಕ್ತಿ ಆಗಬೇಕು: ಸಚಿವ ಈಶ್ವರ ಖಂಡ್ರೆ

ಸಾರಾಂಶ

ವೀರಶೈವ ಲಿಂಗಾಯತ ಸಮುದಾಯ ಯಾಕೆ ಕವಲು ದಾರಿಯಲ್ಲಿದೆಯೆಂಬುದನ್ನು ಸ್ವಯಂ ಪ್ರೇರಿತರಾಗಿ ನಾವೇ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸಂಘಟನಾತ್ಮಕವಾಗಿ ಸಮಾಜ ಸಂಘಟಿತಸಬೇಕಾದ ತುರ್ತು ಅಗತ್ಯವಿದೆ.

ದಾವಣಗೆರೆ (ಮೇ.04): ವೀರಶೈವ ಲಿಂಗಾಯತ ಸಮುದಾಯ ಯಾಕೆ ಕವಲು ದಾರಿಯಲ್ಲಿದೆಯೆಂಬುದನ್ನು ಸ್ವಯಂ ಪ್ರೇರಿತರಾಗಿ ನಾವೇ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸಂಘಟನಾತ್ಮಕವಾಗಿ ಸಮಾಜ ಸಂಘಟಿತಸಬೇಕಾದ ತುರ್ತು ಅಗತ್ಯವಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ, ಅರಣ್ಯ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು. ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಸಭಾ ಭವನದಲ್ಲಿ ಮೂರನೇ ಬಾರಿಗೆ ಅಭಾವೀಲಿಂಮ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಯಾದ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಸಂಘಟಿಸುವ ತುರ್ತು ಅಗತ್ಯವನ್ನು ವೀರಶೈವ ಲಿಂಗಾಯತ ಸಮಾಜ ಬಾಂಧವರು ಅರಿಯಬೇಕು ಎಂದರು.

ಯಾವುದೇ ಧರ್ಮ, ಪರಂಪರೆಯು ಐತಿಹಾಸಿಕವಾಗಿ ನೋಡಿದಾಗ ಶ್ರೀಮಂತಿಕೆ ಇರಬಹುದು. ಆದರೆ, ಅದನ್ನು ವರ್ತಮಾನದಲ್ಲೂ ನಾವು ನೋಡುವ ಅಗತ್ಯವಿದೆ. ವರ್ತಮಾನದಲ್ಲಿ ನೋಡುವ ಅವಶ್ಯಕತೆ ಇದೆ. ವರ್ತಮಾನದಲ್ಲಿ ನಮ್ಮ ಸಮಾಜ ಕವಲು ದಾರಿಯಲ್ಲಿ ಸಂಘಟನೆ ಮಾಡಿಕೊಂಡು ಹೋಗಬೇಕಾದ ಕಾಲ ಈಗ ಬಂದೊದಗಿದೆ ಎಂದು ತಿಳಿಸಿದರು. ವೀರಶೈವ ಲಿಂಗಾಯತ ಒಳ ಪಂಗಡಗಳನ್ನು ಒಗ್ಗೂಡಿಸಲೆಂದೇ ಮಹಾಸಭಾ ಸ್ಥಾಪನೆಯಾಗಿದೆ. ಅಂಗೈಯಲ್ಲಿ ಲಿಂಗ ಹಿಡಿದು, ಪೂಜಿಸುವವರೇ ಲಿಂಗಾಯತರು ಎಂಬ ಮನೋಭಾವನೆಯಿಂದ ಅಂತಹವರೆಲ್ಲಾ ನಮ್ಮ ಸಮಾಜದವರೆಂದು ಒಗ್ಗೂಡಬೇಕು ಎಂದರು.

2 ಕೋಟಿ ಇದ್ದುದು ಅರ್ಧಕ್ಕಿಂತ ಕಡಿಮೆ ಹೇಗೆ: ಎಸ್ಸೆಸ್: ಸನ್ಮಾನಿತರಾದ ಮಹಾಸಭಾಗೆ ಮೂರನೇ ಬಾರಿಗೆ ಪುನರಾಯ್ಕೆಯಾದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸರ್ಕಾರ ಹಿಂದೆ ಜಾತಿ ಗಣತಿ ಕೈಗೊಂಡಾಗ 2 ಕೋಟಿ ಜನಸಂಖ್ಯೆ ಹೊಂದಿದ್ದ ನಮ್ಮ ಸಮಾಜವನ್ನು ಅದಕ್ಕಿಂತ ಅರ್ಧಕ್ಕೆ ಕಡಿಮೆ ಮಾಡಿ, ತೋರಿಸುವ ಮೂಲಕ ಅಲ್ಪಸಂಖ್ಯಾತರಾಗಿ ಮಾಡಲಾಗಿದೆ ಎಂದರು. ವೀರಶೈವ ಮಹಾಸಭಾ ಬಗ್ಗೆ ನನಗೆ ಗೊತ್ತಿರಲಿಲ್ಲ. ಸಮಾಜದ ಅಭಿವೃದ್ಧಿಗೆ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದೇನೆ. ಇನ್ನೂ ನಾಲ್ಕು ವರ್ಷ ನನ್ನ ಅಧಿಕಾರಾವದಿ ಇದ್ದು, ಮಾಡಬೇಕಾದ ಕೆಲಸ, ಕಾರ್ಯಕ್ರಮ ಪೂರ್ಣಗೊಳಿಸುತ್ತೇನೆ ಎದರು.

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ₹157 ಕೋಟಿ: ಸಚಿವ ಈಶ್ವರ ಖಂಡ್ರೆ

ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ಎಸ್.ಗಣೇಶ, ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರೇಣುಕಪ್ರಸನ್ನ, ಜಿಲ್ಲಾಧ್ಯಕ್ಷ ಐಗೂರು ಸಿ.ಚಂದ್ರಶೇಖರ, ರಾಷ್ಟ್ರೀಯ ಮಹಿಳಾ ಘಟಕದ ನೂತನ ಅಧ್ಯಕ್ಷೆ ವೀಣಾ ಕಾಶೆಪ್ಪನವರ್, ಶಾಸಕ ಡಿ.ಜಿ.ಶಾಂತನಗೌಡ, ಡಾ.ಎಚ್.ಎಸ್.ಮಂಜುನಾಥ ಕುರ್ಕಿ, ಚಿಂತಕ ಚಟ್ನಹಳ್ಳಿ ಮಹೇಶ, ಎಸ್.ಜಿ.ಉಳುವಯ್ಯ, ತಾಲೂಕು ಅಧ್ಯಕ್ಷ ಶಂಭು ಎಸ್.ಉರೇಕೊಂಡಿ, ಶಶಿಕಲಾ ಮೂರ್ತಿ, ನಿರ್ಮಲಾ ಸುಭಾಷ್, ಪುಷ್ಪಾ ವಾಲಿ, ಇತರರು ಇದ್ದರು.

PREV
Read more Articles on
click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!