ನಗರದ ಬೈಪಾಸ್ ರಸ್ತೆಯಲ್ಲಿ ಬರುವ 2 ಮತ್ತು 3ನೇ ವಾರ್ಡ್‌ನಲ್ಲಿ ಈವರೆಗೂ 11.59 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಚಿಕ್ಕಮಗಳೂರು (ಡಿ.25) : ನಗರದ ಬೈಪಾಸ್ ರಸ್ತೆಯಲ್ಲಿ ಬರುವ 2 ಮತ್ತು 3ನೇ ವಾರ್ಡ್‌ನಲ್ಲಿ ಈವರೆಗೂ 11.59 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ನಗರದ ಬೈಪಾಸ್ ರಸ್ತೆಯ ನೀರಿನ ಟ್ಯಾಂಕ್ ಸಮೀಪದ ಚೇತನ ಶಾಲೆಯ ಆವರಣದಲ್ಲಿ ಶುಕ್ರವಾರ ಸಂಜೆ ಸಾರ್ವಜನಿಕರ ಬಳಿಗೆ ನಗರಸಭೆ ಎಂಬ ಶೀರ್ಷಿಕೆಯಡಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ನಗರ ವ್ಯಾಪ್ತಿಗೆ ಬರುವ 32 ವಾರ್ಡ್‌ಗಳಿಗೆ ಹೋಲಿಸಿದಲ್ಲಿ ಅತ್ಯಂತ ದೊಡ್ಡ ವಾರ್ಡ್‌ಗಳಾದ 2 ಮತ್ತು 3ನೇ ವಾರ್ಡ್‌ಗಳಲ್ಲಿ ಜನರ ಸಮಸ್ಯೆಗಳು ದೊಡ್ಡದಾಗಿವೆ. ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಪಾರ್ಕ್ಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Chikkamagaluru: ಅಭಿಮಾನ ಕಳೆದುಕೊಂಡರೆ ಅಸ್ತಿತ್ವ ನಾಶ: ಸಿ.ಟಿ.ರವಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚಿಕ್ಕಮಗಳೂರು ನಗರದ ಅಭಿವೃದ್ಧಿಗೆ .70 ಕೋಟಿಗಳ ವಿಶೇಷ ಅನುದಾನ ತರಲಾಗಿದೆ. ಈ ಹಣದಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ಜೊತೆಗೆ ಅಭಿವೃದ್ಧಿಯನ್ನು ಮಾಡಲಾಗಿದೆ. ದೀಪಾ ನರ್ಸಿಂಗ್‌ಹೋಂನಿಂದ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಗೆ ಯಗಚಿ ನೀರಿನ ಸಂಪರ್ಕ ಬಂದ ನಂತರ 1 ಅಡಿಗೆ ಕೇವಲ .35 ಇದ್ದ ಭೂಮಿ ಬೆಲೆ ಈಗ .3500 ವರೆಗೂ ಬೇಡಿಕೆ ಬಂದಿದೆ. ಇಲ್ಲಿರುವ ಭೂಮಿಗೆ ಇಷ್ಟುಡಿಮ್ಯಾಂಡ್ ಬರಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೈಗೊಂಡ ಕಾಮಗಾರಿಗಳೇ ಕಾರಣ ಎಂದು ಸಿ.ಟಿ.ರವಿ ಹೇಳಿದರು.
ಕಡೂರು- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಇದರೆ ಜೊತೆಗೆ ಎಐಟಿ ಸರ್ಕಲ್‌ನಿಂದ ಹಿರೇಮಗಳೂರುವರೆಗಿನ ಬೈಪಾಸ್ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ನಗರದ ಅಭಿವೃದ್ಧಿಗೆ ಬಂದಿರುವ ವಿಶೇಷ ಅನುದಾನದಲ್ಲಿ .27 ಕೋಟಿ ವೆಚ್ಚದಲ್ಲಿ ಎಐಟಿ ಸರ್ಕಲ್‌ನಿಂದ ಹಿರೇಮಗಳೂರುವರೆಗೆ ವಿಶೇಷ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಚಿಕ್ಕಮಗಳೂರು ನಗರದ ಎಲ್ಲ 35 ವಾರ್ಡ್‌ಗಳಿಗೂ 12 ಲಕ್ಷ ಎಲ್‌ಇಡಿ ಬೀದಿದೀಪ ಅಳವಡಿಸುವ ಕೆಲಸ, ರಸ್ತೆಯ ಅಭಿವೃದ್ಧಿ, ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಠಿಯಿಂದ ನಗರದ ಎಐಟಿ ಕಾಲೇಜಿನಲ್ಲಿ ಬೃಹತ್ ಆರೋಗ್ಯ ಮೇಳ ನಡೆಸಲಾಗಿದೆ. ಇದರಲ್ಲಿ 10 ಸಾವಿರ ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. ಜನವರಿಯಲ್ಲಿ 5 ದಿನಗಳ ಕಾಲ ನಗರದಲ್ಲಿ ಚಿಕ್ಕಮಗಳೂರು ಹಬ್ಬ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಯಶಸ್ವಿಗೆ ನಗರದ ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ನಗರದ ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ವಿನಾಕಾರಣ ನಗರಸಭೆ ಕಛೇರಿಗೆ ಪದೇ ಪದೇ ಅಲಿಯುವುದನ್ನು ತಪ್ಪಿಸಲು ನಗರದ 35 ವಾರ್ಡ್‌ಗಳಲ್ಲೂ ಸಾರ್ವಜನಿಕರ ಬಳಿಗೆ ನಗರಸಭೆ ಎಂಬ ಶೀರ್ಷಿಕೆಯಡಿ ಜನಸಂಪರ್ಕ ಸಭೆ ನಡೆಯಲಿದೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ. ತಮ್ಮಯ್ಯ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಸಿಡಿಎ ಅಧ್ಯಕ್ಷ ಆನಂದ್,ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ, ನಗರಸಭೆಯ ಸದಸ್ಯರಾದ ಕವಿತಾಶೇಖರ್, ಮಧುಕುಮಾರ್‌ರಾಜ್ ಅರಸ್, ನಗರಸಭೆ ಆಯುಕ್ತ ಬಸವರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತುಷ್ಟೀಕರಣ ನೀತಿ ದೇಶದ ಭದ್ರತೆಗೆ ಮಾರಕ: ಸಿ.ಟಿ.ರವಿ
ಕೆಇಬಿ ಕೆಡಬ್ಲೂ ್ಯಡಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸ್ಥಳೀಯ ನಗರಸಭಾ ಸದಸ್ಯರ ಸಿ.ಎನ್. ಅರುಣ್‌ಕುಮಾರ್ ಸ್ವಾಗತಿಸಿದರು. ನಗರಸಭೆ ಕಂದಾಯ ನಿರೀಕ್ಷಕ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.