ಪ್ರೇಮಿಗಳ ದಿನ: ಕುದುರೆಗಳಿಗೆ ಮದುವೆ ಮಾಡಿಸಿದ ವಾಟಾಳ್‌

By Kannadaprabha NewsFirst Published Feb 15, 2020, 10:39 AM IST
Highlights

ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಪ್ರೇಮಿಗಳ ದಿನವನ್ನು ಸದಾ ಸ್ವಾಗತಿಸುತ್ತಾರೆ. ಕಬ್ಬನ್‌ ಪಾರ್ಕ್ ಮತ್ತಿತರ ಕಡೆ ಪ್ರೇಮಿಗಳಿಗೆ ಗುಲಾಬಿ ಕೊಟ್ಟು ಶುಭಾಶಯಗಳನ್ನು ಕೋರುತ್ತಾರೆ. ಈ ಬಾರಿ ಏನು ಮಾಡಿದ್ರು ನೀವೇ ಓದಿ.

ಬೆಂಗಳೂರು(ಫೆ.15): ಉದ್ಯಾನ ನಗರಿಯಲ್ಲಿ ಶುಕ್ರವಾರ ಪ್ರೇಮಿಗಳ ದಿನದ ಸಂಭ್ರಮ. ಯುವ ಜೋಡಿಗಳು, ನವ ದಂಪತಿ, ಮಧ್ಯವಯಸ್ಕರು, ಹಿರಿಯ ಜೀವಿಗಳು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಪ್ರೇಮಿಗಳ ನಗರದ ಹಾಟ್‌ಸ್ಟಾಪ್‌ಗಳಾದ ಲಾಲ್‌ಬಾಗ್‌, ಕಬ್ಬನ್‌ಪಾಕ್‌ಗಳಲ್ಲಿ ಯುವ ಜೋಡಿಗಳು ಪರಸ್ಪರ ಗುಲಾಬಿ ನೀಡಿ, ಕೇಕ್‌ ಕತ್ತರಿಸಿ ಬಾಯಿ ಸಿಹಿ ಮಾಡಿಕೊಂಡು ಪ್ರೇಮಿಗಳ ದಿನವನ್ನು ಸಂಭ್ರಮಿಸಿದರು. ಇನ್ನು ಕೆಲವರು ಹೋಟೆಲ್‌ಗಳಿಗೆ ತೆರಳಿ ರುಚಿಯಾದ ಔತಣ ಸವಿದರು. ಪಾರ್ಕ್ಗಳಲ್ಲಿ ಸುತ್ತಾಡಿ ಮಾಲ್‌ಗಳಲ್ಲಿ ಇಷ್ಟವಾದ ಉಡುಗೊರೆಗಳನ್ನು ಖರೀದಿಸಿದ್ದಾರೆ.

ಕುದುರೆಗಳಿಗೆ ಮದುವೆ ಮಾಡಿಸಿದ ವಾಟಾಳ್‌

ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಪ್ರೇಮಿಗಳ ದಿನವನ್ನು ಸದಾ ಸ್ವಾಗತಿಸುತ್ತಾರೆ. ಕಬ್ಬನ್‌ ಪಾರ್ಕ್ ಮತ್ತಿತರ ಕಡೆ ಪ್ರೇಮಿಗಳಿಗೆ ಗುಲಾಬಿ ಕೊಟ್ಟು ಶುಭಾಶಯಗಳನ್ನು ಕೋರುತ್ತಾರೆ. ಅದೇ ರೀತಿ ಶುಕ್ರವಾರ ನಗರದಲ್ಲಿ ಪ್ರೇಮಿಗಳ ದಿನದ ಅಂಗವಾಗಿ ರಾಜ ಎಂಬ ಗಂಡು ಕುದುರೆ - ರಾಣಿ ಎಂಬ ಹೆಣ್ಣು ಕುದುರೆಗೆ ಶಾಸ್ತೊ್ರೕಕ್ತವಾಗಿ ಮದುವೆ ಮಾಡಿಸಿ ಪ್ರೇಮಿಗಳ ದಿನವನ್ನು ಬೆಂಬಲಿಸಿದ್ದು, ಎಲ್ಲರ ಗಮನ ಸೆಳೆದಿತ್ತು.

ಹಫ್ತಾ ನೀಡದ್ದಕ್ಕೆ ಹಲ್ಲೆ ಮಾಡಿದ ಪೇದೆ ಅಮಾನತು

ಪ್ರೀತಿ​ಸು​ವುದು ತಪ್ಪಲ್ಲ. ಪ್ರೇಮಿ​ಗಳ ರಕ್ಷ​ಣೆ​ಗಾಗಿ ಸರ್ಕಾರ ಕಾನೂನು ತರಬೇ​ಕು. ಪ್ರೇಮಿ​ಗಳ ದಿನಾ​ಚ​ರ​ಣೆ ಸರ್ಕಾ​ರವೇ ಆಚ​ರಿ​ಸ​ಬೇ​ಕು. ಪ್ರೇಮಿಗಳಿಗೆ ರಾಜ್ಯ ಸರ್ಕಾರ 50 ಸಾವಿರ, ಕೇಂದ್ರ ಸರ್ಕಾರ 1 ಲಕ್ಷ ಕೊಡ​ಬೇಕು ಎಂದು ಈ ವೇಳೆ ವಾಟಾಳ್‌ ಒತ್ತಾಯಿಸಿದರು.

click me!